Fact Check : ಛತ್ತೀಸ್‌ಗಢ ಬಿಜೆಪಿ 2 ಲಕ್ಷ ರೂ ರೈತರ ಸಾಲ ಮನ್ನಾ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆ ರಾಜ್ಯದಲ್ಲಿ ರಾಜಕೀಯವಾಗಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿವೆ.

ಅದೇ ರೀತಿಯಲ್ಲಿ ಇದೀಗ ಛತ್ತೀಸ್‌ಗಢದ ಬಿಜೆಪಿ ಪ್ರಣಾಳಿಕೆಯ ವಿಚಾರ ಸದ್ದು ಮಾಡುತ್ತಿದೆ ಅದರಲ್ಲಿ  “ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು ಮತ್ತು ಸ್ವಸಹಾಯ ಸಂಘಗಳ ಸುಮಾರು 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಛತ್ತೀಸ್‌ಗಢ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಚುನಾವಣೆಯ ಮೇಲೆ ಕೂಡ ಪರಿಣಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿ ಛತ್ತೀಸ್‌ಗಢದ ಬಿಜೆಪಿಯ ಪ್ರಣಾಳಿಕೆಯನ್ನು ಪರಿಶೀಲನೆ ನಡೆಸಿ ನೋಡಿದಾಗ ರೈತರ ಸಾಲ ಮನ್ನಾದಂತ ಯಾವುದೇ ಭರವಸೆಗಳು ಕಂಡು ಬಂದಿಲ್ಲ. ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬೇರೆ ಭರವಸೆಗಳನ್ನು ನೀಡಲಾಗಿದೆ. ಇನ್ನು ಬಿಜೆಪಿ ಪ್ರಣಾಳಿಕೆ ಸಾಫ್ಟ್‌ಕಾಪಿಯನ್ನು ಕೂಡ ಛತ್ತೀಸ್‌ಗಢ ಬಿಜೆಪಿ ಬಿಡುಗಡೆ ಮಾಡಲಾಗಿದೆ.

ಅದರಲ್ಲೂ ಕೂಡ ರೈತರ ಮತ್ತು ಸ್ವಸಹಾಯ ಸಂಘದ ಸಾಲಗಳ ಕುರಿತು ಯಾವುದೇ ಉಲ್ಲೇಖ ಇಲ್ಲ. ಮತ್ತು ಇದೇ ವಿಚಾರದ ಕುರಿತು ಸತ್ಯ ಶೋಧನೆ ನಡೆಸಿದ್ದ ಛತ್ತೀಸ್‌ಗಢದ ಕಾಂಗ್ರೆಸ್‌ ಸಹ ಬಿಜೆಪಿ ರೈತರ ಸಾಲ ಮನ್ನಾ ಮಾಡುತ್ತಿರುವುದು ಸುಳ್ಳು ಎಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದೆ.  ಇದರ ಜೊತೆಗೆ ಅಲ್ಲಿನ ಯಾವುದೇ ಒಬ್ಬ ಬಿಜೆಪಿ ನಾಯಕನ ಭಾಷಣದಲ್ಲಿ ಕೂಡ ರೈತರ ಸಾಲಮನ್ನಾ ವಿಚಾರದ ಪ್ರಸ್ರಾಪ ಆಗಿಲ್ಲ. ಹಾಗಾಗಿ ರೈತರ 2 ಲಕ್ಷದ ವರೆಗಿನ ಸಾಲ ಮನ್ನಾ ಮಾಡುವುದಾಗಿ ಛತ್ತೀಸ್‌ಗಢ ಬಿಜೆಪಿ ಘೋಷಣೆ ಮಾಡಿದೆ ಎಂಬುದು ಸುಳ್ಳು.


ಇದನ್ನೂ ಓದಿ :Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *