Fact Check | INDIA ಮೈತ್ರಿಕೂಟದ ಫೋಟೋಶೂಟ್‌ನಲ್ಲಿ ಅಜ಼ಾನ್‌ ಬಳಸಲಾಗಿದೆ ಎಂಬುದು ಸುಳ್ಳು..!

“ಹಿಂದೂ ಬಾಂಧವರೆ ಒಮ್ಮೆ ಈ ವಿಡಿಯೋ ನೋಡಿ. ಇದು ಕಾಂಗ್ರೆಸ್‌ ನೇತೃತ್ವದ INDIA ಒಕ್ಕೂಟದ ಫೋಟೋಶೂಟ್‌. ಆ ಸಂದರ್ಭದಲ್ಲಿ ಬಳಸಲಾಗಿರುವ ಅಜ಼ಾನ್‌ ಕೇಳಿದ್ರೆ ನಿಮಗೆ ಎಲ್ಲವೂ ಅರ್ಥವಾಗುತ್ತೆ.” ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇರುವಾಗಲೇ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಸದ್ದು ಮಾಡುತ್ತವೆ. ಅದೇ ರೀತಿಯಿಲ್ಲಿ ಈಗ ವೈರಲ್‌ ಆಗುತ್ತಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ವಿಡಿಯೋ ಬಗೆಗಿನ ಅಸಲಿ ವಿಚಾರ ಬಹಿರಂಗಗೊಂಡಿದೆ.

ಫ್ಯಾಕ್ಟ್‌ಚೆಕ್‌

ಮೊದಲಿಗೆ ವಿಡಿಯೋ ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ವಿಡಿಯೋದ ಕೆಲ ಕೀ ಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದೆವು. ಆಗ ಈ ರೀತಿಯ ಹಲವು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪತ್ತೆಯಾಗಿದೆ. ಆದರೆ ಈ ವಿಡಿಯೋವನ್ನು ಕೆಲವರು ಟೀಕೆ ಮಾಡಿದ್ದು ಇನ್ನು ಕೆಲವರು ಈ ವಿಡಿಯೋಗೆ ಸಿನಿಮಾ ಹಾಡುಗಳನ್ನ ಬಳಸಿ ಅಭಿಮಾನ ತೋರಿದ್ದಾರೆ.

ಬಳಿಕ ಮೂಲ ವಿಡಿಯೋ ಪರಿಶೀಲನೆ ನಡೆಸಿದಾಗ ಇದು ತಿರುಚಿದ ವಿಡಿಯೋ ಎಂಬುದು ಬಹಿರಂಗವಾಗಿದೆ. ಮೂಲ ವಿಡಿಯೋದಲ್ಲಿ INDIA ಮೈತ್ರಿಕೂಟದ ಸಭೆಗೆ ಕೊನೆಗೆ ತೆಗೆಯಲಾದ ಫೋಟೋಶೂಟ್‌ನ ಹಿನ್ನೆಲೆಯಲ್ಲಿ ಜಿತೇಗ ಇಂಡಿಯಾ ಜಿತೇಗ ಎಂಬ ಹಾಡನ್ನು ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಬಳಸಿಕೊಂಡಿದ್ದಾರೆ.

ಆದರೆ ಇದೇ ವಿಡಿಯೋದ ಹಾಡನ್ನು ಬದಲಾಯಿಸಿರುವ ಕಿಡಿಗೇಡಿಗಳು ಅಜ಼ಾನ್‌ ಅನ್ನು ಬಳಸಿ ಎಡಿಟ್ ಮಾಡಿದ್ದಾರೆ. ಆ ಮೂಲಕ ಇಂಡಿಯಾ ಮೈತ್ರಿ ಕೂಟ ಮುಸಲ್ಮಾನರ ಓಲೈಕೆ ಮಾಡುತ್ತಿದೆ ಎಂದು ಸುಳ್ಳು ಹರಡಲಾಗಿದೆ.


ಇದನ್ನೂ ಓದಿ : ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ : ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *