ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು

ತ್ರಿವರ್ಣ ಧ್ವಜ

ಭಾರತದಲ್ಲಿಯೇ ಭಾರತದ ಧ್ವಜವನ್ನು ಅವಮಾನಿಸಲಾಗಿದೆ. ತಮಿಳುನಾಡು ಪೋಲಿಸರು ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅವಮಾನ ಸಲ್ಲಿಸಿದ್ದಾರೆ. ಚಿದಂಬರಂ ಸ್ಟೇಡಿಯಂನಲ್ಲಿ (Chepauk ಸಚಿವ ಉದಯನಿಧಿ ಸ್ಟಾಲಿನ್ ಕ್ಷೇತ್ರ) ನಡೆದ ಪಾಕಿಸ್ತಾನದ ವಿರುದ್ದ ಆಫ್ಘಾನಿಸ್ತಾನ ವಿಶ್ವಕಪ್‌ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಸ್ಟೇಡಿಯಂ ಒಳಗೆ ಕೊಂಡೋಯ್ಯದಂತೆ ತಮಿಳುನಾಡಿನ ಪೋಲಿಸರು ತಡೆದಿದ್ದಾರೆ.  ಭಾರತದ ಧ್ವಜವನ್ನು ಇಂಡಿಯಾ ಒಕ್ಕುಟದ ಡಿಎಂಕೆ ಪಕ್ಷ ನಿಷೇದಿಸಿದೆ. ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಡಿಎಂಕೆ ಪಕ್ಷವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಮಲೈ ಸೇರಿದಂತೆ, ವೆರಿಫೈಡ್ ಖಾತೆ ಹೊಂದಿದ @Mr. Sinha, @Arun Pudur @Arvinth Easwaran ಸೇರಿದಂತೆ ಹಲವರು ಇದನ್ನು ತಮ್ಮ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌: ಈ ಕುರಿತು ಡಿಸಿಪಿ ದೇಶ್ಮುಖ್ ಶೇಖರ್ ಸಂಜಯ್‌ರವರು ಇಂಡಿಯನ್ ಎಕ್ಸಪ್ರೆಸ್‌ಗೆ ಸ್ಪಷ್ಟನೆ ನೀಡಿದ್ದು, ಕೇವಲ ಪ್ರಚೋದಿತ ಹೇಳಿಕೆಯ ಧ್ವಜ ಮತ್ತು ಬ್ಯಾನರ್‌ಗಳನ್ನು ಮಾತ್ರ ತಡೆದಿದ್ದು ಭಾರತೀಯ ತ್ರಿವರ್ಣ ಧ್ವಜ ಹಿಡಿದವರನ್ನು ಯಾವುದೇ ಕಾರಣಕ್ಕು ತಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡಿನ ಬಿಜೆಪಿ ಮುಖಂಡ ವಿನೋಜ್ ಪಿ. ಸೆಲ್ವಂ ಸೇರಿದಂತೆ ಅನೇಕರು ಈ ಪಂದ್ಯದ ವೇಳೆ ಭಾರತದ ಧ್ವಜವನ್ನು ಹಿಡಿದಿರುವುದನ್ನು ತಮ್ಮ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗ್ರೆಟರ್ ಚೆನೈ ಪೋಲಿಸ್ “ಉಲ್ಲೇಖಿಸಲಾದ ಘಟನೆಯನ್ನು ಗಮನಕ್ಕೆ ತರಲಾಗಿದೆ. ಎಂಎಸಿ ಕ್ರೀಡಾಂಗಣದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಸಂಬಂಧಪಟ್ಟ ಎಸ್ಐ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಅವರನ್ನು ಕಂಟ್ರೋಲ್ ರೂಂಗೆ ಕರೆಸಿಕೊಳ್ಳಲಾಯಿತು. ವರದಿಗಳ ಆಧಾರದ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಏಕಾಕಿ ಘಟನೆಯನ್ನು ಹೊರತುಪಡಿಸಿ, ಬೇರೆ ಯಾರನ್ನೂ ತಡೆದಿರುವುದು ವರದಿಯಾಗಿಲ್ಲ. ಅನೇಕ ಪ್ರೇಕ್ಷಕರು ಕ್ರೀಡಾಂಗಣದ ಒಳಗೆ ಭಾರತೀಯ ತ್ರಿವರ್ಣ ಧ್ವಜವನ್ನು ಮುಕ್ತವಾಗಿ ಒಯ್ಯುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ ಎಂದು ಗಮನಿಸಲಾಗಿದೆ.” ಎಂದು ತನ್ನ ಅಧಿಕೃತ X ಖಾತೆಯಿಂದ ಈ ಕುರಿತು ಸ್ವಷ್ಟನೆ ನೀಡಿದೆ.

ಆದ್ದರಿಂದ ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು.


ಇದನ್ನು ಓದಿ: ಭಾರತೀಯ ಸೈನ್ಯದ ಬದಲು, ಕಾರ್ಮಿಕರು & ರೈತರ ಸೈನ್ಯ ಬೇಕೆಂದು ರಾಹುಲ್ ಗಾಂಧಿ ಪ್ರತಿಪಾದಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *