“ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ” ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ ಎನ್ನುವ ವಿಡಿಯೋ ಒಂದನ್ನು मोदी जी का जनता से अपील ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಈ ವೈರಲ್ ವಿಡಿಯೋ 27, ಜೂನ್ 2023ರಂದು ಮಧ್ಯಪ್ರದೇಶದ ಭುಪಾಲ್‌ನಲ್ಲಿ ನಡೆದ “ಮೆರಾ ಬೂತ್ ಸಬ್ಸೆ ಮಜಬೂತ್” ಕಾರ್ಯಕ್ರಮದ್ದಾಗಿದೆ. ಭಾಷಣದಲ್ಲಿ ಮೋದಿಯವರು “ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯ ಕಲ್ಯಾಣವಾಗಬೇಕಾದರೆ ಬಿಜೆಪಿಗೆ ಮತ ನೀಡಿ. ನೆಹರೂ ಮನೆತನ ಕಲ್ಯಾಣವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ” ಎಂದು ಹೇಳಿದ್ದಾರೆ. ಮೋದಿಯವರ ಮಾತುಗಳನ್ನು ಕಾಂಗ್ರೆಸ್‌ಗೆ ಮತ ನೀಡಿ ಎಂಬ ಅರ್ಥ ಬರುವಂತೆ ತಿರುಚಲಾಗಿದೆ.
ಇದರ ಸಂಪೂರ್ಣ ಭಾಷಣದ ವಿಡಿಯೋ ನರೇಂದ್ರ ಮೋದಿಯವರ ಅಧಿಕೃತ ಯೂಟೂಬ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು ನಾವು ವೀಕ್ಷಿಸಬಹುದಾಗಿದೆ. ಈ ಭಾಷಣದುದ್ದಕ್ಕೂ ಅವರು ಎಲ್ಲಿಯೂ ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳಿಲ್ಲ.
ಇದನ್ನು ಓದಿ: Fact Check: AI ಸೃಷ್ಟಿಸಿದ ಚಿತ್ರಗಳನ್ನೇ ಕಾಶಿ, ಅಯೋಧ್ಯೆಯ ರೈಲ್ವೆ ನಿಲ್ದಾಣದ ನೀಲನಕ್ಷೆ ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.