ಗುಜರಾತ್‌ನ ಆಪ್‌ ಪಕ್ಷದ ನಾಯಕನ ಮನೆ ಮೇಲೆ ಇಡಿ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ವಿಡಿಯೋವೊಂದು ವೈರಲ್‌ ಆಗಿದ್ದು, ಈ ವಿಡಿಯೋವನ್ನ ಬಳಸಿಕೊಂಡು ಗುಜರಾತ್‌ನ ಆಮ್‌ ಆದ್ಮಿ ಪಕ್ಷದ ವಿರುದ್ಧ ಅಪಪ್ರಚಾರವನ್ನ ಮಾಡಲಾಗುತ್ತಿದೆ. ಈ ಸುಳ್ಳು ಸುದ್ದಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋವನ್ನೇ ಸತ್ಯವೆಂದು ಸಾಕಷ್ಟು ಮಂದಿ ಅಮಾಯಕರು ನಂಬಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋದಲ್ಲಿ ಸತ್ಯ ಹಾಗೂ ಸುಳ್ಳು ಏನೆಂಬುವುದರ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ ಒಮ್ಮೆ ಓದಿ

ಸುಳ್ಳು ; ಗುಜರಾತಿನ ಸೂರತ್‌ನಲ್ಲಿ ದೇಶದ ಅತ್ಯಂತ ಪ್ರಾಮಾಣಿಕ ರಾಜಕೀಯ ಪಕ್ಷವಾದ ಆಮ್ ಆದ್ಮಿ ಪಾರ್ಟಿಯ (AAP) ನೇತಾರ ಶೇಖರ್ ಅಗ್ರವಾಲ್ ಮನೆಯ ಮೇಲೆ ನಡೆದ ED ದಾಳಿಯಲ್ಲಿ ಸಿಕ್ಕ ನೋಟುಗಳನ್ನು ಅಳೆಯುತ್ತಿರುವ ED ಸಿಬ್ಬಂದಿ

ಸತ್ಯ ; ವೈರಲ್‌ ವಿಡಿಯೋದಲ್ಲಿ ನಡೆದಿರುವ ದಾಳಿ ಕೊಲ್ಕತ್ತಾದಲ್ಲಿನದ್ದೇ ಹೊರತು ಗುಜರಾತಿನದ್ದಲ್ಲ. ಈ ವಿಡಿಯೋದಲ್ಲಿ ಕೂಡ ಅಧಿಕಾರಿಗಳು ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದಾರೆ, ಗುಜರಾತಿ ಭಾಷೆ ಇಲ್ಲಿ ಬಳಕೆಯಾಗಿಲ್ಲ ಎಂಬುದು ಕೂಡ ಗಮನಾರ್ಹ. ವೈರಲ್‌ ವಿಡಿಯೋದ ಕೆಳಗೆ ಗುಜರಾತಿನ ಆಮ್‌ ಆದ್ಮಿ ಪಕ್ಷದ ನಾಯಕ ಶೇಖರ್ ಅಗ್ರವಾಲ್ ಮನೆಯ ಮೇಲೆ ಇಡಿ ದಾಳಿ ಎಂದು ಬರೆಯಲಾಗಿದೆ. ಆದರೆ ಇದೇ ಹೆಸರನ್ನ ಗೂಗಲ್‌ ಕೀ ವರ್ಡ್‌ನಲ್ಲಿ ಸರ್ಚ್‌ ಮಾಡಿದಾಗ ಅಲ್ಲಿ ದಾಳಿಯ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ, ಆದರೆ ವಿಡಿಯೋದ ಸ್ಕ್ರೀನ್‌ ಶಾಟ್‌ ತೆಗೆದು ಗೂಗಲ್‌ ರಿವರ್ಸ್‌ ಇಮೇಜಿನಲ್ಲಿ ಸರ್ಚ್‌ ಮಾಡಿದಾಗ ಇಂಡಿಯಾ ಟುಡೆಯ ವರದಿಯೊಂದು ತೆರೆದುಕೊಳ್ಳುತ್ತದೆ

ಈ ವರದಿಯಲ್ಲಿ ಮೊಬೈಲ್‌ ಗೇಮಿಂಗ್‌ ಕಂಪನಿಯೊಂದರ ಮಾಲೀಕನ ಬೃಹತ್‌ ವಂಚನೆ ಪ್ರಕರಣ ತೆರೆದುಕೊಳ್ಳುತ್ತದೆ. ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕೂಡ ಕೊಲ್ಕತ್ತಾ ಮೂಲದ ಗೇಮಿಂಗ್‌ ಕಂಪನಿಯ ಉದ್ಯಮಿಯಾದ ಅಮಿರ್‌ ಖಾನ್‌ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿದ್ದಾಗ ಸೆರೆ ಹಿಡಿಯಲಾದ ವಿಡಿಯೋವಾಗಿದೆ. ಹಾಗಾಗಿ ಈಗ ವೈರಲ್‌ ಆಗುತ್ತಿರುವ  ವಿಡಿಯೋ ಗುಜರಾತ್‌ನ ಆಮ್‌ ಆದ್ಮಿ ಪಕ್ಷದ  ನಾಯಕ ಶೇಖರ್ ಅಗ್ರವಾಲ್ ಅವರ ಮನೆಯ ಮೇಲೆ ನಡೆದ ಇಡಿ ದಾಳಿ ಎಂಬುದು ಸುಳ್ಳು ಸುದ್ದಿಯಾಗಿದೆ


ಇದನ್ನೂ ಓದಿ ;- ಭಾರತಕ್ಕೆ ಬಂದ ಎಲ್ಲಾ ಪಾಕ್ ಕ್ರಿಕೆಟಿಗರಿಗೂ ಕೇಸರಿ ಶಾಲು ಹಾಕಿ ಸ್ವಾಗತಿಸಿಲ್ಲ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *