Fact Check | ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ  “ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.” ಎಂಬ ಸುದ್ದಿ ವೈರಲ್‌ ಆಗಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವೈರಲ್‌ ಆಗಿರುವ ಫೋಟೋ ಹಾಗೂ ಈ ಕುರಿತು ಹಬ್ಬಿರುವ ಸುಳ್ಳು ಸುದ್ದಿ ಬಟಾ ಬಯಲಾಗಿದೆ. ಆದರೆ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನೇ ಬಹುತೇಕರು ನಂಬಿದ್ದು ಈ ವಿಚಾರವನ್ನು ಪರಿಶೀಲನೆ ನಡೆಸದೆ ಬಹುತೇಕರು ಶೇರ್‌ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ರೀತಿ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ. ಆದರೆ ರಿಚರ್ಡ್‌ ಕೆಟಲ್ಬರೋ ಅವರು ಸಾವನ್ನಪ್ಪಿರುವ ಕುರಿತು ಎಲ್ಲಿಯೂ ವರದಿಯಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಐಸಿಸಿ ಸಂಸ್ಥೆಯು ʼದ ಕ್ವಿಂಟ್‌ʼ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ರಿಚರ್ಡ್‌ ಕೆಟಲ್ಬರೋ ಅವರಿಗೆ ಏನು ಆಗಿಲ್ಲ ಎಂದು ತಿಳಿಸಿದೆ.

ಇನ್ನು ಅಪಘಾತದ ಫೋಟೋ 2012ದ್ದಾಗಿದ್ದು ಈ ಅಪಘಾತದ ಕುರಿತು ಇಂಡಿಯಾ ಟುಡೆ ಕೂಡ ವರದಿ ಮಾಡಿತ್ತು. ಆ ವರದಿಯಲ್ಲಿ ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಹಾಗೂ ಸೈಕಲ್‌ ನಡುವೆ ನಡೆದ ಅಪಘಾತಕ್ಕೆ ಸಂಬಂಧಿಸಿದ್ದಾಗಿದೆ. ಇದೇ ಫೋಟೊವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಇದೇ ಕಾರಿನಲ್ಲಿ ರಿಚರ್ಡ್‌ ಕೆಟಲ್ಬರೋ ಅವರು ಸಾವನ್ನಪ್ಪಿರುವುದು ಎಂದು ಸುಳ್ಳು ಸುದ್ದಿಯನ್ನು ಹಬ್ಬುತ್ತಿದ್ದಾರೆ. ಹಾಗಾಗಿ ರಿಚರ್ಡ್‌ ಕೆಟಲ್ಬರೋ ಅವರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ.

Leave a Reply

Your email address will not be published. Required fields are marked *