Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಜನ ಮಾಜಿ ಸಿಬ್ಬಂದಿಗಳ ಶಿಕ್ಷೆಯನ್ನು ಕತಾರ್‌ ರದ್ದು ಮಾಡಿದೆ. ಮೋದಿ ಮತ್ತು ತನ್ನ ಅಧಿಕೃತ ಹೇಳಿಕೆಯಲ್ಲಿ ನಮಗೆ ಭಾರತದ ಸ್ನೇಹವೇ ಮುಖ್ಯವೆಂದು ಹೇಳಿದೆ. ಇದು ಮೋದಿ ಸರ್ಕಾರದ ಶಕ್ತಿ” ಎಂದು ಪ್ರಧಾಣಿ ಮೋದಿ ಅವರ ಫೋಟೋದೊಂದಿಗೆ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ.

ಅಸಲಿಗೆ ಕಳೆದ ತಿಂಗಳು ಕತಾರ್‌ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಭಾರತದ ಈ ಎಲ್ಲಾ ಮಾಜಿ ನೌಕಾ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆಯ ಆರೋಪವನ್ನು ಕತಾರ್‌ ಹೊರಿಸಿತ್ತು. ಕತಾರ್‌ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಕೂಡ ಸಲ್ಲಿಸಲಾಗಿದೆ. ಈ ಬಗ್ಗೆ ಒಂದು ಬಾರಿ ವಿಚಾರಣೆ ಕೂಡ ನಡೆದಿದೆ.

ಇದೀಗ ಇದೇ ಪ್ರಕರಣದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸತತ ಪ್ರಯತ್ನದಲ್ಲಿ ಕತಾರ್‌ನಲ್ಲಿ ಮರಣದಂಡನೆಗೆ ಸಿಲುಕಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ ಎಂಬ ಪೋಸ್ಟ್‌ ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅಸಲಿ ವಿಚಾರ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ. ಏಕೆಂದರೆ ಇದುವರೆಗೂ ಕೂಡ ಕತಾರ್‌ ಬಂಧನಕ್ಕೆ ಒಳಪಟ್ಟ 8 ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿರುವ ಕುರಿತು ಯಾವುದೇ ವರದಿಗಳು ಕಂಡು ಬಂದಿಲ್ಲ ಮತ್ತು ಕತಾರ್‌ ಸರ್ಕಾರದ ಇತ್ತೀಚೆಗಿನ ಅಧಿಕೃತ ಹೇಳಿಕೆಗಳಲ್ಲೂ ಈ ವಿಚಾರ ಪ್ರಸ್ತಾಪವೇ ಆಗಿಲ್ಲ.

ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಬೂಮ್‌ ಡಿಜಿಟಲ್‌ ಮಾಧ್ಯಮ ಕೂಡ ಈ ಬಗ್ಗೆ ವರದಿ ಮಾಡಿದ್ದು ಇನ್ನೂ ಕೂಡ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದೆ. ಇನ್ನು ಈ ಹಿಂದೆ ಬಂಧನಕ್ಕೆ ಒಳ ಪಟ್ಟಿರುವ 8 ಜನ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಕುಟುಂಬವನ್ನು ವಿದೇಶಾಂಗ ಸಚಿವ ಜಯಶಂಕರ್‌ ಅವರು ಭೇಟಿ ಮಾಡಿದ್ದ ವರದಿಗಳು ಕಂಡು ಬಂದಿವೆ ಮತ್ತು ಇದು ಈ ಪ್ರಕರಣದ ಇತ್ತೀಚೆಗಿನ ಬೆಳವಣಿಗೆ.

ಇನ್ನು ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ-28)ರ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯ ವೇಳೆ ಕತಾರ್‌ ದೊರೆ ಶೇಖ್ ತಮೀಮ್‌ ಬಿನ್ ಹಮದ್ ಅಲ್ ಥಾನಿ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು. ಈ ವಿಷಯದ ಕುರಿತು ಪ್ರಸ್ತಾಪಿಸಿದ ಕುರಿತಾಗಿ ಯಾವುದೇ ವರದಿಗಳು ಆಗಿಲ್ಲ. ಹಾಗಾಗಿ ಮೋದಿ ಸರ್ಕಾರದ ನಡೆಯಿಂದ ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಪಡೆಯ ಮಾಜಿ ಅಧಿಕಾರಿಗಳ ಮರಣದಂಡನೆ ಶಿಕ್ಷೆ ರದ್ದಾಗಿದೆ ಎಂಬುದು ಸುಳ್ಳು


ಇದನ್ನೂ ಓದಿ : Fact Check | ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ


ವಿಡಿಯೋ ನೋಡಿ : Fact Check: ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *