Fact Check | 10 ನಿಮಿಷದಲ್ಲಿ ಸಕ್ಕರೆ ಖಾಯಿಲೆ ಗುಣಪಡಿಸಲು ಸಾಧ್ಯವಿಲ್ಲ, ಆ ಔಷಧಿಯ ಕುರಿತು ಟಿವಿ ಪ್ರಚಾರ ಸುಳ್ಳು

ಇತ್ತೀಚಿನ ದಿನಗಳಲ್ಲಿ ಸುಳ್ಳು ಜಾಹಿರಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಇದನ್ನೇ ನಂಬಿ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ ಇದೀಗ ಇಂತಹದ್ದೇ ಒಂದು ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದೆ.

ಅದರಲ್ಲಿ ಖ್ಯಾತ ಸುದ್ದಿ ನಿರೂಪಕರಾದ ಅರ್ನಬ್‌ ಗೋಸ್ವಾಮಿ, ಸೇರಿದಂತೆ ದೇಶದ ಪ್ರಖ್ಯಾತ ಸುದ್ದಿ ವಾಹಿನಿಗಳ ನಿರೂಪಕರು 10 ನಿಮಿಷದಲ್ಲಿ ಮಧುಮೇಹ ಗುಣಪಡಿಸುವ ಔಷಧಿಯ ಕುರಿತು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದಾರೆ. ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಔಷಧಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಈ ಔಷಧಿಯನ್ನು ಒಮ್ಮೆ ಬಳಸಿ ನೋಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲಾಗಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳಲಾದ ಎಲ್ಲಾ ವೀಡಿಯೊಗಳು ನಕಲಿಯಾಗಿವೆ ಎಂದು ತಿಳಿದು ಬಂದಿದೆ.. ಈ ಪತ್ರಕರ್ತರು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ 10 ನಿಮಿಷಗಳಲ್ಲಿ ಗುಣಪಡಿಸುವಂತಹ ಯಾವುದೇ ಮಧುಮೇಹದ ಔಷಧಗಳನ್ನು ಎಂದಿಗೂ ಪ್ರಚಾರ ಮಾಡಿಲ್ಲ.

ಇನ್ನು ಪೋಸ್ಟ್‌ಗಳಲ್ಲಿ ಒದಗಿಸಲಾದ ಲಿಂಕ್‌ಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ವೆಬ್‌ಸೈಟ್‌ಗಳು ಪ್ರಕಟಿಸಿದ ಲೇಖನಗಳಿಗೆ ಕರೆದೊಯ್ಯುತ್ತವೆ. ಇನ್ನು ಈ ಔಷಧಿಗಳ ಕುರಿತು ಫುಡ್‌ ಆಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಅಲ್ಲಿ ಪರಿಶೀಲಿಸಿದಾಗ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ

ಕೇವಲ ಇಷ್ಟು ಮಾತ್ರವಲ್ಲದೆ ಹತ್ತು ನಿಮಿಷಗಳಲ್ಲಿ ಮಧುಮೇಹವನ್ನು ಗುಣಪಡಿಸುವ FDA ಯಿಂದ ಅನುಮೋದಿಸಲ್ಪಟ್ಟ ಅಂತಹ ಯಾವುದೇ ಔಷಧಿ ಇಲ್ಲ ಎಂಬುದು ತಿಳಿದು ಬಂದಿದೆ ಆದ್ದರಿಂದ, 10 ನಿಮಿಷದಲ್ಲಿ ಮಧುಮೇಹ ಗುಣಪಡಿಸುವ ಔಷಧಿಯ ಕುರಿತು ಖ್ಯಾತ ನಿರೂಪಕರು ತಮ್ಮ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದಾರೆ ಎಂಬುದು ಸುಳ್ಳಾಗಿದೆ.


ಇದನ್ನೂ ಓದಿ : ಭಾರತ ಮಹಿಳಾ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ದ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Video | ಹಿಂದು ಹಬ್ಬಗಳ ಸರ್ಕಾರಿ ರಜೆಯನ್ನು ಬಿಹಾರದ ಸರ್ಕಾರ ಕೈಬಿಟ್ಟಿದೆ ಎಂಬುದು ಸುಳ್ಳು | Bihar


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *