ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು. 33 ಸೆಕೆಂಡುಗಳ ಈ ವಿಡಿಯೋದಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಏಸು ಶಿಲುಬೆಯನ್ನು ನೆಲದ ಮೇಲೆ ಎಸೆದು ನಂತರ ಅದನ್ನು ನಾಶಪಡಿಸುವುದನ್ನು ತೋರಿಸಲಾಗಿದೆ. ಬಂದೂಕುಧಾರಿಗಳು ಇತರ ಕ್ರಿಶ್ಚಿಯನ್ ಪ್ರತಿಮೆಗಳನ್ನು ನಾಶಪಡಿಸುವುದನ್ನು ಸಹ ಕ್ಲಿಪ್ ನಲ್ಲಿ ನೋಡಬಹುದಾಗಿದೆ. ಅಮಿತಾಭ್ ಚೌಧರಿ (@MithilaWaala) ಮತ್ತು ಅನಿಲ್ ಕೌಹ್ಲಿ ಎಂಬುವವರು ಈ ವಿಡಿಯೋವನ್ನು ತಮ್ಮ ಎಕ್ಸ್(X) ಖಾತೆಯಲ್ಲಿ ” ಗಾಜಾ ನಗರದ ಬ್ಯಾಪ್ಟಿಸ್ಟ್ ಚರ್ಚ್ ಅನ್ನು ನಾಶಪಡಿಸಿ ಯೇಸುವಿನ ಪ್ರತಿಮೆಯನ್ನು ಒದೆಯುತ್ತಿದ್ದಾರೆ, ಇದು ತಮ್ಮ ಭೂಮಿಯನ್ನು ಮರಳಿ ಪಡೆಯಲು ಅವರ ಹೋರಾಟವೇ ಅಥವಾ ಈ ವಿಶ್ವದ ಇತರ ಧರ್ಮಗಳ ವಿರುದ್ಧ ಜಿಹಾದ್ ಆಗಿದೆಯೇ? ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಲವರು ಈ ಪೋಸ್ಟನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: 2017ರಲ್ಲಿ ಫಿಲಿಪೈನ್ಸ್‌ನ ಮರಾವಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ಭಯೋತ್ಪಾದಕರು ಕ್ಯಾಥೊಲಿಕ್ ಚರ್ಚ್ ಅನ್ನು ಧ್ವಂಸಗೊಳಿಸಿದ ವಿಡಿಯೋ ಇದಾಗಿದೆ. ನ್ಯೂಯಾರ್ಕ್ ಪೋಸ್ಟ್ ಜೂನ್ 6, 2017 ರಂದು ಯೂಟ್ಯೂಬ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, “ಇಸ್ಲಾಮಿಕ್ ಉಗ್ರಗಾಮಿಗಳು ಫಿಲಿಪೈನ್ಸ್‌ನ ಕ್ಯಾಥೊಲಿಕ್ ಚರ್ಚ್ ಅನ್ನು ವಿರೂಪಗೊಳಿಸಿದ್ದಾರೆ, ಅನೇಕ ಧಾರ್ಮಿಕ ಅವಶೇಷಗಳನ್ನು ನಾಶಪಡಿಸಿದ್ದಾರೆ ಮತ್ತು ಬಲಿಪೀಠಕ್ಕೆ ಬೆಂಕಿ ಹಚ್ಚಿದ್ದಾರೆ. ಮರಾವಿಯಲ್ಲಿ ಸೆರೆಹಿಡಿಯಲಾದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಜಾಲದ ಅಂಗಸಂಸ್ಥೆಯಾದ ಅಮಾಕ್ ನ್ಯೂಸ್ ಏಜೆನ್ಸಿ ಈ ವೀಡಿಯೊವನ್ನು ಬಿಡುಗಡೆ ಮಾಡಿದೆ. ಎಂದು ಹೇಳಿದೆ. ವೈರಲ್ ವೀಡಿಯೊದಲ್ಲಿರುವಂತೆ ಅದೇ ದೃಶ್ಯಗಳನ್ನು ಕೆಳಗಿನ ಈ ವೀಡಿಯೊದಲ್ಲಿ ನೋಡಬಹುದು.
ಐಎಸ್(IS) ಸಂಬಂಧಿತ ಮೌಟ್ ಗುಂಪು ಮೇ 2017 ರಲ್ಲಿ ಮರಾವಿ ನಗರಕ್ಕೆ ಮುತ್ತಿಗೆ ಹಾಕಿತ್ತು, ಇದು ಭಯೋತ್ಪಾದಕ ಗುಂಪು ಮತ್ತು ಫಿಲಿಪೈನ್ಸ್ ಸರ್ಕಾರದ ನಡುವಿನ ಐದು ತಿಂಗಳ ಯುದ್ಧಕ್ಕೆ ಕಾರಣವಾಯಿತು, ಇದು ಸುಮಾರು 168 ಸೈನಿಕರು ಮತ್ತು ಪೊಲೀಸರು, 47 ನಾಗರಿಕರು ಮತ್ತು 1,000 ಭಯೋತ್ಪಾದಕರನ್ನು ಬಲಿ ತೆಗೆದುಕೊಂಡಿತು.
ಆದ್ದರಿಂದ ಇದು ಇಸ್ಲಾಮಿಕ್ ಸ್ಟೇಟ್ (ಐಎಸ್) ಗೆ ಸಂಯೋಜಿತವಾಗಿರುವ ಭಯೋತ್ಪಾದಕರು ಕ್ಯಾಥೊಲಿಕ್ ಚರ್ಚ್ ಅನ್ನು ಧ್ವಂಸಗೊಳಿಸುತ್ತಿರುವ ಫಿಲಿಪ್ಪೀನ್ಸ್‌ನ ಹಳೆಯ ವೀಡಿಯೊ. ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check: 5000 ಹಿಂದೂ ಸಾಧು-ಸಂತರನ್ನು, ಇಂದಿರಾಗಾಂಧಿ ಗುಂಡಿಕ್ಕಿ ಹತ್ಯೆಗೈಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.