ಸೆಲೆಬ್ರಿಟಿಗಳ ಮಕ್ಕಳ ಕುರಿತು ಸದಾ ಒಂದಿಲ್ಲೊಂದು ಗಾಸಿಪ್‌ಗಳು, ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸುದ್ದಿ ಮಾಧ್ಯಮಗಳೆಂತು ಪ್ರತಿನಿತ್ಯ ಇಂತಹ ಹೊಸ ಗಾಸಿಪ್‌ಗಳ ಹಂಚುವಲ್ಲಿ ತೊಡಗಿಕೊಂಡಿವೆ. ಈಗ ಕ್ರಿಕೆಟ್ ದೇವರು ಎಂದೇ ಕರೆಯುವ ಸಚಿನ್ ತೆಂಡುಲ್ಕರ್‌ರವರ ಮಗಳ ಮೇಲೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.
“ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಕ್ರಿಕೆಟರ್ ಶುಬ್ಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.” ಎಂಬ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ.
ಫ್ಯಾಕ್ಟ್‌ಚೆಕ್: ಸಾರಾ ತೆಂಡುಲ್ಕರ್ 24 ಸೆಪ್ಟೆಂಬರ್ 2023ರಲ್ಲಿ ತನ್ನ ಸಹೋದರ ಅರ್ಜುನ್ ತೆಂಡುಲ್ಕರ್‌ರವರ ಹುಟ್ಟುಹಬ್ಬದಂದು ಶುಭಕೋರಿ ಹಾಕಿದ ಪೋಟೋ ಇದಾಗಿದೆ. ಇದನ್ನು ಪೋಟೋಶಾಪ್ ಮೂಲಕ ಎಡಿಟ್ ಮಾಡಿ ಶುಬ್ಮನ್ ಗಿಲ್‌ರವರ ಪೋಟೋವನ್ನು ಸೇರಿಸಲಾಗಿದೆ. ಈ ಪೋಸ್ಟನ್ನು ದೋನಿ ಪೊಪ ಎಂಬ ಕ್ರಿಕೆಟ್ ಅಭಿಮಾನಿ ಮೊದಲು ಎಡಿಟ್ ಮಾಡಿ ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಈ ಹಿಂದೆ ಸಹ ಸಚಿನ್ ತೆಂಡೊಲ್ಕರ್ ತನ್ನ ಮಗಳು ಸಾರಾರವರ ಮದುವೆಯ ನಿಶ್ಚಿತಾರ್ಥವನ್ನು ಶುಬ್ಮನ್ ಗಿಲ್ ಜೊತೆಗೆ ನೆರೆವೇರಿಸಿದ್ದಾರೆ ಎಂದು ಸುಳ್ಳನ್ನು ಹರಿಬಿಡಲಾಗಿತ್ತು. ಆದರೆ ಈ ಯಾವುದೇ ಪ್ರತಿಪಾಧನೆಗಳಿಗೆ ಆಧಾರಗಳಿಲ್ಲ. ಆದ್ದರಿಂದ ಸಾರಾ ತೆಂಡುಲ್ಕರ್ ಕ್ರಿಕೆಟರ್ ಶುಬ್ಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: Fact Check : ತಾಯಿ ಜಿಂಕೆ ತನ್ನ ಮರಿಗಳನ್ನು ಉಳಿಸಲು ಚಿರತೆಗಳ ಕೈಗೆ ಸಿಲುಕಿ ಪ್ರಾಣ ತ್ಯಾಗ ಮಾಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.