ಪುರುಷರ ಕ್ರಿಕೆಟ್ ವಿಶ್ವಕಪ್ 2023 ಮುಗಿದರೂ ಅದಕ್ಕೆ ಸಂಬಂಧಿಸಿದಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹರಿದಾಡುತ್ತಲೇ ಇವೆ. ಇತ್ತೀಚೆಗೆ ಭಾರತದ ಮಹಿಳಾ ಹಾಕಿ ತಂಡದ ಹುಡುಗಿಯರು ಸಂಭ್ರಮಿಸುತ್ತಿರುವ, ಆಸ್ಟ್ರೇಲಿಯಾ ಹಾಕಿ ತಂಡದ ಹುಡುಗಿಯರು ಬೇಸರದಿಂದ ಕುಳಿತ ಕೊಲ್ಯಾಜ್ ಪೋಟೋ ಒಂದು ವೈರಲ್ ಆಗುತ್ತಿದೆ. ಇದಕ್ಕೆ ತಲೆಬರಹವಾಗಿ “ಭಾರತ ಮಹಿಳಾ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದೆ. ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಆಸ್ಟ್ರೇಲಿಯನ್ನರ ವಿರುದ್ಧ ಸೋತ ನಂತರ ಆಸ್ಟ್ರೇಲಿಯನ್ನರ ವಿರುದ್ಧ ಈಗ ಸೇಡು ತೀರಿಸಿಕೊಳ್ಳಲಾಗಿದೆ.” ಎಂದು ಪ್ರತಿಪಾಧಿಸಿ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಇತ್ತೀಚೆಗೆ, ವಿಶ್ವ ಚಾಂಪಿಯನ್‌ಶಿಪ್ ಎಂಬ ಹೆಸರಿನ ಯಾವುದೇ ಹಾಕಿ ಪಂದ್ಯಾವಳಿ ನಡೆದಿಲ್ಲ. 2023 ರ ನವೆಂಬರ್ 19 ರಂದು ನಡೆದ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ 2023 ರ ನವೆಂಬರ್ 5 ರಂದು ನಡೆದ ಫೈನಲ್‌ನಲ್ಲಿ ಜಪಾನ್ ಅನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.
ಆದರೆ ಸುಳ್ಳನ್ನು ಪ್ರತಿಪಾದಿಸಲು ಕೊಲ್ಯಾಜ್ ಮಾಡಲಾದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಅಲ್ಲಿ ಬಳಸಿಕೊಳ್ಳಲಾಗಿರುವ ಪೋಟೋಗಳು ಇತ್ತೀಚಿನದಾಗಿರದೆ ಟೋಕಿಯೊ 2020ರ ಒಲಂಪಿಕ್ ಸಂದರ್ಭದ್ದಾಗಿದೆ. ಆದ್ದರಿಂದ, ಭಾರತ ಮಹಿಳಾ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ದ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದೆ ಎಂಬುದು ಸುಳ್ಳು.
ಇದನ್ನು ಓದಿ: ರಾಮನವಮಿ, ಶಿವರಾತ್ರಿ, ಮತ್ತು ಗಾಂಧಿ ಜಂಯಂತಿಯ ಸರ್ಕಾರಿ ರಜೆಯನ್ನು ಬಿಹಾರದ ಸರ್ಕಾರ ಕೈಬಿಟ್ಟಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: INDIA ಮೈತ್ರಿಕೂಟದ ಫೋಟೋಶೂಟ್‌ನಲ್ಲಿ ಅಜ಼ಾನ್ ಬಳಸಲಾಗಿದೆ ಎಂಬುದು ಸುಳ್ಳು | Congress |BJP | RSS | BJP IT Cell
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ