Fact Check : ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಪ್ರತಿ 15 ವರ್ಷಗಳಿಗೊಮ್ಮೆ ವಿಗ್ರಹದ ಮುಖವನ್ನು ತೋರಿಸಲಾಗುತ್ತದೆ ಎಂಬುದು ಸುಳ್ಳು

ಇತ್ತೀಚೆಗಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ಮತ್ತು ಧಾರ್ಮಿಕ ವಿಚಾರದಲ್ಲಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ಮತ್ತು ನಕಲಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯಾಗಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿಯ ವಿಗ್ರಹವನ್ನು ಪ್ರತೀ 15 ವರ್ಷಗಳಿಗೊಮ್ಮೆ ಮಾತ್ರ ದೇವಿಯ ಮುಖವನ್ನು ಅನಾವರಣಗೊಳಿಸಲಾಗುತ್ತದೆ ಎಂದು ವೀಡಿಯೊದೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಇದು ನಿಜ ಎಂದು ಭಾವಿಸಿದ ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದಾರೆ.

Fact Check : ಇನ್ನು ಈ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಈ ದೇವಾಲಯವು 51 ‘ಶಕ್ತಿ ಪೀಠ’ಗಳಲ್ಲಿ ಒಂದಾಗಿದೆ, ಮತ್ತು ಈ ದೇವಾಲಯ ಕಾಮಾಖ್ಯ ದೇವಿಗೆ ಸಮರ್ಪಿತವಾಗಿದೆ. ಆದಾಗ್ಯೂ, ಇನ್ನು ಇಲ್ಲಿ ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ದೇವಾಲಯದಲ್ಲಿ ಯಾವುದೇ ವಿಗ್ರಹ ಇಲ್ಲ ಎಂಬುವುದು ಗಮನ ಸೆಳೆದಿದ್ದು ಇಲ್ಲಿ ಯೋನಿ-ಕುಂಡವನ್ನು ಪೂಜಿಸಲಾಗುತ್ತದೆ.

ಕಾಮಾಖ್ಯ ದೇವಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಭೂಪೇಶ್ ಶರ್ಮಾ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇವಾಲಯವು ವಿಗ್ರಹವನ್ನು ಹೊಂದಿಲ್ಲ ಎಂದು ದೃಢಪಡಿಸಿದರು. ಹಾಗಾಗಿ ಮಾಖ್ಯ ದೇವಿ ದೇವಸ್ಥಾನದಲ್ಲಿ ಪ್ರತಿ 15 ವರ್ಷಗಳಿಗೊಮ್ಮೆ ವಿಗ್ರಹದ ಮುಖವನ್ನು ತೋರಿಸಲಾಗುತ್ತದೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ.


ಇದನ್ನೂ ಓದಿ ; ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಪ್ರಮಾಣ ವಚನ ತೆಗೆದುಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *