ಭಾರತೀಯ ಸೈನ್ಯದ ಬದಲು, ಕಾರ್ಮಿಕರು ಮತ್ತು ರೈತರ ಸೈನ್ಯ ಬೇಕೆಂದು ರಾಹುಲ್ ಗಾಂಧಿ ಪ್ರತಿಪಾದಿಸಿಲ್ಲ

ರಾಹುಲ್ ಗಾಂಧಿ

ಭಾರತದ ಕಾರ್ಮಿಕರು, ರೈತರು ಮತ್ತು ನೌಕರರನ್ನು ಬಳಸಿಕೊಂಡರೆ ಚೀನಾದ ವಿರುದ್ದ ಹೋರಾಡಲು ಭಾರತೀಯ ಸೇನೆಯ ಅಗತ್ಯವೇ ಇರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಇಂತವನನ್ನು ಮುಂದಿನ ಪ್ರಧಾನಿ ಮಾಡಿದರೆ ದೇಶದ ಕತೆ ಏನಾಗಬಹುದು ಎಂದು ಚಿಂತಿಸಿ” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಈ ವಿಡಿಯೋ 24 ಜನವರಿ, 2021ರಂದು ತಮಿಳುನಾಡಿನಲ್ಲಿ ನೇಕಾರ ಸಮುದಾಯದ ಜೊತೆಗೆ ರಾಹುಲ್ ಗಾಂಧಿ ನಡೆಸಿದ ಸಂವಾದವಾಗಿದೆ. “ಭಾರತದ ದುರ್ಬಲ ಆರ್ಥಿಕತೆಯಿಂದಾಗಿ ನಮ್ಮ ಗಡಿಗಳಲ್ಲಿ ಚೀನಾದ ಅತಿಕ್ರಮಣಗಳು ನಡೆಯುತ್ತಿದೆ ಎಂದು ಸೂಚ್ಯವಾಗಿ ಹೇಳಿದ್ದರು. ಕಾರ್ಮಿಕ ವರ್ಗವನ್ನು ಸಬಲೀಕರಣಗೊಳಿಸಿ, ನಮ್ಮ ಆರ್ಥಿಕತೆಯನ್ನು ಬಲಪಡಿಸಿದರೆ ಚೀನಾದ ಅತಿಕ್ರಮಣ ನಿಲ್ಲಿಸಬಹುದು ಎಂದು ಸಲಹೆ ನೀಡಿದ್ದರು. ಅವರ ಭಾಷಣದ ಪೂರ್ಣ ಪಠ್ಯವನ್ನು ದ ಇಂಡಿಯನ್ ನ್ಯಾಷನಲ್ ಡೈಲಿ ಯ ಲೇಖನದಲ್ಲಿ ನಾವು ಓದಬಹುದು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೂಡ ತಮ್ಮ ಅಧಿಕೃತ ಯೂಟೂಬ್ ಖಾತೆಯಲ್ಲಿ ನೇಕಾರ ಸಮುದಾಯದ ಜೊತೆ ರಾಹುಲ್ ಗಾಂಧಿ ನಡೆಸಿದ ಸಂವಾದವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಕಾರ್ಮಿಕರು, ರೈತರಿಂದ ಭಾರತದ ರಕ್ಷಣಾ ಪಡೆಗಳನ್ನು ಬದಲಿಸಬಹುದು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿಲ್ಲ.


ಇದನ್ನು ಓದಿ: ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *