Fact Check | ರಾಹುಲ್ ಮತ್ತು ಸೋನಿಯಾ ಗಾಂಧಿಯ ಹಿಂದಿನ ಫೋಟೋ ಯೇಸುಕ್ರಿಸ್ತನದ್ದು ಎಂಬುದು ಸುಳ್ಳು

“ರಾಹುಲ್‌ ಗಾಂಧಿ ತಮ್ಮ ಕೊಠಡಿಯಲ್ಲಿ ಜೀಸಸ್‌ ಫೋಟೋವನ್ನು ಇಟ್ಟುಕೊಳ್ಳುತ್ತಾರೆ. ಆದರೆ ಒಂದೇ ಒಂದು ಹಿಂದೂ ದೇವರ ಫೋಟೋ ಅಲ್ಲಿ ಕಾಣಿಸುವುದಿಲ್ಲ. ಕಾಂಗ್ರೆಸ್‌ನವರಿಗೆ ಹಿಂದೂಗಳ ವೋಟ್‌ ಬೇಕು. ಆದರೆ ಅವರಿಗೆ ಹಿಂದೂಗಳು ಮತ್ತು ಹಿಂದೂಗಳ ದೇವರು ಬೇಡ” ಎಂದು ರಾಹುಲ್‌ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆಗೆದ ಫೋಟೋದಲ್ಲಿ ಕಾಣಿಸಿಕೊಂಡ ಚಿತ್ರವೊಂದನ್ನು ಉಲ್ಲೇಖಿಸಿ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದಾರೆ.

ಈ ಫೋಟೋವನ್ನು ಕಂಡ ಬಹುತೇಕ ಮಂದಿ ” ಹೌದು.. ಹಿಂಬದಿಯಲ್ಲಿರುವುದು ಏಸು ಕ್ರಿಸ್ತನದ್ದೇ ಫೋಟೋ, ರಾಹುಲ್‌ ಗಾಂದಿ ಜನಿವಾರಧಾರಿ ಬ್ರಾಹ್ಮಣ ಎಂದುಕೊಂಡು ಅವರ ನಿಜ ಮುಖವನ್ನು ಈಗ ತೋರಿಸಿದ್ದಾರೆ. ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಸಿಕ್ಕರೆ ನಾವು ಕ್ರೈಸ್ತ ಪ್ರಧಾನಿಯನ್ನು ನೋಡ ಬಹುದಾಗಿದೆ.” ಎಂದು ಟ್ವೀಟ್‌ ಕೂಡ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು ಇದಕ್ಕಾಗಿ, ವೈರಲ್‌ ಫೋಟೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ, 2017ರಲ್ಲಿ ಡೆಜಾಲ ಎಂಬ ಬ್ಲಾಗ್‌ ಪೋಸ್ಟ್‌ನಲ್ಲಿ “ನಿಕೊಲಾಯ್ ರೋರಿಚ್ ಅವರಿಂದ ಮಡೋನಾ ಒರಿಫ್ಲಾಮಾರ 1932ರ ಮೂಲ ಚಿತ್ರಕಲೆ” ಎಂಬ ಅಡಿ ಬರಹದ ಪೇಟಿಂಗ್‌ವೊಂದು ಕಂಡು ಬಂದಿತು. ಈ ಪೇಂಟಿಂಗ್‌ ಮತ್ತು ರಾಹುಲ್‌ ಗಾಂಧಿ ಅವರ ಕೊಠಡಿಯಲ್ಲಿ ಕಂಡು ಬಂದ ಚಿತ್ರದ ಪೇಂಟಿಗ್‌ಗೆ ಸಂಪೂರ್ಣವಾಗಿ ಹೋಲಿಕೆಯಾಗಿದೆ.

ಈ ಪೇಂಟಿಗ್ಸ್‌ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ” ಇದು ರಷ್ಯಾದ ವರ್ಣಚಿತ್ರಕಾರ ನಿಕೋಲಸ್ ರೋರಿಚ್ ಅವರ ‘ಮಡೋನಾ ಒರಿಫ್ಲಾಮಾ’ ಎಂಬ ಶೀರ್ಷಿಕೆಯ ಚಿತ್ರವಾಗಿದ್ದು, ಅಲ್ಲಿ ಪೇಂಟಿಂಗ್‌ನಲ್ಲಿರುವ ಮಹಿಳೆ ಶಾಂತಿಯ ಬ್ಯಾನರ್ ಅನ್ನು ಹಿಡಿದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಜಾಗತಿಕವಾಗಿಯೂ ಸಾಕಷ್ಟು ಮನ್ನಣೆ ಗಳಿಸಿದ ಪೇಂಟಿಂಗ್‌ ಆಗಿದ್ದು, ಇದನ್ನು ಕೊನೆಯದಾಗಿ 2013ರಲ್ಲಿ ವಿಕಿಆರ್ಟ್‌ ಎಂಬ ತಂಡ ನವೀಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಚಿತ್ರವನ್ನು ಅಧಿಕೃತವಾಗಿ ನ್ಯೂಯಾರ್ಕ್‌ನ ನಿಕೋಲಸ್ ರೋರಿಚ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ ಮತ್ತು ಈ ವಸ್ತುಸಂಗ್ರಹಾಲಯದ ಫೇಸ್‌ಬುಕ್ ಪೇಜ್‌ 2021 ರಲ್ಲಿ ಈ ವರ್ಣಚಿತ್ರದ ಛಾಯಾಚಿತ್ರವನ್ನು ಹಂಚಿಕೊಂಡಿದೆ. ಹಾಗಾಗಿ ಈ ವಸ್ತು ಸಂಗ್ರಹಲಯದಲ್ಲಿನ ಚಿತ್ರಕ್ಕೂ ರಾಹುಲ್‌ ಗಾಂಧಿ ಅವರ ಕೊಠಡಿಯಲ್ಲಿನ ಚಿತ್ರಕ್ಕೂ ಸಾಮ್ಯತೆ ಇರುವುದು ಕಂಡು ಬಂದಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಹುಲ್‌ ಗಾಂಧಿ ಅವರ ಕೊಠಡಿಯಲ್ಲಿರುವ ಏಸುಕ್ರಿಸ್ತನ ಚಿತ್ರವಲ್ಲ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅವರು ಉಗ್ರ ಕಸಬ್ ಪರ ವಕೀಲರಾಗಿದ್ದರು ಎಂಬುದು ಸುಳ್ಳು


ಈ ವಿಡಿಯೋ ನೋಡಿ : ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅವರು ಉಗ್ರ ಕಸಬ್ ಪರ ವಕೀಲರಾಗಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *