ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ

ಗಾಜಾದಲ್ಲಿ ಹಮಾಸ್ ಫೈಟರ್‌ಗಳು ಇಸ್ರೇಲಿನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾರೆ. ಮತ್ತು ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಹಲವರು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಪ್ಯಾಲೆಸ್ತೇನಿನ ಹಮಾಸ್ ಮಿಲಿಟರಿ ತಂಡ ಮತ್ತು ಇಸ್ಲಾಮ್ ಜಿಹಾದಿಗಳು ಗಾಜಾನಗರ ಸೇರಿದಂತೆ ಇಸ್ರೇಲಿನ ಮೇಲೆ ದಾಳಿ ಆರಂಭಿಸಿವೆ. ಇಸ್ರೇಲ್ ಸಹ ಪ್ಯಾಲೆಸ್ತೇನಿನ ಮೇಲೆ ಯುದ್ಧ ಘೋಷಿಸಿದೆ. ಈ ಎರಡೂ ದೇಶದ ಯುದ್ಧಕ್ಕೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅವುಗಳಲ್ಲಿ ಅನೇಕ ವಿಡಿಯೋಗಳು ಸುಳ್ಳಾಗಿವೆ. ಮತ್ತು ಹಳೆಯ ಸಾಂಧರ್ಭಿಕ ವಿಡಿಯೋಗಳನ್ನೇ ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿರುವ ಹಮಾಸ್‌ ಫೈಟರ್‌ಗಳು ಎಂದು ವೈರಲ್ ಆಗುತ್ತಿರುವ ವಿಡಿಯೋ ಆನಿಮೆಟೆಟ್ ARMA-3 ಎನ್ನುವ ವಿಡಿಯೋ ಗೇಮ್ ಆಗಿದ್ದು ನಿಜವಾದ ಯುದ್ಧದ ಸನ್ನಿವೇಶಗಳಲ್ಲ. ಈ ಕುರಿತು ಹುಡುಕಿದಾಗ ಅದು ನೈಜ ವಿಡಿಯೋ ಅಲ್ಲ ಎಂದು ತಿಳಿದುಬಂದಿದೆ. ಕಂಜಿಕ್ಕ ವಾರಿಯರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಐದು ದಿನಗಳ ಮೊದಲೇ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ವಿಡಿಯೋ ವಿವರಣೆಯಲ್ಲಿ “ಇದು ನೈಜ ವಿಡಿಯೋ ಅಲ್ಲ. ಇದು ಊಹಾತ್ಮಕವಾಗಿದೆ. 2013ರ Arma 3 ಎಂಬ ವಿಡಿಯೋ ಗೇಮ್ ದೃಶ್ಯಗಳಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ. ಮತ್ತು ಇವು ಪೇಸ್‌ಬುಕ್‌ನಲ್ಲಿ ನವೋಖಿಲ ಕಗ(Noakhaila kaga) ಎಂಬ ವಿಡಿಯೋ ಗೇಮ್ ಕ್ರಿಯೇಟರ್ ಒಬ್ಬ ತನ್ನ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋಗಳಾಗಿವೆ. ಹಾಗಾಗಿ ಇಸ್ರೇಲ್ ಮತ್ತು ಪ್ಯಾಲೇಸ್ತೇನಿ ಯುದ್ಧದ ದೃಶ್ಯಗಳು ಎಂಬುದು ಸುಳ್ಳು.

ಇನ್ನೂ ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂದು ವೈರಲ್ ಆಗುತ್ತಿರುವ ವಿಡಿಯೋ, ಈಜಿಪ್ಟ್‌ನ ಮಿಲಿಟರಿ ಅಕಾಡೆಮಿ, ಈಜಿಪ್ಟ್‌ನ ಪ್ಯಾರಾಟ್ರೂಪರ್ಗಳಿಗೆ ನೀಡುತ್ತಿರುವ ತರಬೇತಿಯ ವಿಡಿಯೋ ಆಗಿದೆ. ಇದೇ ವಿಡಿಯೋದಲ್ಲಿ ಮಿಲಿಟರಿ ಕಾಲೇಜಿನ ಮೇಲೆ ಹಾರಿಸಲಾಗಿರುವ ಈಜಿಪ್ಟಿನ ರಾಷ್ಟ್ರಧ್ವಜವನ್ನು ಕಾಣಬಹುದಾಗಿದೆ. ಆದ್ದರಿಂದ ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂಬುದು ಸಹ ಸುಳ್ಳು.

 


ಇದನ್ನು ಓದಿ: 2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಮಣಿಪುರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *