Fact Check: ಆಂಧ್ರಪ್ರದೇಶದಲ್ಲಿ NDA ಒಕ್ಕುಟ ಮುನ್ನಡೆ ಸಾಧಿಸಲಿದೆ ಎಂದು ಸುಳ್ಳು ಸಮೀಕ್ಷೆಯ ವರದಿ ಹಂಚಿಕೆ

Andra Pradesh

ಆಂಧ್ರಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಹಲವಾರು ಸುದ್ದಿ ಮಾಧ್ಯಮಗಳ ವರದಿಯನ್ನು ನ್ಯೂಸ್ ಮಿನಿಟ್‌ ಒಟ್ಟಾಗಿ ನೀಡಿದೆ ಎನ್ನಲಾದ ಪೋಸ್ಟರ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ನ್ಯೂಸ್ ಮಿನಟ್‌ ಲೋಗೋ ಇದ್ದು, ಡಿಯಾ ಟುಡೆ-ಆಕ್ಸಿಸ್, CNN ನ್ಯೂಸ್ 18-IPSOS, ಟೈಮ್ಸ್ ನೌ-VMR, ರಿಪಬ್ಲಿಕ್-ಜಾನ್ ಕಿ ಬಾತ್, ರಿಪಬ್ಲಿಕ್-CVoter, NewsX-NEΤΑ ಮತ್ತು ಟುಡೇಸ್ ಚಾಣಕ್ಯ ಮುಂತಾದ ಹಲವಾರು ಸಂಸ್ಥೆಗಳ ಚುನಾವಣಾ ಭವಿಷ್ಯವನ್ನು ಈ ಪೋಸ್ಟರ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಎಲ್ಲಾ ಸಮೀಕ್ಷೆಗಳಲ್ಲಿ, ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ವಿರುದ್ಧ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುನ್ನಡೆ ಸಾಧಿಸಿದೆ ಎಂದಿದೆ. ಇದನ್ನು ಅನೇಕರು ಹಂಚಿಕೊಂಡಿದ್ದು ಅದರ ಆರ್ಕೈವ್‌ ಅನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಯಲ್ಲಿ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನಟ-ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) ಸೇರಿವೆ. ಹಾಗಾದರೆ ಈ ಸಮೀಕ್ಷೆ ನಿಜವೇ, ನಿಜಕ್ಕೂ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಒಕ್ಕುಟವು ಮುನ್ನಡೆ ಸಾಧಿಸಲಿದೆಯೇ ನೋಡೋಣ ಬನ್ನಿ.

ಫ್ಯಾಕ್ಟ್‌ಚೆಕ್‌:ಗ್ರಾಫಿಕ್(ಪೋಸ್ಟರ್) ನಕಲಿಯಾಗಿದೆ. ಆಂಧ್ರಪ್ರದೇಶದಲ್ಲಿ ಚುನಾವಣಾ ಭವಿಷ್ಯವನ್ನು ತಪ್ಪಾಗಿ ಹೇಳುವ ಸಲುವಾಗಿ 2019 ರಲ್ಲಿ ಪ್ರಕಟವಾದ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ನ್ಯೂಸ್ ಮಿನಿಟ್ (ಟಿಎನ್‌ಎಂ) ಸ್ಪಷ್ಟಪಡಿಸಿದೆ. ಟುಡೇಸ್ ಚಾಣಕ್ಯ ಮಾಧ್ಯಮದವರು ಸಹ ತಮ್ಮ ಎಕ್ಸ್ ಪೇಜ್‌ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಿಕ್ಷೆ ನಡೆಸಿಲ್ಲ ಆದ್ದರಿಂದ ಅದು ನಕಲಿ ಎಂದು ಪೋಸ್ಟ್ ಮಾಡಿದ್ದಾರೆ.

ದಿ ನ್ಯೂಸ್ ಮಿನಿಟ್‌ನ ಪ್ರಧಾನ ಸಂಪಾದಕರಾದ ಧನ್ಯ ರಾಜೇಂದ್ರನ್ ಅವರು ತಮ್ಮ X ಪುಟದಲ್ಲಿ ಮೇ 15 ರಲ್ಲಿ ಪೋಸ್ಟ್ ಮಾಡಿರುವ ಅವರು ವೈರಲ್ ಪೋಸ್ಟರ್‌ ಒಂದನ್ನು ಮರು ಪೋಸ್ಟ್ ಮಾಡಿದ್ದಾರೆ ಮತ್ತು “ಆತ್ಮೀಯ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಬೆಂಬಲಿಗರೇ. ಯಾವುದೇ ಚುನಾವಣಾ ಮುನ್ನ ಸಮೀಕ್ಷೆ ಫಲಿತಾಂಶಗಳು ಬಂದಿಲ್ಲ. ಈ ಗ್ರಾಫಿಕ್ ಎಲ್ಲಿಂದ ಬಂದಿದೆ ಎಂಬುದರ ಸುಳಿವು ಇಲ್ಲ” ಎಂದು ಬರೆದಿದ್ದಾರೆ.

TNM ಸಹ ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು2019 ರಲ್ಲಿ ಬರೆದ ನಮ್ಮ ವರದಿಯ ಹಳೆಯ ಚಿತ್ರವನ್ನು ನಾವು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಭವಿಷ್ಯ ನುಡಿದಿದ್ದೇವೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮಾದರಿ ನೀತಿ ಸಂಹಿತೆಯ (MCC) ಪ್ರಕಾರ, ದೇಶದ ಕೆಲವು ಭಾಗಗಳಲ್ಲಿ ಚುನಾವಣೆಗಳು ನಡೆಯುತ್ತಿರುವಾಗ ಯಾವುದೇ ಸುದ್ದಿವಾಹಿನಿ ಅಥವಾ ಸಂಸ್ಥೆಯು ಚುನಾವಣಾ ಮುನ್ನೋಟಗಳನ್ನು ಪೋಸ್ಟ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಸಧ್ಯ ಯಾವುದೇ ಚುನಾವಣಾ ಸಮೀಕ್ಷೆಗಳನ್ನು ಪ್ರಕಟಿಸುವುದನ್ನು ಜೂನ್ 1 ರವರೆಗೆ ನಿಷೇಧಿಸಲಾಗಿದೆ, ಏಕೆಂದರೆ ಇದು ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕೊನೆಯ ಮತದಾನವಾಗಿದೆ.

ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ 2019 ರಲ್ಲಿ ಆಂಧ್ರಪ್ರದೇಶದ ಚುನಾವಣಾ ಕುರಿತಾದ TNM ನ ವರದಿ ಲಭ್ಯವಾಗಿದ್ದು, ಇದರಲ್ಲಿ ವೈರಲ್ ಪೋಸ್ಟರ್‌ನಲ್ಲಿ ಇರುವ ಅದೇ ಸಮೀಕ್ಷೆಗಳ ಪಟ್ಟಿಯನ್ನು ನೀಡಲಾಗಿದೆ.

ಇದಲ್ಲದೆ, ರಾಜಕೀಯ ಸಂಶೋಧನಾ ಸಂಸ್ಥೆ ಟುಡೇಸ್ ಚಾಣಕ್ಯ ತಮ್ಮ ಎಕ್ಸ್ ಪೇಜ್‌ನಲ್ಲಿ ಆಂಧ್ರಪ್ರದೇಶದ ನಕಲಿ ಸಮೀಕ್ಷೆಯನ್ನು ತಮ್ಮ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಆದ್ದರಿಂದ ಸಧ್ಯ ಆಂಧ್ರಪ್ರದೇಶದ ಚುನಾವಣೆಯ ಮಾಧ್ಯಮಗಳ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕುಟ ಮುನ್ನಡೆ ಸಾಧಿಸಲಿದೆ ಎಂಬುದು ಸುಳ್ಳು.


ಇದನ್ನು ಓದಿ: ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂದು ರಾಹುಲ್ ಗಾಂಧಿ ಹೇಳಿಲ್ಲ


ವಿಡಿಯೋ ನೋಡಿ: ಅತಿ ದೊಡ್ಡ ಈಯಾ #Oia ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆಆಂಧ್ಗರ

Leave a Reply

Your email address will not be published. Required fields are marked *