ದಕ್ಷಿಣ ಗಾಜಾದ ರಾಫಾದಿಂದ ಈಜಿಪ್ಟ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾದ ಭೂಗತ ಸುರಂಗ ಮಾರ್ಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಮೇ 26 ರಂದು, ರಫಾದ ಶಿಬಿರದ ಮೇಲೆ ಇಸ್ರೆಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಂತರ, ಇಂಡೋನೇಷಿಯಾದ ಫೀಲ್ಡ್ ಆಸ್ಪತ್ರೆ ಸೇರಿದಂತೆ ರಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲಿ ಸೇನೆಯು ಬಾಂಬ್ ದಾಳಿಯನ್ನು ಮುಂದುವರೆಸಿದೆ.
ಸಧ್ಯ, ಸುರಂಗ ಮಾರ್ಗದ ಚಿತ್ರವನ್ನು ಗಾಜದಿಂದ ಈಜಿಪ್ಟಿಗೆ ಸಂಪರ್ಕಿಸುವ ಸುರಂಗವನ್ನು ಇಸ್ರೆಲ್ ಪತ್ತೆ ಹಚ್ಚಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.
One of the 50 highway-sized tunnels Israel has discovered connecting Rafah with Egypt.
Now you see one of the many ways the $$$ released to Iran by Obama and then Biden …got ya! pic.twitter.com/rYjyOq8NDQ— Sherrie Mathieson (@SherrieStyle) May 20, 2024
ಫ್ಯಾಕ್ಟ್‌ಚೆಕ್: ಇದು ರಫಾ ಮತ್ತು ಈಜಿಪ್ಟ್ ಅನ್ನು ಸಂಪರ್ಕಿಸುವ ಸುರಂಗವಲ್ಲ. ಈ ಚಿತ್ರವು ಉತ್ತರ ಗಾಜಾವನ್ನು ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗವಾಗಿದೆ ಮತ್ತು ದಕ್ಷಿಣ ಗಾಜಾದ ರಾಫಾದಿಂದ 40 ಕಿಮೀ ದೂರದಲ್ಲಿದೆ.
ನಾವು Google ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಗೆಟ್ಟಿ ಚಿತ್ರಗಳು ಲಭ್ಯವಾಗಿವೆ. ಇದೇ ರೀತಿಯ ಚಿತ್ರವನ್ನು 7 ಜನವರಿ 2024 ರಂದು ಹಂಚಿಕೊಳ್ಳಲಾಗಿದೆ, ಮತ್ತು ವಿವರಣೆಯು ಹಮಾಸ್ ಗುಂಪು ನಿರ್ಮಿಸಿದ ಸುರಂಗವನ್ನು ತೋರಿಸುತ್ತದೆ ಎಂದು ಹೇಳುತ್ತದೆ, ಇದು ಉತ್ತರ ಗಾಜಾವನ್ನು ಎರೆಜ್ ಗಡಿ ದಾಟುವ ಮೂಲಕ ಇಸ್ರೇಲ್‌ಗೆ ಸಂಪರ್ಕಿಸುತ್ತದೆ.
7 ಅಕ್ಟೋಬರ್ 2023 ರಂದು ಇಸ್ರೇಲ್ ಮೇಲೆ ದಾಳಿ ಮಾಡಲು ಹಮಾಸ್ ಈ ಸುರಂಗವನ್ನು ಬಳಸಿದೆ ಎಂದು ಶಿರ್ಷಿಕೆ ನೀಡಲಾಗಿದೆ. ಈ ಫೋಟೋವನ್ನು ತೆಗೆದಿರುವವರು ನೋಮ್ ಗಲೈ.
ಈ ಸುಳಿವಿನಿಂದ, ನಾವು ಗಲೈ ಅವರ Instagram ಖಾತೆಯನ್ನು ಪರಿಶೀಲಿಸಿದಾಗ, ಅಲ್ಲಿ ಅವರು ಅದೇ ಸುರಂಗದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ಅವರು ಐಡಿಎಫ್ ಸೈನಿಕರು ಇದ್ದ ಸುರಂಗದ ಫೋಟೋಗಳನ್ನು ಸೇರಿಸಿದ್ದಾರೆ.
ಆದ್ದರಿಂದ ಉತ್ತರ ಗಾಜಾದಿಂದ ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗದ ಫೋಟೋವನ್ನು ಈಜಿಪ್ಟ್ ಅನ್ನು ಸಂಪರ್ಕಿಸುವ ರಫಾದ ಸುರಂಗದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಎಂಬುದು ಸುಳ್ಳು ಮತ್ತು ವಂಚನೆ
ವಿಡಿಯೋ ನೋಡಿ: ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.