Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು

DMK

ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಕೇರಳಾದ ಕಮುನಿಸ್ಟ್‌ ಪಕ್ಷದ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಎರಡೂ ಪಕ್ಷಗಳೂ ಹಿಂದು ವಿರೋಧಿ ಪಕ್ಷಗಳು ಎಂಬಂತೆ ಬಿಂಬಿಸಲಾಗುತ್ತಿದೆ. ತಮಿಳುನಾಡಿನ ಸಚಿವ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರ ಮಗನಾದ ಉದಯನಿಧಿ ಸ್ಟಾಲಿನ್ “ಸನಾತನ” ಧರ್ಮದ ಬಗ್ಗೆ ಮಾಡಿದ ಟೀಕೆಯ ನಂತರ ಇಂತಹ ಅಪಪ್ರಚಾರಗಳು ಇನ್ನೂ ಹೆಚ್ಚಾಗಿವೆ.

ಇತ್ತೀಚೆಗೆ, ತಮಿಳುನಾಡಿನ ಕ್ರಿಶ್ಚಿಯನ್ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪ್ರಾಚೀನ ಶಿವಲಿಂಗವನ್ನು ತೆರವುಗೊಳಿಸಿ, ಹಿಂದೂ ವಿರೋಧಿ ನಡೆ ಅನುಸರಿಸಿದೆ ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಇದು 2013-16ರ ಜಯಲಲಿತ(AIADMK)ರವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ಘಟನೆಯಾಗಿದೆ. ಈ ಹಿಂದೆ ಈ ವೈರಲ್ ವಿಡಿಯೋವನ್ನು ಕೇರಳದ ಕಮುನಿಸ್ಟ್‌ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿತ್ತು. ಈ ಕುರಿತು 2018 ರಲ್ಲಿ ಫ್ಯಾಕ್ಟ್‌ಚೆಕ್‌ ನಡೆಸಿರುವ ಇಂಡಿಯಾ ಟುಡೆ VKT ಹೈವೆಯನ್ನು ನಿರ್ಮಿಸಲು ತಮಿಳುನಾಡು ಸರ್ಕಾರವು ಕೆಲವು ದೇವಸ್ಥಾನಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ವರದಿ ಮಾಡಿದೆ. ರಸ್ತೆ ಯೋಜನೆಗೆ ಅಡ್ಡಿಯಾಗಿದ್ದ ಕೆಲವು ಪ್ರಾಚೀನ ದೇವಾಲಯಗಳನ್ನು ತೆಗೆದುಹಾಕಲು ಅಥವಾ ಸ್ಥಳಾಂತರಿಸಲು ಎನ್ಎಚ್ಎಐ ಪ್ರಯತ್ನಿಸಿದ್ದರಿಂದ 2013-2016 ರ ನಡುವೆ ತಮಿಳುನಾಡಿನ ವಿಕೆಟಿ ಹೆದ್ದಾರಿಯ ಉದ್ದಕ್ಕೂ ಹಳ್ಳಿಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿವೆ. ನಂತರ ಚೋಳರ ಕಾಲದ ಶಿವ ದೇವಾಲಯವನ್ನು ನೆಲಸಮಗೊಳಿಸುವ ಕ್ರಮದ ವಿರುದ್ಧ ಎನ್ಎಚ್ಎಐ(National Highways Authority of India)ಗೆ ಪತ್ರ ಬರೆದಿದ್ದ ಇತಿಹಾಸಕಾರ ಡಾ.ಕೆ.ಬಾಲಸುಬ್ರಮಣಿಯನ್ ಅವರು ಈ ವಿಷಯವನ್ನು ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಗಮನಕ್ಕೂ ತಂದಿದ್ದರು. ಈ ಅಭಿಯಾನದ ಪರಿಣಾಮವಾಗಿ ಎನ್ಎಚ್ಎಐ ದೇವಾಲಯವನ್ನು ಉಳಿಸಿತು ಎಂದು ಡಾ.ಬಾಲಸುಬ್ರಮಣಿಯನ್  ಇಂಡಿಯಾ ಟುಡೆಗೆ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಎಂ.ಕೆ ಸ್ಟಾಲಿನ್ ನೇತೃತ್ವದ DMK ಪಕ್ಷವೂ 2021ರ ನಂತರ ಅಧಿಕಾರವನ್ನು ವಹಿಸಿಕೊಂಡಿದ್ದು ಪ್ರಸ್ತುತ ಆರೋಪವಾದ ಎಂ.ಕೆ ಸ್ಟಾಲಿನ್‌ರವರು ಕ್ರಿಶ್ಚಿಯನ್ ಮತ್ತು DMK  ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೋಳಿಸಿದೆ ಎಂಬುದು ಸುಳ್ಳು.


ಇದನ್ನು ಓದಿ: ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು 


ವಿಡಿಯೋ ನೋಡಿ: ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *