ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ

ಕನ್ಹಯ್ಯ ಕುಮಾರ್

ಹಿಂದು ಧರ್ಮ ಕೆಟ್ಟದ್ದು, ಅಲ್ಲಾ ಶಕ್ತಿಶಾಲಿ: ಇಸ್ಲಾಮಿಗೆ ಮತಾಂತರ ಆಗಿ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು “ಕುತಂತ್ರಿ ಕನ್ಹಯ್ಯ ಕುಮಾರ್ ವಂಚನೆ ಬಯಲಾಗಿದೆ. ಹಿಂದೂ ಹೆಸರನ್ನು ಇಟ್ಟುಕೊಂಡು ಎಲ್ಲರ ಕಣ್ಣಗೆ ಮಣ್ಣು ಎರಚುತ್ತಿರುವ ಮುಲ್ಲಾ ಇವನು. ಅವನು ಒಬ್ಬ ದೇಶದ್ರೋಹಿ; ಅವರು(ಮೌಲಾನಾ ಅಬ್ದುಲ್ ಕಾಲಂ) ದೇಶದ ಅತಿದೊಡ್ಡ ದೇಶದ್ರೋಹಿ. ಮುಸ್ಲಿಮರ ರಹಸ್ಯ ಸಭೆಯಲ್ಲಿ ತಮ್ಮ ವಾಸ್ತವವನ್ನು ಹೇಳಿದ್ದಾರೆ. ಮುಸ್ಲಿಂ ಎಂಬ ಅವರ ಸ್ವಂತ ಹೇಳಿಕೆಯಿಂದ ವಾಸ್ತವ ಸ್ಪಷ್ಟವಾಗಿದೆ. ಎಂಬ ತಲೆಬರಹದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೀವು ನೋಡಬಹುದು.

Kanhaiya Kumar

ಫ್ಯಾಕ್ಟ್‌ಚೆಕ್: ಈ ವಿಡಿಯೋ 27 ಆಗಸ್ಟ್‌ 2018ರಲ್ಲಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಅಖಿಲ ಭಾರತ ತಂಝೀಮ್-ಇ-ಇನ್ಸಾಫ್ ಆಯೋಜಿಸಿದ ‘ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು’ ಎಂಬ ವಿಷಯದಡಿ ‘ಕನ್ಹಯ್ಯ ಅವರೊಂದಿಗೆ ಸಂವಾದ’ ಕಾರ್ಯಕ್ರಮದ್ದಾಗಿದೆ.

ಭಾಷಣದಲ್ಲಿ ಕನ್ಹಯ್ಯ ಅವರು ಭಾರತದ ಮೊದಲ ಶಿಕ್ಷಣ ಸಚಿವರಾದ ಮೌಲಾನಾ ಅಬ್ಸುಲ್ ಕಲಾಂ ಆಜಾದ್‌ರವರ ಮಾತುಗಳನ್ನುಉಲ್ಲೇಕಿಸುತ್ತ ನಮ್ಮ ಇತಿಹಾಸವು ಈ ದೇಶಕ್ಕೆ ಅಂಟಿಕೊಂಡಿದೆ. ನಾವೆಲ್ಲರೂ ಅರಬ್ ನಿಂದ ಬಂದಿಲ್ಲ ಆದರೆ ಇಲ್ಲಿಯೇ ಹುಟ್ಟಿ ಬೆಳೆದಿದ್ದೇವೆ. ಹಳೆಯ ಧರ್ಮದಲ್ಲಿ ಅಸ್ಪೃಶ್ಯತೆ ಇದ್ದ ಕಾರಣ ಜನರು ಹಳೆಯ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಎಂದಿದ್ದಾರೆ ಎಂದು ಕನ್ಹಯ್ಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಆದರೆ ಕನ್ಹಯ್ಯನವರ ಮಾತುಗಳು ಸಹ ಅರ್ಧ ಸತ್ಯದಿಂದ ಕೂಡಿದ್ದು ಮೌಲಾನಾ ಅಬ್ಸುಲ್ ಕಲಾಂ ರವರು ಅಸ್ಪ್ರಶ್ಯತೆ ಇದ್ದ ಕಾರಣಕ್ಕಾಗಿ ಜನ ಇಸ್ಲಾಂಗೆ ಮತಾಂತರ ಆಗಿದ್ದಾರೆ ಎಂದು ಹೇಳಿಲ್ಲ. ಮತ್ತು ಇಸ್ಲಾಂನಷ್ಟೇ ನಾನು ಹಿಂದು ಧರ್ಮದ ವೇದ, ಪುರಾಣಗಳ ಗೌರವಿಸುತ್ತೇನೆ ಎಂದು ಅಕ್ಟೋಬರ್ 23, 1947ರಂದು ದೆಹಲಿಯ ಜಮಾ ಮಸೀದಿಯಲ್ಲಿ ನಡೆದ ತಮ್ಮ ಐತಿಹಾಸಿಕ ಭಾಷಣದಲ್ಲಿ ಅವರು ಹೇಳಿದ್ದಾರೆ.

ಮೌಲಾನಾ ಅಬ್ದುಲ್ ಕಲಾಂ ಆಜಾದ್

ಇನ್ನೂ ತಮ್ಮ ಭಾಷಣದಲ್ಲಿ ಕನ್ನಯ್ಯರವರು ಹಿಂದು ಸಂಘಟನೆಯೇ ಆಗಿರಲಿ ಅಥವಾ ಮುಸ್ಲಿಂ ಸಂಘಟನೆಯೇ ಆಗಿರಲಿ ಯಾರಾದರೂ ಬಂದು ನಿಮ್ಮ ಧರ್ಮ ರಕ್ಷಿಸುತ್ತೇವೆ ಎಂದು ಹೇಳಿದರೆ ನೀವು ಹೇಳಿ ಅಲ್ಲಾ ಬಹಳ ಶಕ್ತಿಶಾಲಿ. ನಮಗೆ ಧರ್ಮ ರಕ್ಷಕರು ಬೇಕಾಗಿಲ್ಲ. ನಮಗೆ ಉದ್ಯೋಗದ ಬಗ್ಗೆ, ತರಬೇತಿಯ ಬಗ್ಗೆ, ಲೋಕತಂತ್ರ ಕಾಪಾಡುವವರು ಬೇಕಾಗಿದ್ದಾರೆ ಎಂದು. ಇಲ್ಲಿ ಕನ್ಹಯ್ಯ ಕುಮಾರ್ ಅವರ ಮಾತುಗಳನ್ನು ತಪ್ಪಾಗಿ ಅರ್ಥ ಬರುವಂತೆ ಎಡಿಟ್ ಮಾಡಿ ಸುಳ್ಳು ಹರಡಲಾಗಿದೆ.


ಇದನ್ನು ಓದಿ:  ಜಾರಾ ಪಟೇಲ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ಡೀಪ್ ಫೇಕ್ ಎಡಿಟ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *