ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಇದೀಗ ಅಲ್ಲಿನ ಆಡಳಿತರೂಢ ಸರ್ಕಾರದ ವಿರುದ್ಧ ಮತ್ತು ಅಲ್ಲಿನ ವಿರೋಧ ಪಕ್ಷದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ
ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಹಲವು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದೆ. ಇದೇ ರೀತಿಯಾಗಿ “ಗೋವು ನಮ್ಮ ತಾಯಿಯಲ್ಲ. ಅದರ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ” ಎಂಬ ವಿಡಿಯೋ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ ಎಂಬ ಸುದ್ದಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಸತ್ಯ ಶೋಧನೆ ನಡೆಸಿದಾಗ ದಿಗ್ವಿಜಯ್ ಸಿಂಗ್ ಅವರು 25 ಡಿಸೆಂಬರ್ 2021 ರಲ್ಲಿ ಮಧ್ಯಪ್ರದೇಶದ ಭೂಪಾಲ್‌ಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ. ಅವರು ಸಮಾರಂಭವೊಂರಲ್ಲಿ ಆರ್‌ಎಸ್‌ಎಸ್ ಕುರಿತು ಮಾತನಾಡುವಾಗ, ಸಾವರ್ಕರ್ ಗೋಮಾಂಸ ತಿನ್ನುವುದರ ಪರವಾಗಿದ್ದರು. ಅವರ ಪುಸ್ತಕದಲ್ಲಿಯೂ ಅದನ್ನು ಬರೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಹಲವು ಮಾಧ್ಯಮಗಳು ಕೂಡ ವರದಿ ಮಾಡಿವೆ.
ಇದರ ಜೊತೆಗೆ ಈ ಭಾಷಣದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ನಡೆಸಿರುವ ಅವರು ಬಿಜೆಪಿ ಸರ್ಕಾರ ಗೋವುಗಳನ್ನ ಬಳಸಿಕೊಂಡು ರಾಜಕೀಯ ಮಾಡುತ್ತಿರುವುದರ ಕುರಿತಾಗಿ ಕೂಡ ಅವರು ಕಟುವಾಗಿ ಟೀಕೆ ಮಾಡಿದ್ದಾರೆ. ಈ ಭಾಷಣವನ್ನು ಸಂಪೂರ್ಣವಾಗಿ ಗಮನಿಸಿದಾಗ ಅದರಲ್ಲಿ ದಿಗ್ವಿಜಯ್ ಸಿಂಗ್ ಅವರು ಗೋಮಾಂಸದ ಕುರಿತು ಸಾವರ್ಕರ್ ಅವರ ನಿಲುವು ಮತ್ತು ಬಿಜೆಪಿ ಸರ್ಕಾರದ ನಡೆಗಳನ್ನ ಟೀಕಿಸಿರುವುದು ಸ್ಪಷ್ಟವಾಗಿದೆ ಈ ಕುರಿತು ಫ್ಯಾಕ್ಟ್‌ಲಿ ಕೂಡ ಫ್ಯಾಕ್ಟ್ ಚೆಕ್ ಮಾಡಿ ಸತ್ಯಾಂಶವನ್ನು ಬಯಲಿಗೆಳೆದಿದೆ.
“ಹಾಗಾಗಿ ಗೋವು ನಮ್ಮ ತಾಯಿಯಲ್ಲ. ಅದರ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ” ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆಂಬುದು ಸುಳ್ಳು.
ಇದನ್ನೂ ಓದಿ: ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು
ವಿಡಿಯೋ ನೋಡಿ : Nehru | ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು | Seva Dal | Fact check | Fake News
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ