ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಭಯಾನಕವಾಗಿದೆ ಎಂದು ಪ್ರತಿಪಾದಿಸಿ ಟ್ವಿಟರ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಯಸ್ಸಾದ ಮಹಿಳೆಯ ಕೂದಲು ಹಿಡಿದು ಕ್ರೂರವಾಗಿ ಎಳೆದೊಯ್ದು ನಂತರ ಅಮಾನುಷವಾಗಿ ಥಳಿಸಲಾಗಿದೆ. ಕೆಲವು ಮಹಿಳೆಯರು ಸೇರಿದಂತೆ ಹಲವಾರು ಜನರು ಆಕೆಗೆ ಚಪ್ಪಲಿ ಮತ್ತು ದೊಣ್ಣೆಗಳಿಂದ ಥಳಿಸುವ ದೃಶ್ಯಗಳನ್ನು ವೀಡಿಯೊ ಒಳಗೊಂಡಿದೆ.
https://twitter.com/imSudeepGowda/status/1720496935113781368?ref_src=twsrc%5Etfw%7Ctwcamp%5Etweetembed%7Ctwterm%5E1720496935113781368%7Ctwgr%5Edaa21770240ab4bafccd325eed844c52dfe2d734%7Ctwcon%5Es1_&ref_url=https%3A%2F%2Fnewsmeter.in%2Ffact-check%2Fviral-video-of-woman-being-tortured-in-pakistan-shared-with-communal-spin-720272
ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಸ್ಥಿತಿ ಹದಗೆಡುತ್ತಿದೆ. ಈ ಕೃತ್ಯಗಳಿಗೆ ಪಾಕಿಸ್ತಾನವೇ ಹೊಣೆಯಾಗಬೇಕು ಎಂದು ಪ್ರತಿಪಾದಿಸಿ ಹಲವಾರು ಜನರು ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್:
ಇದು ಭೂ ವಿವಾದಕ್ಕೆ ಸಂಬಂಧಿಸಿದ ಜಗಳವಾಗಿದ್ದು ವಯಸ್ಸಾದ ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಜನವರಿ 9, 2022ರಂದು ಪಾಕಿಸ್ತಾನದ ಸಿಯಾಲ್‌ಕೋಟ್ ಪೊಲೀಸರು ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಿಸಿ, 9 ಜನರನ್ನು ಬಂಧಿಸಿದ್ದಾರೆ ಎಂದು ಪಾಕಿಸ್ತಾನದ Dawn, Geo News report, Capital Tv ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣದ ಸಂತ್ರಸ್ತೆಯ ಹೆಸರು ಮುನಾವ್ವರ್ ಕುನ್ವಾಲ್ ಎಂಬುದಾದರೆ ಪ್ರಮುಖ ಆರೋಪಿಯ ಹೆಸರು ನಸ್ರೀನ್ ಬೀಬಿ ಎಂಬುದಾಗಿದೆ. ಯಾಸ್ಮಿನ್ ಬೀಬಿ, ಆರಿಫ್, ತೈಮೂರ್ ಖಾಸಿಂ, ನೂರ್ ಹುಸೇನ್, ಹೈದರ್ ಅಲಿ, ಮುಬಾಷರ್ ಅಲಿ, ಜಶಾ ಅಲಿ, ಅಸದ್ ಅಲಿ, ಸಜ್ಜದ್ ಹುಸೇನ್ ಇತರ ಆರೋಪಿಗಳಾಗಿದ್ದಾರೆ.
ಕ್ಯಾಪಿಟಲ್ ಟಿವಿ ಎಂಬ ಯೂಟ್ಯೂಬ್‌ನಲ್ಲಿ ಇದೇ ವಿಡಿಯೋವನ್ನು “ಸಿಯಾಲ್‌ಕೋಟ್‌ನಲ್ಲಿ ತೀವ್ರ ಕ್ರೌರ್ಯ, ವೃದ್ಧ ಮಹಿಳೆಯ ಕೂದಲನ್ನು ಹಿಡಿದು ಬೀದಿಗೆ ಎಳೆದುಕೊಂಡುಹೋಗಿ ಸಾರ್ವಜನಿಕವಾಗಿ ಕ್ರೂರ ಚಿತ್ರಹಿಂಸೆ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಅದೇ ವೀಡಿಯೊವನ್ನು ಪಾಕಿಸ್ತಾನ ಮೂಲದ ARY ನ್ಯೂಸ್‌ನಂತಹ ಅನೇಕ ಪಾಕಿಸ್ತಾನ ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ.
ಜನವರಿ 9 ರಂದು ಅದೇ ವೀಡಿಯೊವನ್ನು ಹೊಂದಿರುವ Geo ನ್ಯೂಸ್‌ನ ಮಾಧ್ಯಮ ವರದಿ ಲಭ್ಯವಾಗಿದೆ. Geo ನ್ಯೂಸ್ ಜೊತೆ ಮಾತನಾಡಿದ ಮಹಿಳೆಯು, “ತನಗೆ ಕಳೆದ 13 ವರ್ಷಗಳಿಂದ ಇರುವ ‘ಭೂ ವಿವಾದ’ದಿಂದ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ‘ನನ್ನ ಮನೆ ಬಾಗಿಲನ್ನು ಹೊಡೆದು, ಬಲವಂತವಾಗಿ ಒಳಗೆ ನುಗ್ಗಿ ನನ್ನನ್ನು ಎಳೆದೊಯ್ದರು. ಸಾರ್ವಜನಿಕ ಬೀದಿಗಳಲ್ಲಿ ಅವರು ನನ್ನನ್ನು ಹಿಂಸಿಸಿದರು” ಎಂದು ನೋವು ತೋಡಿಕೊಂಡಿದ್ದಾರೆ.
ಒಟ್ಟಾರೆಯಾಗಿ ವಿಡಿಯೋದಲ್ಲಿರುವ ಮಹಿಳೆ ಹಿಂದೂ ಧರ್ಮದ ಕಾರಣಕ್ಕೆ ಪಾಕಿಸ್ತಾನದಲ್ಲಿ ಹಲ್ಲೆಗೊಳಗಾಗಿದ್ದಾಳೆ ಎಂಬ ಹೇಳಿಕೆ ಸುಳ್ಳು. ಬದಲಿಗೆ ಆರೋಪಿಗಳು ಮತ್ತು ಸಂತ್ರಸ್ತರಿಬ್ಬರು ಮುಸ್ಲಿಮರಾಗಿದ್ದಾರೆ. ಹಾಗಾಗಿ ಹಿಂದೂ ಮಹಿಳೆ ಮೇಲೆ ಹಲ್ಲೆ ಎಂಬುದು ಸುಳ್ಳು.
ಇದನ್ನೂ ಓದಿ: Fact Check: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ ಎಂಬುದು ಸುಳ್ಳು