ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಶಸ್ತ್ರಾಗಾರವಿಲ್ಲ, ಇದು ವೆಸ್ಟ್ ಬ್ಯಾಂಕ್‌ನ ಹಳೆಯ ವಿಡಿಯೋ

ಗಾಜಾದ

ಗಾಜಾದ ‘ಆಲ್ ಶಿಫಾ’ ಆಸ್ಪತ್ರೆಯಲ್ಲಿ ದೊರೆತ ಅತ್ಯಂತ ನವೀನ ತಂತ್ರಜ್ಞಾನದ ಯುದ್ಧೋಪಕರಣಗಳು! ಇದೇನು ಆಸ್ಪತ್ರೆಯೋ ಅಥವಾ ಶಸ್ತ್ರಾಗಾರವೋ!? ಎಂದು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ದೊಡ್ಡ ಕೋಣೆಯೊಂದರಲ್ಲಿ ಹಲವು ರೀತಿಯ ಶಸ್ತ್ರಾಸ್ತ್ರಗಳು ಇರುವುದನ್ನು ನೋಡಬಹುದು. ಈ ವಿಡಿಯೋವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಮಾಸ್ ಸುರಂಗದಲ್ಲಿನ ಶಶ್ತ್ರಾಗಾರ ಎಂದು ಹಲವಾರು ಬಲಪಂಥೀಯ ವಿಚಾರಧಾರೆಯುಳ್ಳ ವ್ಯಕ್ತಿಗಳ ಹಂಚಿಕೊಂಡಿದ್ದಾರೆ.

ಗಾಜಾದ

 

ವಿಡಿಯೋ ಗಾಜಾ ಆಸ್ಪತ್ರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ಇದೇ ವೀಡಿಯೊವನ್ನು ಹಮಾಸ್-ಇಸ್ರೇಲ್ ಯುದ್ಧ ಆರಂಭವಾಗುವ ಮುನ್ನವೇ ಟ್ವೀಟ್ ಮಾಡಿರುವುದು ಕಂಡುಬಂದಿದೆ. ಅಕ್ಟೋಬರ್ 7 ರಂದು ಹಮಾಸ್-ಇಸ್ರೇಲ್ ಯುದ್ಧ ಆರಂಭವಾಗಿದೆ. ಆದರೆ ಈ ವಿಡಿಯೋವನ್ನು ಇಸ್ರೇಲಿ ಪತ್ರಕರ್ತ ಹನಾನ್ ಅಮಿಯುರ್ ಎಂಬುವವರು ಆಗಸ್ಟ್ 31 ರಂದು ಟ್ವೀಟ್ ಮಾಡಿದ್ದಾರೆ. ಇದು ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್ ನಗರದಲ್ಲಿ ಚಿತ್ರಿಸಲಾಗಿದೆ ಎಂದು ಬರೆದಿದ್ದಾರೆ. ವೆಸ್ಟ್ ಬ್ಯಾಂಕ್ ನಗರವು ಗಾಜಾದಂತೆ ಹಮಾಸ್‌ನಿಂದ ನಿಯಂತ್ರಿಸಲ್ಪಡುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಮೂಲ ವಿಡಿಯೋದಲ್ಲಿ ಪತ್ರಕರ್ತ ಹನಾನ್ ಅಮಿಯುರ್ “ಇಂದು ರಾಮಲ್ಲಾಹ್‌ದಲ್ಲಿ ಸಿಕ್ಕಿಬಿದ್ದಿದೆ,  ಓಸ್ಲೋದ 30 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸೂಕ್ತವಾದ ಔಪಚಾರಿಕ ನೀತಿಕಥೆ – ಜಿಯೋನಿಸ್ಟ್ ಉದ್ಯಮದ ಇತಿಹಾಸದಲ್ಲಿ ಅತ್ಯಂತ ಗಂಭೀರ ಮತ್ತು ಹಾನಿಕಾರಕ ತಪ್ಪು.” ಎಂದು ಬರೆದಿದ್ದಾರೆ. ಈ ಎಲ್ಲಾ ಆಧಾರಗಳಿಂದ ಈ ವಿಡಿಯೋ ಗಾಜಾದ ಆಸ್ಪತ್ರೆಯಲ್ಲ ಬದಲಿಗೆ ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್‌ ನಗರದ್ದು, ಆ ನಗರವನ್ನು ಹಮಾಸ್‌ಗಳು ನಿಯಂತ್ರಿಸುತ್ತಿಲ್ಲ ಮತ್ತು ಯುದ್ಧ ಆರಂಭವಾಗುವ ಮೊದಲೇ ಚಿತ್ರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ:  ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *