Fact Check | ವಾರಣಾಸಿಯಲ್ಲಿ ಮತ ಚಲಾವಣೆ ಮಾಡಿದ್ದ EVMಗಳು ಪಿಕ್‌ಅಪ್‌ ವ್ಯಾನ್‌ನಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವಾರಣಾಸಿಯಲ್ಲಿನ ಪಿಕ್‌ಅಪ್‌ ವ್ಯಾನಿನಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿದ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳು ಕಂಡುಬಂದಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಈ ಬಾರಿಯ ಲೋಕಸಭೆ ಚುನಾವಣೆ  ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ನಂಬುತ್ತೀರಾ?” ಎಂಬ ಬರಹದೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಪಿಕ್‌ಅಪ್‌ ವ್ಯಾನ್‌ವೊಂದರಲ್ಲಿ ವಿವಿಧ ಪೆಟ್ಟಿಗೆಗಳಿದ್ದು, ಆ ಪೆಟ್ಟಿಗೆಗಳ ಒಳಗೆ ಇವಿಎಂ ಮಷೀನ್‌ಗಳು, ವಿವಿಪ್ಯಾಟ್ ಗಳು ಕಂಡುಬಂದಿದೆ. ಜೊತೆಗೆ ಇದನ್ನ ಹಲವಾರು ಮಂದಿ ಚಿತ್ರಿಸುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ಕಾರಣಕ್ಕೆ ಇದು ನಿಜವಾದ ವಿಡಿಯೋ ಎಂದು ನಂಬಿ ಸಾಕಷ್ಟು ಮಂದಿ ವ್ಯಾಪಕವಾಗಿ ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್

ಈ ಕುರಿತು ಕನ್ನಡ ಫ್ಯಾಟ್ ಚೆಕ್ ತಂಡ ಪರಿಶೀಲನೆ ನಡೆಸಲು ವಿಡಿಯೋದಲ್ಲಿನ ವಿವಿಧ ಈ ಪ್ರೇಮ್‌ಗಳನ್ನು ಬಳಸಿ, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ 2022ರ ಮಾರ್ಚ್ 9ರಂದು ಪ್ರಕಟವಾಗಿದ್ದ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ಎನ್‌ಡಿಟಿವಿ ವರದಿ ಪತ್ತೆಯಾಗಿವೆ.ಈ ವರದಿಗಳ ಆಧಾರದ ಮೇಲೆ ಈ ಘಟನೆಗೂ, ಇತ್ತೀಚಿಗೆ ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಮತ್ತು ಈ ವಿಡಿಯೋ 2022ರ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಾಗಿದೆ ಎಂಬುದು ಖಚಿತವಾಗಿದೆ.

 

ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ 2022ರಲ್ಲಿ ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಅವರು “ವಾಹನದಲ್ಲಿ ಕೊಂಡೊಯ್ಯಲಾಗುತ್ತಿದ್ದಂತಹ ವಿವಿ ಪ್ಯಾಟ್‌ಗಳನ್ನು ಚುನಾವಣಾ ಸಿಬ್ಬಂದಿಗಳ ತರಬೇತಿಗಾಗಿ ಮತ್ತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಪ್ರಾಯೋಗಿಕ ಯಂತ್ರಗಳನ್ನ ಬಳಸಲಾಗುತ್ತದೆ” ಎಂಬುದನ್ನ ಸ್ಪಷ್ಟಪಡಿಸಿದ್ದರು.

ಈ ಘಟನೆಯ ನಂತರ ವಾರಣಾಸಿಯ ಡಿಎಂ ಕುಶಲ್‌ರಾಜ್ ಶರ್ಮಾ ಅವರು 8 ಮಾರ್ಚ್ 2022 ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಎರಡನೇ ಹಂತದ ತರಬೇತಿಗಾಗಿ 20 EVM ಗಳನ್ನು ಪಿಕ್‌ಅಪ್‌ ವ್ಯಾನ್ ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಇದನ್ನು ಕೆಲವು ಜನರು ತಡೆದಿದ್ದರು. ಹೀಗಾಗಿ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದು ಕೇವಲ ತರಬೇತಿಗಾಗಿ ಬಳಸುವ ಇವಿಎಂ ಯಂತ್ರಗಳಾಗಿದೆ.” ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದರು.

ಇನ್ನು ಇತ್ತೀಚಿಗೆ ವಾರಣಾಸಿಯಲ್ಲಿ ಮತಚಲಾವಣೆ ಮಾಡಿದ EVM ಯಂತ್ರಗಳು ಮತ್ತು ವಿವಿಪ್ಯಾಟ್ ಗಳು ಪತ್ತೆಯಾಗಿದೆ ಎಂಬುದು ಕೂಡ ಸುಳ್ಳು. ಏಕೆಂದರೆ ವಾರಣಾಸಿಯಲ್ಲಿ ಜೂನ್ 1ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಇದು 7ನೇ ಮತ್ತು ಕೊನೆಯ ಹಂತದ ಚುನಾವಣೆಯಾಗಿದೆ. ಇನ್ನು  ದೇಶಾದ್ಯಂತ ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಾರಣಾಸಿಯಲ್ಲಿ ಮತ ಚಲಾಯಿಸಿದ ಈವಿಎಂ ಯಂತ್ರಗಳು ಮತ್ತು ವಿವಿಪ್ಯಾಟ್ ಗಳು ಪತ್ತೆಯಾಗಿದೆ ಎಂಬುದು ಸುಳ್ಳಾಗಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿರುವ ವಿಡಿಯೋ 2022 ರದ್ದು ಅದಕ್ಕೂ ಮತ್ತು ಈಗಿನ ಲೋಕಸಭೆ ಚುನಾವಣೆಗು ಯಾವುದೇ ರೀತಿಯ ಸಂಬಂಧ ಇಲ್ಲ


ಇದನ್ನೂ ಓದಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ಈ ವಿಡಿಯೋ ನೋಡಿ : ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *