Fact Check: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ

ರಾಜೀವ್ ಗಾಂಧಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಬಿಜೆಪಿಗೆ 400 ಸೀಟುಗಳು ಬಂದರೆ ಸಂವಿಧಾನವನ್ನು ಬದಲಿಸುತ್ತಾರೆ ಎಂಬುದು. ಈ ಹೇಳಿಕೆಯನ್ನು ಕೆಲವು ಬಿಜೆಪಿ ಸಂಸದರು ನೀಡಿದ ಮೇಲೆ, ವಿರೋಧ ಪಕ್ಷಗಳು ರಾಜಕೀಯ ಆಸ್ತ್ರವಾಗಿ ಬಳಸಿಕೊಂಡು ಬಿಜೆಪಿ 400 ಸೀಟು ಕೇಳುತ್ತಿರುವುದು ಸಂವಿಧಾನ ಬದಲಿಸುವುದಕ್ಕೆ ಎಂದು ಸಾಕಷ್ಟು ಟೀಕಿಸಿದರು. ನಂತರ ರಾಜೀವ್ ಗಾಂಧಿಯವರು ಸಹ “ಅಗತ್ಯ ಬಿದ್ದರೆ ಕಾನೂನು ಬದಲಿಸುತ್ತೇವೆ ಮತ್ತು ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ” ಎಂದಿದ್ದರು. ಎನ್ನಲಾದ ವಿಡಿಯೋ ತುಣುಕೊಂದನ್ನು ಅನೇಕ ದಿನಗಳಿಂದ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಸುಳ್ಳಿಗೆ ಖ್ಯಾತರಾದ ಟಿವಿ ವಿಕ್ರಮ ಮಾಲಿಕ ಮಹೇಶ್ ವಿಕ್ರಂ ಹೆಗಡೆ, ಪೋಸ್ಟ್ ಕಾರ್ಡ್‌ ಇಂಗ್ಲಿಷ್, ಅರ್ನಬ್‌ ಗೋಸ್ವಾಮಿ ಮತ್ತು ರಿಪಬ್ಲಿಕ್ ಅಭಿಮಾನಿಗಳು ಸೇರಿದಂತೆ ಅನೇಕರು ರಾಜೀವ್ ಅವರ ಭಾಷಣದ ತುಣುಕನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 2021ರ ಜೂನ್ 17 ಮತ್ತು 19ರಲ್ಲಿಯೇ ಇವರು ಹಂಚಿಕೊಂಡಿರುವುದನ್ನು ಕಾಣಬಹುದು.

ಫ್ಯಾಕ್ಟ್‌ಚೆಕ್‌: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್‌ ಯೋಜನೆಯ ಸಾಧಕ ಬಾದಕಗಳ ಕುರಿತು ಮಾತನಾಡಿರುವ ಭಾಷಣದಿಂದ “ಅಗತ್ಯ ಬಿದ್ದರೆ ಕಾನೂನು ಬದಲಿಸುತ್ತೇವೆ ಮತ್ತು ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ” ಎಂಬ ಹೇಳಿಕೆಯನ್ನು ಕಟ್‌ ಮಾಡಿ, ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ರಾಜೀವ್ ಅವರು ಪಂಚಾಯತ್‌ ರಾಜ್‌ ಕುರಿತು ಮಾತನಾಡಿರುವ ವಿಡಿಯೋ ಯೂಟೂಬ್‌ ನಲ್ಲಿ ಲಭ್ಯವಿದ್ದು, “ರಾಜೀವ್ ಗಾಂಧಿ: “ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವಿನ ಕೊರತೆ ನಮ್ಮ ದೌರ್ಬಲ್ಯ” ಎಂಬ ಶಿರ್ಷಿಕೆಯೊಂದಿಗೆ ವೈಲ್ಡ್‌ಫಿಲ್ಮ್‌ ಇಂಡಿಯಾ ಈ ವಿಡಿಯೋವನ್ನು ಆಗಸ್ಟ್‌ 2, 2018ರಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯವರು “ಇದು ನಮ್ಮ ದೊಡ್ಡ ದೌರ್ಬಲ್ಯಗಳಲ್ಲಿ ಒಂದಾಗಿದೆ, ಅದನ್ನು ನಾವು ನಿಭಾಯಿಸಲು ಸಾಧ್ಯವಿಲ್ಲ. ನಮ್ಮ ಕಾರ್ಯಕ್ರಮಗಳು ದೇಶದ ಗ್ರಾಮೀಣ ಭಾಗಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಹಲವು ದೂರುಗಳು ಬಂದಿವೆ. ಇದು ಏಕೆ ನಡೆಯುತ್ತಿದೆ ಎಂದು ನಾವು ಲೆಕ್ಕಾಚಾರ ಮಾಡಬೇಕು. ನಾನು ಅನೇಕ ಸಭೆಗಳನ್ನು ಆಯೋಜಿಸಿದ್ದೇನೆ ಮತ್ತು ಸುದೀರ್ಘ ಗಂಟೆಗಳ ಕಾಲ ಚರ್ಚಿಸಿದ್ದೇನೆ ಮತ್ತು ನಾವು ಪಂಚಾಯತ್ ರಾಜ್ ಅನ್ನು ಬಲಪಡಿಸುವವರೆಗೆ ಮತ್ತು ಜನರಿಗೆ ಜವಾಬ್ದಾರಿಗಳನ್ನು ನೀಡುವವರೆಗೆ ಇದು ಸಾಧ್ಯವಿಲ್ಲ ಎಂದು ನಾವು ಇಲ್ಲಿಗೆ ಬಂದಿದ್ದೇವೆ.

‘ಸ್ವರಾಜ್ಯದ ನನ್ನ ಕಲ್ಪನೆಯು ಈಗಾಗಲೇ ಶಕ್ತಿಶಾಲಿಯಾದವರಿಗೆ ಅಧಿಕಾರ ಬರುತ್ತದೆ ಎಂದು ಅಲ್ಲ ಆದರೆ ಅಧಿಕಾರದ ದುರುಪಯೋಗವನ್ನು ತಡೆಯಲು ನಾವು ಜನರನ್ನು ಸಶಕ್ತಗೊಳಿಸಬೇಕು’ ಎಂದು ಗಾಂಧೀಜಿ ಸ್ಪಷ್ಟಪಡಿಸಿದ್ದಾರೆ. ನಾವು ಇದನ್ನು ಮಾತ್ರ ಮಾಡಲು ಬಯಸುತ್ತೇವೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದ್ದರೆ ನಾವು ಅದನ್ನು ನಿಸ್ಸಂದೇಹವಾಗಿ ಮಾಡುತ್ತೇವೆ. ಜನರು ತಮ್ಮ ಅಧಿಕಾರವನ್ನು ಹೊಂದಿರುತ್ತಾರೆ ಎಂದು ನಾವು ನೋಡುತ್ತೇವೆ. ಕಾರ್ಯಕ್ರಮಗಳು ನಿಮ್ಮ ಬಳಿ ತಲುಪಲು ಸಾಕಷ್ಟು ಕೆಲಸ ಮಾಡುತ್ತೇವೆ.” ಎಂದು ಹೇಳಿದ್ದಾರೆ. 

ಅವರ ಭಾಷಣದ ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಆದ್ದರಿಂದ ರಾಜೀವ್ ಗಾಂಧೀಯವರು ಸಂವಿಧಾನ ಬದಲಾಯಿಸುವ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬದಲಾಗಿ ಸಂವಿಧಾನದ ಆಶಯದಂತೆ ಜನಗಳಿಗೆ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು, ಶಕ್ತಿಶಾಲಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಪಂಚಾಯತ್‌ ರಾಜ್‌ ಮೂಲಕ ಜನರಿಗೆ ಜವಬ್ದಾರಿಗಳನ್ನು ನೀಡಿ ಅವರನ್ನು ರಾಜಕೀಯವಾಗಿ ಒಳಗೊಳ್ಳಬೇಕು ಎಂದು ಬಯಸಿದ್ದರು. ಯಾರೋ ಕೆಲವು ಕಿಡಿಗೇಡಿಗಳು ಬೇಕಂತಲೇ ಅವರ ಭಾಷಣದ ತುಣುಕನ್ನು ತಪ್ಪು ಅರ್ಥ ಬರುವಂತೆ ಕಟ್‌ ಮಾಡಿ ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಟ್ಟಿದ್ದಾರೆ.


ಇದನ್ನು ಓದಿ: ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು


ವಿಡಿಯೋ ನೋಡಿ: ಅತಿ ದೊಡ್ಡ ಈಯಾ #Oia ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *