Fact Check: ದರೋಡೆಕೋರರ ತಂಡವೊಂದು ಸರ್ಕಾರಿ ಸಮೀಕ್ಷೆಯ ನೆಪದಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂಬುದು ಸುಳ್ಳು

Survey

ಜಾತಿ ಜನಗಣತಿ ನಡೆಸುವ ಕುರಿತು ಪರ ವಿರೋಧಗಳ ಚರ್ಚೆಯ ಬೆನ್ನಲ್ಲೆ ಜನಗಣತಿಯ ಸಮೀಕ್ಷೆಯ ಕುರಿತು ಮತ್ತು ಸರ್ಕಾರಿ ಯೋಜನೆಯಾದ ಆಯು‍ಷ್ಮಾನ್ ಭಾರತದ ಕುರಿತು ಸುಳ್ಳು ಸುದ್ದಿಯೊಂದು ಹಲವಾರು ವರ್ಷಗಳಿಂದ ಹರಿದಾಡುತ್ತಿದೆ.

ಎಲ್ಲಾ ಫ್ಲಾಟ್ / ಮನೆ ಮಾಲೀಕರಿಗೆ ಹೈ ಅಲರ್ಟ್, ದರೋಡೆಕೋರರ ಗುಂಪೋಂದು ಜನಗಣತಿಯ ನೆಪದಲ್ಲಿ ಅಥವಾ ಆಯುಷ್ಮಾನ್ ಸರ್ಕಾರಿ ಯೋಜನೆ ಭಾಗವಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ಗೃಹ ಸಚಿವಾಲಯದ ಸ್ಟಾಂಪ್ ಮತ್ತು ಲೆಟರ್ ಹೆಡ್ ಅನ್ನು ಹೊಂದಿದ್ದು, ಗುರುತಿನ ಚೀಟಿಗಳು ಸಹ ಇವೆ. ಇದು ಇತ್ತೀಚಿನ ದರೋಡೆಯ ತಂತ್ರಜ್ಞಾನ. ದಯವಿಟ್ಟು ಈ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ. ನಿಮ್ಮ ನೆರೆಹೊರೆಯವರು, ಗುಂಪುಗಳು, ಕುಟುಂಬಗಳು. ಸುದ್ದಿಯನ್ನು ಹರಡಿ. ಈ ಮಾಹಿತಿಯನ್ನು ಪೋಲಿಸ್ ಕಮಿಷನರ್‌ನವರು ಅಧಿಕೃತವಾಗಿ ನೀಡಿದ್ದಾರೆ ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು ಹಲವಾರು ವರ್ಷಗಳಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಿದಾಡುತ್ತಿರುವ ಸುಳ್ಳು ಸುದ್ಧಿಯಾಗಿದೆ. ಈ ಹಗರಣಕ್ಕೆ ಬಲಿಯಾದ ಬಗ್ಗೆ ಭಾರತದಿಂದ ಯಾವುದೇ ವರದಿಗಳು ಕಂಡುಬಂದಿಲ್ಲ, ಅಥವಾ ಅದರ ವಿರುದ್ಧ ಯಾವುದೇ ಸರ್ಕಾರಿ ಸಲಹೆ ಎಚ್ಚರಿಕೆ ಕಂಡುಬಂದಿಲ್ಲ. ಈ ಸಂದೇಶದಲ್ಲಿ ಹಲವಾರು ತಪ್ಪುಗಳಿದ್ದು ಮಿನಿಸ್ಟ್ರಿ ಆಫ್ ಹೋಮ್ ಅಪೈರ್ ಎಂಬುದಕ್ಕೆ ಡಿಪಾರ್ಟ್‌ ಮೆಂಟ್ ಆಫ್ ಹೋಮ್ ಅಫೈರ್ ಎಂದು ಬಳಸಲಾಗಿದೆ ಮತ್ತು ಆಯುಷ್ಮಾನ್ ಭಾರತ ಎಂಬುದನ್ನು ಸಹ Ayushman Government of India ಎಂದು ತಪ್ಪಾಗಿ ಬಳಸಲಾಗಿದೆ. ಈ ಕುರಿತು ಹಲವಾರು ಸುದ್ದಿಮಾದ್ಯಮಗಳು ಫ್ಯಾಕ್ಟ್‌ಚೆಕ್‌ ನಡೆಸಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.  ಸಿಂಗಾಪುರ ಪೊಲೀಸರು 2021 ರಲ್ಲಿ ಈ ವೈರಲ್ ಸಂದೇಶದ ಬಗ್ಗೆ ಎಚ್ಚರಿಕೆಯನ್ನು ಬಿಡುಗಡೆ ಮಾಡಿ, ಇದು ಹುಸಿ ಮತ್ತು ಅದರ ಹಿಂದೆ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಫಾರ್ವರ್ಡ್ ವೈರಲ್ ಆಗಿತ್ತು. 2017 ರಲ್ಲಿ, ದಕ್ಷಿಣ ಆಫ್ರಿಕಾದ ಗೃಹ ವ್ಯವಹಾರಗಳ ಇಲಾಖೆ ಇಂತಹ ಹಗರಣದ ವಿರುದ್ಧ ಎಚ್ಚರಿಕೆ ನೀಡಿತ್ತು. ಆದ್ದರಿಂದ ಇದು ಹಲವಾರು ವರ್ಷಗಳಿಂದ ಹರಿದಾಡುತ್ತಿರುವ ಸುಳ್ಳು ಸುದ್ದಿಯಾಗಿದೆ.


ಇದನ್ನು ಓದಿ: Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ


ವಿಡಿಯೋ ನೋಡಿ: DMK | ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೋಳಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *