Fact Check | ಪ.ಬಂಗಾಳದ ಮಹಿಳಾ ಮುಸ್ಲಿಂ ಮತದಾರರ ಗುಂಪು ಎಂದು ಲಿಬಿಯಾದ ಫೋಟೋ ಹಂಚಿಕೆ.!

“ಈ ಫೋಟೋ ನೋಡಿ ಇದು ಮಹಿಳಾ ಮುಸ್ಲಿಂ ಮತದಾರರ ಗುಂಪು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇದೀಗ ಶೇಕಡ 78 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇದಕ್ಕೆ ಕಾರಣ ಪಶ್ಚಿಮಬಂಗಾಳ ಅನಧಿಕೃತವಾಗಿ ರೋಹಿಂಗ್ಯ ಮುಸ್ಲಿಂ ಮತ್ತು ಇತರ ಮುಸ್ಲಿಮರಿಗೆ ಆಶ್ರಯ ನೀಡಿದ್ದು.” ಎಂದು ಮುಸ್ಲಿಂ ಮಹಿಳೆಯರ ಗುಂಪಿರುವ ಫೋಟೋದೊಂದಿಗೆ ಈ ರೀತಿಯ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ.

https://twitter.com/Modified_Hindu9/status/1770743146076344499

ವೈರಲ್‌ ಆಗುತ್ತಿರುವ ಫೋಟೋದಲ್ಲಿ ಕೇವಲ ಮುಸ್ಲಿಂ ಮಹಿಳೆಯರ ಗುಂಪಿದೆ. ಈ ಒಂದು ಫೋಟೋವನ್ನು ಬಳಸಿಕೊಂಡು ವಿವಿಧ ರೀತಿಯಾದಂತಹ ಬರಹಗಳನ್ನು, ಕೋಮು ದ್ವೇಷದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವೈರಲ್ ಫೋಟೋದಲ್ಲಿ ಮಾಡಲಾರದಂತ ಪ್ರತಿಭಟನೆ ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

https://twitter.com/ramji_78/status/1790275012831953361

ಪ್ಯಾಕ್ಟ್‌ಚೆಕ್

ಈ ಪೋಟೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಆಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ 9 ಸೆಪ್ಟೆಂಬರ್ 2021 ರಂದು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳಲಾದ ಇದೇ ಫೋಟೋ ಕಂಡು ಬಂದಿತ್ತು. ಈ ಮೂಲಕ ಈ ಫೋಟೋ 2024ರ ಲೋಕಸಭೆ ಚುನಾವಣೆಯದ್ದಲ್ಲ ಮತ್ತು ಈ ಚುನಾವಣೆಗೂ ಈ ಫೋಟೋಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಯಿತು.

 

View this post on Instagram

 

A post shared by Haya un nisa (@haya_un_nisa)

ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ಹುಡುಕಿದಾಗ ಇದೇ ಫೋಟೋವನ್ನು ಫೇಸ್‌ಬುಕ್‌ ಖಾತೆಯೊಂದರಲ್ಲಿ 18 ಆಗಸ್ಟ್ 2018 ರಂದು ಹಂಚಿಕೊಂಡಿರುವುದು ಕಂಡುಬಂದಿತು. ಆ ಪೋಸ್ಟ್ ನಲ್ಲಿ ಲಿಬಿಯಾದಲ್ಲಿ ಮಹಿಳೆಯರ ಶಿಕ್ಷಣ ಮತ್ತು ಹಿಜಾಬ್ ನಂತಹ ಉಡುಗೆಗಳ ಬಗ್ಗೆ ಆಗುತ್ತಿರುವ ಚರ್ಚೆಯ ಕುರಿತು ಉಲ್ಲೇಖಿಸಲಾಗಿತ್ತು. ಆದರೆ ಇದರಲ್ಲಿ ಎಲ್ಲಿಯೂ ಕೂಡ ಈ ಫೋಟೋ ಕುರಿತು ಸರಿಯಾದ ಮಾಹಿತಿ ಉಲ್ಲೇಖವಾಗಿಲ್ಲ.

ಈ ಅಂಶಗಳನ್ನು ಗಮನಿಸಿದಾಗ ಈ ಫೋಟೋಗೂ ಭಾರತದ ಚುನಾವಣೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ಮತ್ತು ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ ಪಶ್ಚಿಮ ಬಂಗಾಳದಲ್ಲಿ 70% ಮುಸ್ಲಿಂ ಜನರಿದ್ದಾರೆ ಎಂಬುದು ಸುಳ್ಳು, ಅಧಿಕೃತ ವರದಿಯ ಪ್ರಕಾರ 2021ರ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಒಟ್ಟು ಮುಸ್ಲಿಂರ ಜನಸಂಖ್ಯೆ ಶೇ.28.9 ರಷ್ಟು ಇದೆ ಎಂಬುದು ಖಚಿತಾವಗಿದೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಮಾಡಿರುವ ಆರೋಪ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ಈ ವಿಡಿಯೋ ನೋಡಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *