ಕೇಂದ್ರ ಸರ್ಕಾರವು ತನ್ನ ಸಂಚಾರ್ ಸಾಥಿ ವೆಬ್ಸೈಟ್‌ನಲ್ಲಿ “ನಿಮ್ಮ ISP (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಅನ್ನು ತಿಳಿಯಿರಿ” ಸೌಲಭ್ಯದ ಮೂಲಕ ಪ್ರತಿ ಮನೆಗಳಿಗೆ ಉಚಿತ ವೈಫೈಯನ್ನು ಒದಗಿಸುತ್ತಿದೆ. ಈ ಸೌಲಭ್ಯವನ್ನು ನೀವು ಪಡೆಯಿರಿ ಮತ್ತು ಈ ಕುರಿತು ನಿಮ್ಮ ಇತರ ಸ್ನೇಹಿತರಿಗೂ ಹಂಚಿಕೊಳ್ಳಿ ಎಂದು ಇನ್‌ಸ್ಟಾಗ್ರಾಂನ ಕ್ಲಾಸಿಫೈಡ್ ಎಐ ಎಂಬ ಖಾತೆಯಿಂದ ಮಾಹಿತಿಯೊಂದನ್ನು ಹಂಚಿಕೊಳ್ಳಲಾಗಿದೆ.
ಈ ಮಾಹಿತಿಯನ್ನು ಆಧರಿಸಿ ಸಾಕಷ್ಟು ಜನ ಸಾರ್ವಜನಿಕರು ಇದು ನಿಜವಿರಬಹುದು ಎಂದು ಭಾವಿಸಿ, ಸಂಚಾರ್ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗಿದ್ದರೆ ನಿಜಕ್ಕೂ ಕೇಂದ್ರ ಸರ್ಕಾರ “ನಿಮ್ಮ ISP ತಿಳಿಯಿರಿ” ಎಂಬ ಆಯ್ಕೆಯ ಮೂಲಕ ಉಚಿತ ವೈಫೈಯನ್ನು ನೀಡುತ್ತಿದೆಯೇ ಎಂಬುದನ್ನ ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ರೀಲ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ, ಕೆಲವೊಂದು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ PIB (ಪ್ರೆಸ್ ಇನ್‌ಫಾರ್‌ಮೇಶನ್ ಬ್ಯೂರೋ) ತನ್ನ ಫ್ಯಾಕ್ಟ್‌ಚೆಕ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡುಬಂದಿದೆ. ಈ ಪೋಸ್ಟ್‌ನಲ್ಲಿ ಫ್ರೀ ವೈಫೈ ನೀಡಲಾಗುತ್ತದೆ ಎಂಬ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಸಂಚಾರ್ ಸಾತಿ ವೆಬ್‌ಸೈಟ್ ಕೇವಲ ನಾಗರಿಕರ ಇಂಟರ್ನೆಟ್ ಸರ್ವಿಸ್ ಪ್ರೊವೈಡ್ ಕುರಿತ ಮಾಹಿತಿಯನ್ನು ನೀಡಲು ಉಪಯುಕ್ತವಾಗಿದೆ ಎಂದು ತಿಳಿಸಿದೆ.
An Instagram video claims that 'Know your ISP' facility in Sanchar Saathi portal can provide users with free wifi#PIBFactCheck
✔️This video is #fake
✔️The 'Know your ISP' facility in Sanchar Saathi only facilitates citizens to check the details of Internet Service Providers pic.twitter.com/AIFH9kjL2P
— PIB Fact Check (@PIBFactCheck) May 17, 2024
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಚಾರ್ ಸಾತಿ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, ಅಲ್ಲಿ ಯಾವುದಾದರೂ ಉಚಿತ ವೈಫೈ ಯೋಜನೆ ಇದೆ ಎಂಬುದನ್ನು ಹುಡುಕಾಟ ನಡೆಸಲಾಯಿತು. ಆದರೆ ಅಂತಹ ಯಾವುದೇ ಯೋಜನೆಗಳು ಸಂಚಾರ್ ಸಾಥಿ ವೆಬ್‌ಸೈಟ್‌ನಲ್ಲಿ ಕಂಡುಬಂದಿಲ್ಲ.ಈ ಕುರಿತು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಯಾವುದಾದರೂ ವರದಿಯನ್ನು ಪ್ರಕಟಿಸಿವೆ ಅಂತಲೂ ಪರಿಶೀಲನೆ ನಡೆಸಲಾಯಿತು. ಆದರೆ ಈ ಕುರಿತು ಅಂತಹ ಯಾವುದೇ ವರದಿಗಳು ರಾಷ್ಟ್ರೀಯ ಮಾಧ್ಯಮಗಳಾಗಲಿ ಅಥವಾ ಸ್ಥಳೀಯ ಮಾಧ್ಯಮಗಳೇ ಆಗಲಿ ಪ್ರಕಟಿಸಿಲ್ಲ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರವು ಭಾರತದ ನಾಗರಿಕರಿಗೆ ಉಚಿತವಾಗಿ ವೈಫೈ ಅಳವಡಿಸಿ ಕೊಡಲಿದೆ ಎಂಬ ಪ್ರತಿಪಾದನೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಮತ್ತು ಜನಸಾಮಾನ್ಯರನ್ನ ತಪ್ಪು ದಾರಿಗೆ ಎಳೆಯುವಂತಿದೆ
ಇದನ್ನೂ ಓದಿ : ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು
ಈ ವಿಡಿಯೋ ನೋಡಿ : ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.