ರಾಮನವಮಿ, ಶಿವರಾತ್ರಿ, ಮತ್ತು ಗಾಂಧಿ ಜಯಂತಿಯ ಸರ್ಕಾರಿ ರಜೆಯನ್ನು ಬಿಹಾರದ ಸರ್ಕಾರ ಕೈಬಿಟ್ಟಿದೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಆಡಳಿತಾರೂಢ ಸರ್ಕಾರವನ್ನು ವಿರೋಧ ಪಕ್ಷಗಳು ಟೀಕಿಸುವ, ಅಪಪ್ರಚಾರ ಮಾಡುವ ಸಲುವಾಗಿ  ಅನೇಕ ಸುಳ್ಳು ಸುದ್ದಿಗಳನ್ನು ಮುನ್ನಲೆಗೆ ತರುತ್ತಿವೆ. ಇತ್ತೀಚೆಗೆ ಬಿಹಾರ ಸರ್ಕಾರ ಘೋಷಿಸಿರುವ ಶಾಲಾ ರಜೆಯ ಪಟ್ಟಿಯೊಂದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ರಾಮನವಮಿ, ಶಿವರಾತ್ರಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಮತ್ತು ಗಾಂಧಿ ಜಯಂತಿಯ ರಜೆ ರದ್ದು: ಬಕ್ರೀದ್, ಈದ್‌ಗೆ ತಲಾ 3 ದಿನ ಸರ್ಕಾರಿ ರಜೆ ಎಂದು ನಿತೀನ್ ಕುಮಾರ್ ನೇತೃತ್ವದ ಬಿಹಾರದ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಬಿಹಾರದ ಶಿಕ್ಷಣ ಇಲಾಖೆಯು 2024ರ ಶಾಲಾ ರಜೆಯ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದಿನಂತೆ 60 ದಿನಗಳ ಸರ್ಕಾರಿ ರಜೆಯನ್ನು ಪಾಲಿಸಲಾಗುವುದು ಎಂದು ಸ್ವಷ್ಟ ಪಡಿಸಿದೆ. ರಾಜ್ಯ ಸರ್ಕಾರವು 2024ಕ್ಕೆ ಪ್ರತ್ಯೇಕ ಉರ್ದು ಮತ್ತು ಹಿಂದಿ ಶಾಲಾ ರಜಾ ಕ್ಯಾಲೆಂಡರ್‌ಗಳನ್ನು ಹೊರಡಿಸಿದ್ದರಿಂದ ಗೊಂದಲ ಉಂಟಾಗಿರಬಹುದು ಎಂದಿದ್ದಾರೆ.

ಭಾನುವಾರದಂದು ಬಂದಿರುವ ಸರ್ಕಾರಿ ರಜೆಯನ್ನು ಪ್ರತ್ಯೇಕವಾಗಿ ನಮೂದಿಸಿಲ್ಲ ಹಾಗೂ ಈ ಬಾರಿ ಬೇಸಿಗೆ ರಜೆಯನ್ನು ಹತ್ತು ದಿನಗಳ ಹೆಚ್ಚುವಾರಿಯಾಗಿ ನೀಡಲಾಗಿದೆ. ಉರ್ದು ಶಾಲೆಗಳಲ್ಲಿ ಹಿಂದು ಹಬ್ಬಗಳನ್ನು ಆಚರಿಸದ ಕಾರಣ ಅವರಿಗೆ ಕೆಲವು ಹಿಂದು ಹಬ್ಬಗಳಲ್ಲಿ ರಜೆಯನ್ನು ನೀಡದೆ ಬಕ್ರೀದ್ ಮತ್ತು ರಂಜಾನ್ ತಿಂಗಳಲ್ಲಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದಾಗ್ಯೂ, ಶಿಕ್ಷಣ ಇಲಾಖೆಯ ಪತ್ರಿಕಾ ಪ್ರಕಟಣೆ ನೀಡಿ: “2024ನೇ ಸಾಲಿನ ರಜಾ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಸಾಮಾನ್ಯ ಆಡಳಿತ ಇಲಾಖೆಯು 2024ನೇ ಸಾಲಿಗೆ ನಿಗದಿಪಡಿಸಿದ ಸರ್ಕಾರಿ ರಜಾದಿನಗಳನ್ನು ನೋಡಿ ಶಾಲೆಗಳಲ್ಲಿನ ಎಲ್ಲಾ ರಜಾದಿನಗಳನ್ನು ನಿರ್ಧರಿಸಲಾಗಿದೆ ಎಂಬುದು ರಜಾ ಕೋಷ್ಟಕವನ್ನು ಸಿದ್ಧಪಡಿಸುವ ಹಿಂದಿನ ಮೂಲ ಉದ್ದೇಶವಾಗಿದೆ. ಸಾಮಾನ್ಯ ಶಾಲೆಗಳು ಮತ್ತು ಉರ್ದು ಶಾಲೆಗಳ ಕ್ಯಾಲೆಂಡರ್ ಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ ಮತ್ತು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಸಿದ್ಧಪಡಿಸಲಾಗಿದೆ. ಬಹುಶಃ ಈ ಕಾರಣದಿಂದಾಗಿ, ಹಬ್ಬಗಳಿಗೆ ಸಂಬಂಧಿಸಿದ ಈ ಗೊಂದಲ ಹರಡಿದೆ. ಹಿಂದಿನ ವರ್ಷಗಳಂತೆ, ಈ ವರ್ಷವೂ ಒಟ್ಟು ರಜಾದಿನಗಳಲ್ಲಿ (60 ದಿನಗಳು) ಯಾವುದೇ ಬದಲಾವಣೆಯಾಗಿಲ್ಲ” ಎಂದಿದ್ದಾರೆ.


ಇದನ್ನು ಓದಿ: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: Fact Check | ರಾಜಸ್ಥಾನದ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ದ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *