ಜಾರಾ ಪಟೇಲ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ಡೀಪ್ ಫೇಕ್ ಎಡಿಟ್

ತುಂಡುಡುಗೆಯಲ್ಲಿ ಲಿಫ್ಟ್ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಒಂದನ್ನು ವೈರಲ್ ಮಾಡಲಾಗುತ್ತಿದೆ.

ಫ್ಯಾಕ್ಟ್ ಚೆಕ್:

ಇದು ಡಾಟಾ ಇಂಜಿನಿಯರ್ ಎಂದು ಕರೆದುಕೊಂಡಿರುವ ಜಾರಾ ಪಟೇಲ್ ಎಂಬುವವರ ವಿಡಿಯೋ ಆಗಿದ್ದು, ಅಕ್ಟೋಬರ್ 9 ರಂದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಕಿಡಿಗೇಡಿಗಳು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ನಟಿ ರಶ್ಮಿಕಾ ಮಂದಣ್ಣರವರ ಮುಖ ಸೇರಿಸಿ ತಿರುಚಿದ್ದಾರೆ.

 

View this post on Instagram

 

A post shared by Zara Patel (@zaarapatellll)

ವೈರಲ್ ವಿಡಿಯೋದ ಆರಂಭದ ಕೆಲ ಸೆಕೆಂಡ್‌ನಲ್ಲಿ ಜಾರಾ ಪಟೇಲ್ ರವರ ಮುಖವಿರುವುದು ಕಂಡುಬರುತ್ತದೆ. ಆದರೆ ನಂತರದ 1ನೇ ಸೆಕೆಂಡ್‌ನಲ್ಲಿ ರಶ್ಮಿಕಾ ಮಂದಣ್ಣನವರ ಮುಖ ಎಡಿಟ್ ಮಾಡಲಾಗಿದೆ.

ಡೀಪ್‌ಫೇಕ್ ಎನ್ನುವುದು ಸಂಶ್ಲೇಷಿತ ಮಾಧ್ಯಮವಾಗಿದ್ದು, ಕೃತಕ ಬುದ್ಧಿಮತ್ತೆಯ (AI) ಶಕ್ತಿಯುತ ತಂತ್ರಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಹೋಲಿಕೆಯನ್ನು ಇನ್ನೊಬ್ಬರೊಂದಿಗೆ ಬದಲಾಯಿಸುವ ಡಿಜಿಟಲ್ ಕಲೆಯಾಗಿದೆ. ಅದನ್ನೀಗ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಯಾರೋ ಮಾತನಾಡಿದ್ದಕ್ಕೆ ರಾಜಕಾರಣಿಗಳ, ಸಿನಿಮಾ ನಟರ ಮುಖ ಸೇರಿಸಿ ಜನರನ್ನು ತಪ್ಪುದಾರಿಗೆಳೆಯಲಾಗುತ್ತಿದೆ.

ಇದರಿಂದ ತನಗೆ ನೋವಾಗಿದೆ ಎಂದ ರಶ್ಮಿಕಾ ಮಂದಣ್ಣ

ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತದೆ ಮತ್ತು ಆನ್‌ಲೈನ್‌ನಲ್ಲಿ ಹರಡಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ.

ಈ ರೀತಿಯ ವಿಷಯವು ಪ್ರಾಮಾಣಿಕವಾಗಿ, ನನಗೆ ಮಾತ್ರವಲ್ಲದೆ, ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಕಾರಣದಿಂದಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ಭಯಾನಕವಾಗಿದೆ.

ಇಂದು, ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆ ಮತ್ತು ಬೆಂಬಲ ವ್ಯವಸ್ಥೆಯಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ನನಗೆ ಇದು ಸಂಭವಿಸಿದರೆ, ನಾನು ಇದನ್ನು ಹೇಗೆ ನಿಭಾಯಿಸಬಹುದು ಎಂದು ನಾನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ.

ನಮ್ಮಲ್ಲಿ ಹೆಚ್ಚಿನವರು ಇಂತಹ ಅಪಾಯಕ್ಕೆ ಈಡಾಗುವ ಮೊದಲು ನಾವು ಇದನ್ನು ಸಮುದಾಯವಾಗಿ ಮತ್ತು ತುರ್ತುಸ್ಥಿತಿಯೊಂದಿಗೆ ಪರಿಹರಿಸಬೇಕಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಹದಗೆಡುತ್ತಿದೆಯೆಂದು ಮುಸ್ಲಿಮರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *