Fact Check: ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ ಎಂಬುದು ಸುಳ್ಳು

Sita Mata

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಅಯೋಧ್ಯೆಯ ನಿರ್ಮಾಣದ ಹಂತದಲ್ಲಿರುವ ರೈಲ್ವೆ ನಿಲ್ದಾಣದ ನೀಲಿನಕ್ಷೆಯ ಚಿತ್ರಗಳು ಎಂದು AI ಸೃಷ್ಟಿಸಿದ ಪೋಟೋಗಳನ್ನು ಹಂಚಿಕೊಳ್ಳಲಾಗಿತ್ತು.

ಈಗ, ಶ್ರೀಲಂಕಾದ ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವರು ಸ್ವೀಕರಿಸುವ ವೀಡಿಯೋ ಇದು. ಇದನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಫ್ಯಾಕ್ಟ್‌ಚೆಕ್: 2021ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಬೌದ್ಧ ಸನ್ಯಾಸಿಗಳು ಶ್ರೀಲಂಕಾದಿಂದ ಕಪಿಲವಸ್ತುವಿನ ಧಾರ್ಮಿಕ ಅವಶೇಷವಾದ ಸ್ತೂಪದ ಪ್ರತಿಕೃತಿಯನ್ನು ಶ್ರೀಲಂಕಾ ಏರ್ಲೈನ್ಸ್ ಮೂಲಕ ಭಾರತಕ್ಕೆ ತಂದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಇತರ ಗಣ್ಯರು ಅವರನ್ನು ಸ್ವಾಗತಿಸಿದ ವಿಡಿಯೋ ಇದಾಗಿದೆ.ಆರು ದಿನಗಳ ಅವಧಿಯ ನಂತರ, ಸೂಪ್ತದ ಪ್ರತಿಕೃತಿಯನ್ನು  ಶ್ರೀಲಂಕಾಕ್ಕೆ ಹಿಂದಿರುಗಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವಿಟರ್ ಪೋಸ್ಟ್‌ನಲ್ಲಿ ವರದಿ ಮಾಡಿದೆ. ಈ ಟ್ವೀಟ್‌ನಲ್ಲಿ ಬುದ್ಧನ ಸ್ತೂಪದ ಚಿತ್ರವೂ ಸೇರಿದ್ದು, ಇದನ್ನು ಅಶೋಕ್ ವನದ ಕಲ್ಲು ಎಂದು ಪ್ರಚಾರ ಮಾಡಲಾಗುತ್ತಿದೆ.ಆದರೆ, ವರದಿಗಳ ಪ್ರಕಾರ ಭಾರತದಲ್ಲಿನ ಶ್ರೀಲಂಕಾದ ಹೈಕಮಿಷನರ್ ಮಿಲಿಂದಾ ಮೊರಗೋಡ ಅವರು ಶ್ರೀಲಂಕಾದಲ್ಲಿರುವ ಸೀತಾ ಮಂದಿರದಿಂದ ಅಯೋಧ್ಯೆಯ ರಾಮ ಮಂದಿರಕ್ಕೆ ‘ಶಿಲಾ’ (ಕಲ್ಲನ್ನು) ದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅದು ಸ್ವತಃ  ಸೀತಾ ಮಾತೆ ಕುಳಿತ ಕಲ್ಲು ಎಂದು ಅವರು ಉಲ್ಲೇಖಿಸಿಲ್ಲ ಮತ್ತು ಇದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ವೈರಲ್ ಆಗಿರುವ ವಿಡಿಯೋವಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: Fact Check: AI ಸೃಷ್ಟಿಸಿದ ಚಿತ್ರಗಳನ್ನೇ ಕಾಶಿ, ಅಯೋಧ್ಯೆಯ ರೈಲ್ವೆ ನಿಲ್ದಾಣದ ನೀಲನಕ್ಷೆ ಎಂದು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: ಅಶೋಕ ವನದಲ್ಲಿ ಸೀತಾಮಾತೆ ಕುಳಿತಿದ್ದ ಪವಿತ್ರ ಕಲ್ಲನ್ನು ಶ್ರೀಲಂಕಾ ಏರ್ಲೈನ್ಸ್ ಅಯೋಧ್ಯೆಗೆ ತಂದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *