2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಮಣಿಪುರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

“ಮಣಿಪುರದಲ್ಲಿ ಸಂಗಿಗಳ ಅಟ್ಟಹಾಸ. ಐದು ಜನ ಹಿಂದು ಯುವಕರು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯನ್ನು ವಿವಸ್ತ್ರಗೊಳಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮಣಿಪುರದ ಹಿಂದುಗಳೂ ಸಹ ಬೆಂಬಲಿಸುತ್ತಿದ್ದಾರೆ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.

 

ಆದರೆ ಇದು 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದ್ದು ಇದಕ್ಕೂ  ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ.

ಫ್ಯಾಕ್ಟ್‌ಚೆಕ್: ಬೆಂಗಳೂರಿನ ರಾಮಮೂರ್ತಿನಗರದ ಹೊರಹೊಲಯದಲ್ಲಿ ಮೇ, 2021ರಲ್ಲಿ ಬಂಗ್ಲಾದೇಶದ ಯುವಕರು 22 ವರ್ಷದ ಯುವತಿಯನ್ನು ಅಪಹರಿಸಿ ಆಕೆಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದರು. ಮತ್ತು ಅದನ್ನು ವಿಡಿಯೋ ಸಹ ಮಾಡಿದ್ದರು. ಇದು  ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ನಡೆದು ಕೆಲವೇ ವಾರಗಳಲ್ಲಿ ಬೆಂಗಳೂರು ಪೋಲಿಸರು ಅತ್ಯಾಚಾರ ನಡೆಸಿದ ಮತ್ತು ಅಪಹರಣಕ್ಕೆ ಸಂಬಂಧಿಸಿದ ಮೂರು ಮಂದಿ ಯುವತಿಯರನ್ನೂ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿದ್ದರು, ಅಪರಾಧಿಗಳು ಬಾಂಗ್ಲಾದೇಶಿಗಳು ಎಂದು ವರದಿ ಸಹ ಸಲ್ಲಿಸಿದ್ದರು.  

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ಆರೋಪಿಗಳ ಹೆಸರಗಳು ಶೋಬ್ಜು ಶೇಕ್, ರಫೀಕ್, ರಿಡೋಯ್ ಬಾಬು, ರಾಕಿಬುಲ್ ಇಸ್ಲಾಮ್ ಸಾಗರ್, ಮೊಹಮ್ಮದ್ ಬಾಬು ಶೈಕ್, ಹಕೀಲ್, ಅಜಿಮ್, ಜಮಲ್, ದಲಿಮ್, ನಸ್ರತ್, ಕಾಜಲ್ ಮತ್ತು ತಾನ್ಯ. ಇದರಲ್ಲಿ ರಿಡೋಯ್ ಬಾಬು ಬಂಗ್ಲಾದ ಪ್ರಸಿದ್ದ ರಿಕ್‌ಟಾಕರ್ ಆಗಿದ್ದು ಮಾನವ ಕಳ್ಳಸಾಗಣಿಕೆಯನ್ನು ನಡೆಸುತ್ತಿದ್ದ. ಬಾಬು, ರಫೀಕ್ ಮತ್ತು ಶೋಬ್ಜು ಜೊತೆ ಸೇರಿ ಬಾಂಗ್ಲಾದೇಶದಿಂದ ಯುವತಿಯರಿಗೆ ಕೆಲಸಕೊಡಿಸುವುದಾಗಿ ಭಾರತಕ್ಕೆ ಕರೆದುಕೊಂಡು ಬಂದು ವೈಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು ಮತ್ತು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು.

ಪೋಲಿಸ್ ವರದಿಯಂತೆ ರಫೀಕ್ ಮತ್ತು ಶೋಬ್ಜು ಅತ್ಯಾಚಾರಕ್ಕೆ ಒಳಗಾದ ಯುವತಿಯ ಮೇಲೆ ಕೋಪಗೊಂಡಿದ್ದರೂ, ಕಾರಣ ಆಕೆ ಅವರ ಗುಂಪನ್ನು ತೊರೆದಿದ್ದಳು ಮತ್ತು ಕೆಲವು ಯುವತಿಯರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಳು. ಅವಳ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದರು.  ಪೋಲಿಸರ ಮಾಹಿತಿಯಂತೆ ಇವರುಗಳು ದೊಡ್ಡ ಜಾಲವನ್ನು ಹೊಂದಿದ್ದು  ಬಂಗ್ಲಾದೇಶದಿಂದ  ಪಶ್ಚಿಮ ಬಂಗಾಳದ ಮುರ್ಶಿದಾಬಾದ್, ಹೈದರಾಬಾದ್, ತೆಲಂಗಾಣ, ಅಸ್ಸಾಂನ ದುಬ್ರಿ ನಗರ ಮತ್ತು ಕರ್ನಾಟಕದ ಯುವತಿಯರ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾರೆ. ನ್ಯಾಯಾಲಯವು ಆರೋಪಿಗಳಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

 

ಆದ್ದರಿಂದ ಇದು ಹಳೆಯ ವಿಡಿಯೋ ಆಗಿದ್ದು ಮಣಿಪುರದಲ್ಲಿ ಹಿಂದು ಯುವಕರು ಕ್ರಿಶ್ಚಿಯನ್ ಯುವತಿಯನ್ನು ಅತ್ಯಾಚಾರ ನಡೆಸಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಸಾವಿರ ಸಾಲ ಕೊಡುತ್ತಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *