ಭಾರತಕ್ಕೆ ಬಂದ ಎಲ್ಲಾ ಪಾಕ್ ಕ್ರಿಕೆಟಿಗರಿಗೂ ಕೇಸರಿ ಶಾಲು ಹಾಕಿ ಸ್ವಾಗತಿಸಿಲ್ಲ

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಕೂಡ ಆಗಿಮಿಸಿದೆ. ಇದೇ ಬುಧವಾರ ತಡರಾತ್ರಿ  ಹೈದರಾಬಾದ್‌ನಲ್ಲಿರುವ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

ಈ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಸದಸ್ಯರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.

ಆದರೆ ಇದರ ಹಿಂದಿರುವ ಅಸಲಿ ವಿಚಾರವೇ ಬೇರೆಯದ್ದಿದೆ. ಇದನ್ನ ತಿಳಿಯದ ದೇಶದ ಕೆಲ ಪ್ರಮುಖ ದೃಶ್ಯ ಮಾಧ್ಯಮಗಳು ಹಾಗೂ ದೈನಂದಿನ ಪತ್ರಿಕೆಗಳು ಯತಾವಥ್‌ ಆಗಿ ವರದಿಯನ್ನು ಪ್ರಕಟಿಸಿವೆ. ಹಾಗಾಗಿ ಸಾಕಷ್ಟು ಮಂದಿ ಇಂದಿಗೂ ಇದನ್ನೇ ನೈಜ ಸುದ್ದಿ ಎಂದು ನಂಬುತ್ತಿದ್ದಾರೆ.

ಸತ್ಯ : ಐಸಿಸಿ ವಿಶ್ವಕಪ್‌ ಆಡಲು ಭಾರತಕ್ಕೆ ಬಂದ ಪಾಕಿಸ್ತಾನದ ಎಲ್ಲಾ ಆಟಗಾರರಿಗೆ ಕೇಸರಿ ಶಾಲು ಹಾಕಲಾಗಿದೆ ಎಂಬುದು ತಿರುಚಿರುವ ಸುದ್ದಿಯಾಗಿದೆ. ಬದಲಿಗೆ ಪಾಕಿಸ್ತಾನದ ಎಲ್ಲಾ ಆಟಗಾರರಿಗೆ ವಿವಿಧ ಬಣ್ಣಗಳ ಶಾಲುಗಳನ್ನು ಹಾಕಿ ಸ್ವಾಗತಿಸಲಾಗಿದೆ.

ಪೂರ್ತಿ ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ ; ಭಾರತಕ್ಕೆ ಬಂದ ಎಲ್ಲಾ ಪಾಕ್ ಕ್ರಿಕೆಟಿಗರಿಗೂ ಕೇಸರಿ ಶಾಲು ಹಾಕಿ ಸ್ವಾಗತಿಸಿಲ್ಲ

ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿವೆ. ಕೇವಲ ಕೇಸರಿ ಶಾಲು ಹಾಕಲಾಗಿದೆ ಎಂಬುದು ಸುಳ್ಳು.

ಇದನ್ನು ಓದಿ; ಜಸ್ಟೀಸ್ ದಲ್ವೀರ್ ಭಂಡಾರಿಯವರು ಅಂತರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ.

ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *