Fact Check: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ ಎಂಬುದು ಸುಳ್ಳು

ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ/ರಾಜಕಾರಣಿ ಮತ್ತು ಬ್ರಿಟನ್ ರಾಣಿಗಿಂತ ಹೆಚ್ಚು ಶ್ರೀಮಂತೆ. ಸೋನಿಯಾರವರ ಒಟ್ಟು ಆಸ್ತಿ ಮೊತ್ತ 12 ಸಾವಿರ ಕೋಟಿ. ಎಂಬ ಸುದ್ದಿಯೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಪ್ಯಾಕ್ಟ್‌ಚೆಕ್: 2021 ರ ʼಪೋರ್ಬ್ಸ್‌ʼ ಸಂಸ್ಥೆ ಬಿಡುಗಡೆ ಮಾಡಿದ ಪ್ರಪಂಚದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇನ್ನೂ ‘ಬಿಜೆನೆಸ್‌ ಇನ್ಸೈಡರ್‌’ ನವರು ಬಿಡುಗಡೆ ಮಾಡಿದ ‘Top 10 Richest women in India’ ಪಟ್ಟಿಯಲ್ಲಿಯೂ ಸಹ ಸಹ ಸೋನಿಯಾ ಗಾಂಧಿ ಇಲ್ಲ. 2019 ರ ಲೋಕಸಭಾ ಚುನಾವಣೆಯ ಅಫಿಡವಿಡಟ್‌ನಲ್ಲಿ ತನ್ನ ಆಸ್ತಿಗಳ ಬೆಲೆ ಸುಮಾರು 11.82 ಕೋಟಿ ರೂಪಾಯಿಗಳೆಂದು ಅವರು ಘೋಷಿಸಿಕೊಂಡಿದ್ದಾರೆ.

‘ಬಿಜೆನೆಸ್‌ ಇನ್ಸೈಡರ್‌ʼ  ಜಗತ್ತಿನ ಶ್ರೀಮಂತರ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ ಎಂದು ವರದಿ ಮಾಡಿತ್ತು. ಆದರೆ “ಬಿಜೆನೆಸ್‌ ಇನ್ಸೈಡರ್‌ʼನವರು ಸೋನಿಯಾಗೆ ಸಂಬಂಧಿಸಿದಂತೆ ಡೇಟಾವನ್ನು ನಂಬಲಾರ್ಹ ವೆಬ್ಸೈಟ್‌ನಿಂದ ತೆಗೆದುಕೊಂಡಿಲ್ಲವೆಂದು 2018ರಲ್ಲಿ ‘ಆಲ್ಟ್‌ ನ್ಯೂಸ್‌ʼನವರು ಲೇಖನ ಬರೆದಿದ್ದಾರೆ. ಅವರ ಪಟ್ಟಿಯನ್ನು ಕೆಲವರು ಪ್ರಶ್ನಿಸಿದ ಮೇಲೆ ʼಹಾಫಿಂಗ್ಟನ್‌ ಪೋಸ್ಟ್‌’ನವರು ಸೋನಿಯಾ ಗಾಂಧಿ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದೆ.

‘ಹಾಫಿಂಗ್ಟನ್‌ ಪೋಸ್ಟ್‌ʼನವರು ಬ್ರಿಟನ್ ರಾಣಿಗಿಂತ ಸೋನಿಯಾ ಗಾಂಧಿ ಹೆಚ್ಚು ಶ್ರೀಮಂತೆ ಎಂದು ವರದಿ ಮಾಡಿತ್ತು. ‘ಹಾಫಿಂಗ್ಟನ್‌ ಪೋಸ್ಟ್‌ʼ ವರದಿಯನ್ನು ಆಧರಿಸಿ ಕನ್ನಡ ಫ್ರಭ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅವುಗಳನ್ನೇ ಮುಂದಿಟ್ಟುಕೊಂಡು ಸೋನಿಯಾ ಗಾಂಧಿಯವರ ವಿರೋಧಿಗಳು ಟೀಕಿಸುತ್ತಿದ್ದಾರೆ.

ಆದರೆ ಸೋನಿಯಾ ಗಾಂಧಿಯವರು ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ ಮತ್ತು ಬ್ರಿಟನ್ ರಾಣಿಗಿಂತ ಹೆಚ್ಚು ಶ್ರೀಮಂತೆ ಎಂದು ಪ್ರತಿಪಾಧಿಸಲು ಯಾವುದೇ ದಾಖಲೆಗಳಿಲ್ಲ. ಈ ಕುರಿತು ಹೀಗಾಗಲೇ ಹಲವು ಮಾಧ್ಯಮಗಳು ಫ್ಯಾಕ್ಟ್‌ಚೆಕ್‌ ನಡೆಸಿವೆ ವರದಿ ಮಾಡಿವೆ. ಆದರೂ ಸುಳ್ಳನ್ನು ಮತ್ತೆ ಮತ್ತೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: Fact Check : ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಪ್ರತಿ 15 ವರ್ಷಗಳಿಗೊಮ್ಮೆ ವಿಗ್ರಹದ ಮುಖವನ್ನು ತೋರಿಸಲಾಗುತ್ತದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *