ಫ್ಯಾಕ್ಟ್ ಚೆಕ್: ದೇಶಾದ್ಯಂತ ಪಟಾಕಿ ನಿಷೇಧ ಎಂದು ಸುಪ್ರೀಂ ಆದೇಶಿಸಿಲ್ಲ

ಪಟಾಕಿ

ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂ ತೀರ್ಪು! ದೀಪಾವಳಿಗೂ ಮುನ್ನ ಮಹತ್ವದ ಆದೇಶ ಎಂಬ ಶೀರ್ಷಿಕೆಯಲ್ಲಿ ಕನ್ನಡದ ಹೊಸದಿಂಗತ, ನ್ಯೂಸ್ 18 ಕನ್ನಡ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಪ್ರಕಟಿಸಿವೆ. ಹಿಂದೂಗಳ ಹಬ್ಬಕ್ಕೆ ಮಾತ್ರ ನಿಷೇಧವೇಕೆ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ನವೆಂಬರ್ 07 ರಂದು ದೆಹಲಿಯಲ್ಲಿ ಪಟಾಕಿ ನಿಷೇಧದ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ 2021ರ ಆದೇಶದಂತೆ ಬೇರಿಯಂ ಲವಣ ಮತ್ತು ನಿಷೇಧಿತ ರಾಸಾಯನಿಕಗಳ ಬಳಕೆಯ ಪಟಾಕಿಗಳನ್ನು ದೆಹಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ನಿಯಂತ್ರಿಸಬೇಕೆಂದು ಹೇಳಿದೆ ಹೊರತು ಎಲ್ಲಾ ರೀತಿಯ ಪಟಾಕಿ ನಿಷೇಧಿಸಿ ಎಂದು ಹೇಳಿಲ್ಲವೆಂದು ಲೈವ್ ಲಾ ವರದಿ ಮಾಡಿದೆ.

ದೀಪಾವಳಿ ಹಬ್ಬದ ಮೊದಲು ಪಟಾಕಿಗಳ ಬಳಕೆಗೆ ಸುಪ್ರೀಂ ಕೋರ್ಟ್ ಯಾವುದೇ ಹೊಸ ನಿಯಮಾವಳಿಗಳನ್ನು ಅಥವಾ ನಿಷೇಧವನ್ನು ಹೊರಡಿಸಿಲ್ಲ. ಆದರೆ 2021 ರಲ್ಲಿ ಘೋಷಿಸಲಾದ ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳ ಮೇಲಿನ ನಿಷೇಧವನ್ನು ಪುನರುಚ್ಚರಿಸಿದೆ. ಜೊತೆಗೆ “ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ” ಎಂದು ಪೀಠವು ಸ್ಪಷ್ಟಪಡಿಸಿದೆ. ಭಾರತದಾದ್ಯಂತ ಪಟಾಕಿಗಳ ಬಳಕೆಗೆ ಕೆಲವು ನಿಯಮಗಳಿವೆ, ಹಸಿರು ಪಟಾಕಿಗಳ ಬಳಕೆಗೆ ಅನುಮತಿಸಲಾಗಿದೆ ಎಂದು ಒತ್ತಿ ಹೇಳಲಾಗಿದೆ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅತಿ ಹೆಚ್ಚು ಮಾಲಿನ್ಯಕಾರಕ ಪಟಾಕಿಗಳನ್ನು ದೇಶಾದ್ಯಂತ ನಿಯಂತ್ರಿಸಬೇಕೆಂದು ಸುಪ್ರೀಂ ಹೇಳಿದೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್, ಎನ್‌ಡಿಟಿವಿ ಸೇರಿದಂತ ಹಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ದೇಶಾದ್ಯಂತ ಎಲ್ಲಾ ರೀತಿಯ ಪಟಾಕಿ ನಿಷೇಧ ಎಂದು ಸುಪ್ರೀಂ ಆದೇಶಿಸಿದೆ ಎಂಬುದು ಸುಳ್ಳು.


ಇದನ್ನೂ ಓದಿ: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *