Fact Check : ತಾಯಿ ಜಿಂಕೆ ತನ್ನ ಮರಿಗಳನ್ನು ಉಳಿಸಲು ಚಿರತೆಗಳ ಕೈಗೆ ಸಿಲುಕಿ ಪ್ರಾಣ ತ್ಯಾಗ ಮಾಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳಿಗೂ ಹಾಗೂ ಅವುಗಳೊಂದಿಗೆ ಹಂಚಿಕೊಳ್ಳಲಾಗುವ ಸಾಕಷ್ಟು ವಿಚಾರಗಳಿಗೂ ಸಂಬಂಧವೇ ಇರುವುದಿಲ್ಲ. ಅಂತಹದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಳೆದ 6ರ್ಷಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ  “ಚಿರತೆಗಳು ಒಂದು ತಾಯಿ ಜಿಂಕೆ ಮತ್ತು ಎರಡು ಮರಿಗಳನ್ನ ಬೆನ್ನಟ್ಟಿದ್ದವು, ತಾಯಿ ಜಿಂಕೆ ಆ ಚಿರತೆಗಿಂತ ವೇಗವಾಗಿತ್ತು. ಆದರೆ ಅದರ ಮಕ್ಕಳು ಅಷ್ಟು ವೇಗವಾಗಿರಲಿಲ್ಲ. ಆದ್ದರಿಂದ ಆ ತಾಯಿ ಜಿಂಕೆ ತನ್ನ ಎರಡು ಮಕ್ಕಳು ತಪ್ಪಿಸಲು ತನ್ನನ್ನು ತಾನೇ ಆ ಚಿರತೆಗಳಿಗೆ ಅರ್ಪಿಸಿಕೊಂಡಿತು. ಮತ್ತು ತನ್ನ ಮರಿ ಜಿಂಕೆಗಳು ತಪ್ಪಿಸಿಕೊಳ್ಳುವುದನ್ನು ನೋಡುತ್ತಾ ಸಾವನ್ನಪ್ಪಿತ್ತು” ಎಂಬ ಕತೆಯೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಸತ್ಯ : ಇದೊಂದು ಕಪೋಲ ಕಲ್ಪಿತ ಕತೆಯಾಗಿದೆ. ಈ ಫೋಟೋವನ್ನು ತೆಗೆದಿರುವ ಛಾಯಾಗ್ರಾಹಕಿಯ ಹೆಸರು ಅಲಿಸನ್ ಬುಟ್ಟಿಗೀಗ್. ಇವರು 2013ರ ಸೆಪ್ಟಂಬರ್‌ನಲ್ಲಿ ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಈ ಚಿತ್ರವನ್ನು ಕ್ಲಿಕ್ ಮಾಡಿದ್ದರು. 2017 ಫೆಬ್ರವರಿ 13 ರಂದು ಪ್ರತಿಕ್ರಿಯೆ ನೀಡಿದ್ದ ಅಲಿಸನ್ ಬುಟ್ಟಿಗೀಗ್ ತಾಯಿ ಚಿರತೆಯೊಂದು ತನ್ನ ಮರಿ ಚಿರತೆಗಳಿಗೆ ಜಿಂಕೆಗಳನ್ನು ಭೇಟೆಯಾಡುವುದು ಹೇಗೆ ಎಂದು ಕಲಿಸುತ್ತಿತ್ತು.

ಕೊನೆಯಲ್ಲಿ ತನ್ನ ಮರಿಗಳಿಗೆ ಆ ಜಿಂಕೆಯನ್ನು ಭೇಟೆಯಾಡಿ ತನ್ನ ಮರಿ ಜಿಂಕೆಗಳಿಗೆ ಊಟವನ್ನು ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಆ ಜಿಂಕೆ ಆ ಚಿರತೆಗಳ ಕೈಗೆ ಸಿಲುಕಿದಾಗ ಆಘಾತಕೊಳ್ಳಪಟ್ಟು ಯಾವುದೇ ಚಲನ-ವಲನಗಳನ್ನು ತೋರದೆ ಇದ್ದಿತ್ತು ಆ ವೇಳೆಯಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಛಾಯಾಗ್ರಾಹಕಿಯ ಅಲಿಸನ್ ಬುಟ್ಟಿಗೀಗ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸುಳ್ಳು ಸುದ್ದಿಯನ್ನು ಹಬ್ಬಲಾಗಿತ್ತು. ಈ  ಕುರಿತು ಪ್ರತಿಕ್ರಿಯೆ ನೀಡಿದ ಆಕೆ ತಾನು ಚೆನ್ನಾಗಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದರು. ಹಾಗಾಗಿ ಫೋಟೋ ಜೊತೆ ಹಂಚಿಕೊಳ್ಳಲಾಗುತ್ತಿರುವ ಕತೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದೇ ನಿಜವಾಗಿದೆ.


ಇದನ್ನೂ ಓದಿ : Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *