Fact Check : ಅಸಾದುದ್ದೀನ್ ಓವೈಸಿ ಜೊತೆ ಪ್ರಧಾನಿ ಮೋದಿ ಅವರು ಕುಳಿತಿರುವ ಫೋಟೋ ನಕಲಿ..!

“ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗೆ ತಯಾರಿ ನಡೆಸಲು ಅಸಾದುದ್ದೀನ್ ಓವೈಸಿಗೆ ತರಬೇತಿ ನೀಡುತ್ತಿರುವಾಗ ದೇಶದ ಯುವಜನತೆ ಜಾಗರೂಕರಾಗಿರಿ, ಅಧಿಕಾರಕ್ಕಾಗಿ ಏನು ಬೇಕಾದರು ಆಗ ಬಹುದು” ಎಂಬ ಬರಹವೊಂದು ಪ್ರಧಾನಿ ಮೋದಿ ಅವರು ಓವೈಸಿ ಅವರೊಂದಿಗೆ ಇರುವ ರೀತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರುತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಫೋಟೋದ ನಿಜ ರಹಸ್ಯ ಬಯಲಾಗಿದೆ. ಅಸಲಿಗೆ ಈ ವೈರಲ್‌ ಪೋಟೋಗಳು ಬೇರೆ ಬೇರೆಯದ್ದಾಗಿದ್ದು ಎರಡನ್ನೂ ಡಿಜಿಟಲ್‌ ಮಾದರಿಯಲ್ಲಿ ಒಂದೇ…

Read More

Fact Check : “ಗೋವು ನಮ್ಮ ತಾಯಿಯಲ್ಲ” ಎಂದು ದಿಗ್ವಿಜಯ್ ಸಿಂಗ್‌ ಹೇಳಿಲ್ಲ

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಇದೀಗ ಅಲ್ಲಿನ ಆಡಳಿತರೂಢ  ಸರ್ಕಾರದ ವಿರುದ್ಧ ಮತ್ತು ಅಲ್ಲಿನ ವಿರೋಧ ಪಕ್ಷದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಅವರ ವಿರುದ್ಧ ಹಲವು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದೆ.  ಇದೇ ರೀತಿಯಾಗಿ “ಗೋವು ನಮ್ಮ ತಾಯಿಯಲ್ಲ. ಅದರ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ” ಎಂಬ ವಿಡಿಯೋ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ ಹೇಳಿದ್ದಾರೆ ಎಂಬ ಸುದ್ದಿಯೊಂದಿಗೆ…

Read More

Fact Check : ಛತ್ತೀಸ್‌ಗಢ ಬಿಜೆಪಿ 2 ಲಕ್ಷ ರೂ ರೈತರ ಸಾಲ ಮನ್ನಾ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆ ರಾಜ್ಯದಲ್ಲಿ ರಾಜಕೀಯವಾಗಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿವೆ. ಅದೇ ರೀತಿಯಲ್ಲಿ ಇದೀಗ ಛತ್ತೀಸ್‌ಗಢದ ಬಿಜೆಪಿ ಪ್ರಣಾಳಿಕೆಯ ವಿಚಾರ ಸದ್ದು ಮಾಡುತ್ತಿದೆ ಅದರಲ್ಲಿ  “ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು ಮತ್ತು ಸ್ವಸಹಾಯ ಸಂಘಗಳ ಸುಮಾರು 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಛತ್ತೀಸ್‌ಗಢ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಚುನಾವಣೆಯ…

Read More

Fact Check : ಪ್ರಧಾನಿ ಮೋದಿ ಅವರ ಸರ್ಕಾರ ಅವಧಿಯಲ್ಲೂ ಬಾಂಬ್‌ ಸ್ಪೋಟಗಳು ಸಂಭವಿಸಿವೆ

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ಸರ್ಕಾರದ ಪರವಾಗಿ ಮತ್ತು ವಿರುದ್ಧವಾಗಿ ಹಲವಾರು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಇದಕ್ಕೆ ಪೂರಕ ಎಂಬಂತೆ “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ಇದುವರೆಗೂ ಭಾರತದಲ್ಲಿ ಬಾಂಬ್ ಸ್ಫೋಟವಾಗಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ” ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಈ ರೀತಿಯ ಸುಳ್ಳು ಸುದ್ದಿಯೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Fact Check : ಈ ಸುದ್ದಿಯ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಜಮ್ಮು ಮತ್ತು…

Read More

ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಸಾವಿರ ಸಾಲ ಕೊಡುತ್ತಾರೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಹಳಷ್ಟು ಜನಪ್ರಿಯವಾಗಿದ್ದು, ಈ ಯೋಜನೆಯ ಲಾಭವನ್ನು ಇಂದಿಗೂ ಹಲವರು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿನೇ ಒಂದಲ್ಲ ಒಂದು ಕಾರಣದಿಂದ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸುದ್ದಿಯಲ್ಲಿದೆ. ಆದರೆ ಈಗ ಇದೇ ಪಿಎಂ ಮುದ್ರಾ ಯೋಜನೆ ಸುಳ್ಳು ಸುದ್ದಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಕುರಿತು ಕೇವಲ ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಈ ವಿಚಾರದ ಕುರಿತು ನೀವು ಎಚ್ಚರಿಕೆಯನ್ನು ತೆಗೆದುಕೊಳ್ಳದೇ ಹೋದರೆ ನೀವು ಸೈಬರ್‌ ವಂಚನೆಗೆ ಒಳಗಾಗುವ…

Read More