Fact Check : ಪ್ರಧಾನಿ ಮೋದಿ ಅವರ ಸರ್ಕಾರ ಅವಧಿಯಲ್ಲೂ ಬಾಂಬ್‌ ಸ್ಪೋಟಗಳು ಸಂಭವಿಸಿವೆ

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ಸರ್ಕಾರದ ಪರವಾಗಿ ಮತ್ತು ವಿರುದ್ಧವಾಗಿ ಹಲವಾರು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ.

ಇದಕ್ಕೆ ಪೂರಕ ಎಂಬಂತೆ “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ಇದುವರೆಗೂ ಭಾರತದಲ್ಲಿ ಬಾಂಬ್ ಸ್ಫೋಟವಾಗಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ” ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಈ ರೀತಿಯ ಸುಳ್ಳು ಸುದ್ದಿಯೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Fact Check : ಈ ಸುದ್ದಿಯ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ಸ್ಫೋಟಗಳನ್ನು ವಿವರಿಸುವ ಸುದ್ದಿ ಹಲವಾರು ವರದಿಗಳು ಕಂಡು ಬಂದವು . ಇದನ್ನು ಹೊರತು ಪಡಿಸಿ ಇನ್ನಷ್ಟು ಮಾಹಿತಿಯನ್ನ  ಪಡೆದಾಗ 18 ಸೆಪ್ಟೆಂಬರ್ 2016 ರಂದು ಉರಿಯ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಯಿಂದಾಗಿ 17 ಸೇನಾ ಸಿಬ್ಬಂದಿಗಳ ಹುತಾತ್ಮರಾಗಿದ್ದರು. ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು CRPF ವ್ಯಾನ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು ಇದರ ಪರಿಣಾಮವಾಗಿ 42 ಕ್ಕೂ ಹೆಚ್ಚು ಜನ ಯೋಧರು ಹುತಾತ್ಮರಾಗಿದ್ದರು.

ಭಾರತದ ಈಶಾನ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ, 2019 ರಲ್ಲಿ, ಅಸ್ಸಾಂನ ಗುವಾಹಟಿಯಲ್ಲಿ ಉಲ್ಫಾ (ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ) ನಡೆಸಿದ ಗ್ರೆನೇಡ್ ದಾಳಿಯಲ್ಲಿ ಆರು ಜನರು ಗಾಯಗೊಂಡರು. ಇತ್ತೀಚೆಗೆ, ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಪ್ರಬಲವಾದ ಸ್ಫೋಟಕ ಸಾಧನದವನ್ನ (ಐಇಡಿ) ಬಳಸಿ ನಡೆಸಿದ ದಾಳಿಯಲ್ಲಿ ಆರು ಜನರು ತೀವ್ರವಾಗಿ ಗಾಯಗೊಂಡಿದ್ದರು.

 

ಇಷ್ಟು ಮಾತ್ರವಲ್ಲದೆ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು 2023 ರ ಏಪ್ರಿಲ್‌ನಲ್ಲಿ ನಡೆಸಿದ ಇತ್ತೀಚಿನ ದಾಳಿಯು, ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭದ್ರತಾ ಪಡೆಗಳ ಮೇಲೆ ನಕ್ಸಲರು ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಅಲ್ಲದೆ, ಜನವರಿ 2021 ರಲ್ಲಿ ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ.

ಇನ್ನು ಈ ಕುರಿತು ‘ದಕ್ಷಿಣ ಏಷ್ಯಾ ಭಯೋತ್ಪಾದನೆ ಪೋರ್ಟಲ್’ನಲ್ಲಿ ಮಾಹಿತಿ ಹುಡುಕಿದಾಗ, ಇದು 2014 ರಿಂದ 2023 ರವರೆಗೆ ಭಾರತದಲ್ಲಿ 629 ಪ್ರಮುಖ ಬಾಂಬ್‌ ದಾಳಿಗಳ ಕುರಿತು ಮಾಹಿತಿ ನೀಡಿವೆ ಮತ್ತು ನರೇಂದ್ರ ಮೋದಿಯವರ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಬಾಂಬ್‌ ಸ್ಫೋಟಗಳ ಕುರಿತು ನಿಖರ ಸಾಕ್ಷಿಗಳೊಂದಿಗೆ ಮಾಹಿತಿ ನೀಡಿದೆ.

ಇನ್ನು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (NSG) ಅಡಿಯಲ್ಲಿ ರಾಷ್ಟ್ರೀಯ ಬಾಂಬ್ ಡೇಟಾ ಸೆಂಟರ್ (NBDC) ಮಾಹಿತಿ ನೀಡಿದ್ದು 2016 ರಲ್ಲಿ ದೇಶದಲ್ಲಿ 406 ಸ್ಫೋಟಕ ಘಟನೆಗಳು ನಡೆದಿವೆ ಎಂದು ವರದಿ ಮಾಡಿದೆ. ಈ ಘಟನೆಗಳಲ್ಲಿ ಒಟ್ಟು 479 ಜನರು ಪ್ರಾಣವನ್ನು ಮಾಹಿತಿನ್ನ ನೀಡಿಲಾಗಿದ್ದು, ಈ ಕುರಿತು ಕೇಂದ್ರ ಗೃಹ ಸಚಿವಾಲಯ ಕೂಡ ಮಾಹಿತಿ ನೀಡಿದೆ.

ಎಲ್ಲಾ ಎಲ್ಲಾ ದತ್ತಾಂಶಗಳನ್ನು ಪರಿಶೀಲಿಸಿದ ಬಳಿಕ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಲಿಕ ದೇಶದಲ್ಲಿ ಬಾಂಬ್‌ ಸ್ಪೋಟದಂತ ಘಟನೆಗಳು ನಡೆದಿಲ್ಲ ಎಂಬುವುದು ಸುಳ್ಳಿನಿಂದ ಕೂಡಿದೆ ಎಂಬುವು ದೃಢ ಪಟ್ಟಿದೆ

Leave a Reply

Your email address will not be published. Required fields are marked *