“ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯರಾದ ದೇಶದ್ರೋಹಿ, ಮತಾಂಧ ಟಿಪ್ಪು ಸುಲ್ತಾನ್‌ನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಚಿತ್ರವನ್ನು ಬಹಿಷ್ಕರಿಸಲು ಶೇರ್ ಮಾಡಿ.” ಎಂಬ ಬರಹದೊಂದಿಗೆ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
भक्तों आपको क्या लगता हैं??
इसका बहिष्कार होना चाहिए या नहीं.??
अपना जवाब रीट्वीट करके जरूर दे..!!! pic.twitter.com/JfRCjztRol— किरन जैन ( देशभक्त ) 🇮🇳 🚩 (@JainKiran6) May 4, 2020
ಈ ಪೋಸ್ಟರ್ ಜೊತೆಗೆ ಇನ್ನೂ ಹಲವು ಪೋಸ್ಟ್‌ಗಳು ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಹೆಸhttps://www.youtube.com/watch?v=ht7vSYVCuLwರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವಿವಿಧ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಸಿನಿ ರಸಿಕರು ಕೂಡ ಇದು ನಿಜವೆಂದು ನಂಬಿಕೊಂಡಿದ್ದಾರೆ. ಆದರೆ ವೈರಲ್ ಪೋಸ್ಟ್ ಅನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಬಹಿರಂಗಗೊಂಡಿದೆ.
SLB is expected to start filming a new project in May…a movie expected to generate widespread interest.
If it is “Inshallah”, it will be a new direction for him into the realm of lighthearted romantic comedy.
Other reports suggest a period film, Tipu Sultan.
Bollywood Life pic.twitter.com/pBPhBILWRR
— Amy Stone (@AmyStone2022) January 18, 2024
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ವೈರಲ್ ಆಗುತ್ತಿರುವ ಪೋಸ್ಟರ್‌ನಲ್ಲಿದ್ದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿತು. ಈ ವೇಳೆ 22 ನವಂಬರ್ 2018 ರಂದು ಸೂಫಿ ಸ್ಟುಡಿಯೋ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಒಂದು ಕಂಡು ಬಂದಿದೆ.
ಈ ವಿಡಿಯೋವನ್ನು ಪರಿಶೀಲನೆ ನಡೆಸಿದಾಗ ಇದರ ಆರಂಭದಲ್ಲೇ ಸೂಚನೆಯೊಂದನ್ನು ನೀಡಲಾಗಿದೆ. ಅದರಲ್ಲಿ “ಇದು ಅಭಿಮಾನಿ ನಿರ್ಮಿತ ಟ್ರೈಲರ್ ಆಗಿದ್ದು, ಮನೋರಂಜನೆ ಉದ್ದೇಶಗಳಿಗಾಗಿ ಬಳಸಲಾಗಿದೆ. ಮತ್ತು ಈ ವಿಡಿಯೋವನ್ನು ಬೇರೆ ಬೇರೆ ವಿಡಿಯೋ ಕ್ಲಿಪ್‌ಗಳಿಂದ ಬಳಸಿಕೊಳ್ಳಲಾಗಿದೆ. ಎಂದು ಉಲ್ಲೇಖಿಸಲಾಗಿದೆ. ಇನ್ನು ಈ ಪೂರ್ಣ ಟ್ರೈಲರ್‌ನಲ್ಲೂ ಕೂಡ ಬೇರೆ ಬೇರೆ ಸಿನಿಮಾದ ವಿಡಿಯೋ ಕ್ಲಿಪ್ ಗಳನ್ನು ನೋಡಬಹುದಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಪರಿಶೀಲನೆ ನಡೆಸಿದಾಗ, 8 ಮೇ 2020 ರಂದು ಇಂಡಿಯಾ ಟುಡೇ ಸುದ್ದಿ ಸಂಸ್ಥೆಯು ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ “ಶಾರುಖ್ ಖಾನ್ ಅವರು ಟಿಪ್ಪು ಸುಲ್ತಾನ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆಯೇ?” ಎಂಬ ಶೀರ್ಷಿಕೆ ಅಡಿಯಲ್ಲಿ ಫ್ಯಾಕ್ಟ್ ಚೆಕ್ ನಡೆಸಿ ಇದೇ ವರದಿಯನ್ನು ನೀಡಿದ್ದಾರೆ.ನ್ನು ಶಾರುಖ್ ಖಾನ್ ಅವರ ಮುಂದಿನ ಸಿನಿಮಾಗಳ ಲಿಸ್ಟ್‌ಗಳ ಕುರಿತು ಅಧಿಕೃತ ವರದಿಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಎಲ್ಲಿಯೂ ಕೂಡ ಶಾರುಖ್ ಖಾನ್ ಅವರು ಟಿಪ್ಪು ಸುಲ್ತಾನ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಉಲ್ಲೇಖಗಳು ಕಂಡುಬಂದಿಲ್ಲ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ವೈರಲಾಗುತ್ತಿರುವ ಪೋಸ್ಟ್ ಶಾರುಖ್ ಖಾನ್ ವಿರುದ್ಧ ಮತ್ತು ಮುಸ್ಲಿಂ ವಿರೋಧಿ ಮನೋಭಾವದಿಂದ ಹಂಚಿಕೊಳ್ಳಲಾಗುತ್ತಿದೆ ಮತ್ತು ಈ ಪೋಸ್ಟರ್‌ನಲ್ಲಿ ಯಾವುದೇ ರೀತಿಯಾದಂತಹ ನೈಜ ಅಂಶಗಳು ಪತ್ತೆಯಾಗಿಲ್ಲ.ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ.
ಇದನ್ನೂ ಓದಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ
ವಿಡಿಯೋ ನೋಡಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.