ಇತ್ತೀಚೆಗೆ ಕೃತಕ ಬುದ್ದಿಮತ್ತೆ(AI)ಯಿಂದ ಸೃಷ್ಟಿಸಿದ ಪೋಟೋಗಳನ್ನು ಮತ್ತು ವಿಡಿಯೋಗಳನ್ನು ನಿಜವೆಂದು ನಂಬಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ “ಇದು ಕಾಶಿ, ವಾರಣಾಸಿ ಅಥವಾ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ, ರೈಲ್ವೆ ಸ್ಟೇಷನ್ ನೀಲನಕ್ಷೆ” ಎಂದು ಪ್ರತಿಪಾದಿಸಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಇದು ಕೃತಕ ಬುದ್ಧಿಮತ್ತೆ(AI)ಯಿಂದ ಸೃಷ್ಟಿಸಿದ ಚಿತ್ರವಾಗಿದೆ. ಅಮರ್ ಎಂಬ ಇಂಜಿನಿಯರ್ ಒಬ್ಬ ಹಲವಾರು ರೈಲ್ವೆ ನಿಲ್ದಾಣಗಳ ಚಿತ್ರಗಳನ್ನು ಸೃಷ್ಟಿಸಿದ್ದು, ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈತ ಅಯೋಧ್ಯೆಯ ರೈಲ್ವೇ ನಿಲ್ದಾಣದ ಚಿತ್ರವನ್ನೂ ಸಹ AI ಸಹಾಯದಿಂದ ಸೃಷ್ಟಿಸಿದ್ದು, ಸಧ್ಯ ಭಾರತದಾದ್ಯಂತ ಹರಿದಾಡುತ್ತಿವೆ.
ಹೀಗೆ ಅನೇಕ ಪುಟಗಳು AI ಸಹಾಯದಿಂದ ಭಾರತದ ವಿವಿದ ರೈಲ್ವೆ ನಿಲ್ದಾಣಗಳ ಚಿತ್ರಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದ್ದರಿಂದ ಚಿತ್ರದಲ್ಲಿರುವ ರೈಲ್ವೆ ನಿಲ್ದಾಣ AI ಚಿತ್ರವೇ ಹೊರತು ನಿಜವಾದ ಕಾಶಿ ಮೆಟ್ರೋ ಸ್ಟೇಷನ್ನಿನ ನೀಲನಕ್ಷೆ ಅಲ್ಲ.
ಇದನ್ನು ಓದಿ: ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.