ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಸಾವಿರ ಸಾಲ ಕೊಡುತ್ತಾರೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಹಳಷ್ಟು ಜನಪ್ರಿಯವಾಗಿದ್ದು, ಈ ಯೋಜನೆಯ ಲಾಭವನ್ನು ಇಂದಿಗೂ ಹಲವರು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿನೇ ಒಂದಲ್ಲ ಒಂದು ಕಾರಣದಿಂದ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸುದ್ದಿಯಲ್ಲಿದೆ. ಆದರೆ ಈಗ ಇದೇ ಪಿಎಂ ಮುದ್ರಾ ಯೋಜನೆ ಸುಳ್ಳು ಸುದ್ದಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಕುರಿತು ಕೇವಲ ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಈ ವಿಚಾರದ ಕುರಿತು ನೀವು ಎಚ್ಚರಿಕೆಯನ್ನು ತೆಗೆದುಕೊಳ್ಳದೇ ಹೋದರೆ ನೀವು ಸೈಬರ್‌ ವಂಚನೆಗೆ ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಈ ಯೋಜನೆಯ ಕುರಿತು ಇರುವ ಸುಳ್ಳು ಮತ್ತು ಸತ್ಯದ ಮಾಹಿತಿ ಏನು ಎಂಬುವುದು ಈ ಕೆಳಗಿನಂತೆ ಓದಿ ಮತ್ತು ಎಚ್ಚರಿಕೆ ವಹಿಸಿ.

ಸುಳ್ಳು ;  ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 20,55,000 ರೂ ಸಾಲವನ್ನು ನೀಡಲಾಗುತ್ತಿದೆ, ನಿಮ್ಮ ಮೊಬೈಲ್‌ಗೆ ಬಂದ ಸಂದೇಶದ ಲಿಂಕ್‌ ಕ್ಲಿಕ್‌ ಮಾಡಿ ಯೋಜನೆಯ ಲಾಭ ಪಡೆಯಿರಿ

ಸತ್ಯ ; ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ರೀತಿಯ ಸಂದೇಶ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಆದರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಸಾಲದ ಮಿತಿ 10 ಲಕ್ಷ ರೂ. ಆಗಿದ್ದು, ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಈ ಯೋಜನೆಯಲ್ಲಿ ದೊರಕುವುದಿಲ್ಲ. ಈ ಕುರಿತು PIB ಅಧಿಕೃತ ಮಾಹಿತಿ ನೀಡಿದೆ.

ನಿಮ್ಮ ಮೊಬೈಲ್‌ಗೆ ಈ ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಹಣ ಬಂದಿದೆ ಎಂದು ಸಂದೇಶ ಬಂದರೆ ಆ ಲಿಂಕ್‌ಗಳನ್ನ ಒತ್ತ ಬೇಡಿ, ಎಚ್ಚರ ತಪ್ಪಿದರೆ ನಿಮ್ಮನ್ನ ವಂಚಿಸುವ ಸಾಧ್ಯತೆ ಹೆಚ್ಚಿದೆ.


ಈ ಸುದ್ದಿಯನ್ನೂ ಓದಿ ; ಮೋದಿ ಪ್ರಧಾನಿಯಾದ ನಂತರ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *