ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ವ್ಯಾಪಕವಾಗಿ ಸುಳ್ಳು ಸುದ್ದಿಗಳನ್ನ ಹೆಚ್ಚು ಹೆಚ್ಚು ಹಬ್ಬಿಸಲಾಗುತ್ತಿದೆ.. ಇದೀಗ ಇಂತಹದ್ದೇ ಸುಳ್ಳು ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸದ್ದು ಮಾಡುತ್ತಿದೆ
ಆ ಸುಳ್ಳು ಸುದ್ದಿಯಲ್ಲಿ “ಬಡ ರೈತನನ್ನು ಕಾಲಲ್ಲಿ ಒದ್ದ ಕಾಂಗ್ರೆಸ್ ಶಾಸಕ, ಕಾಂಗ್ರೆಸ್‌ಗೆ ಓಟು ಹಾಕಿ ಮೋಸ ಹೋದ ಜನ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೇ ರಾಜ್ಯಕ್ಕೆ ಅಪಾಯ” ಎಂಬ ರೀತಿಯ ಹಲವು ತಲೆ ಬರಹಗಳೊಂದಿಗೆ ಒಂದೇ ವಿಡಿಯೋವನ್ನ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಇದು ರಾಜ್ಯ ಕಾಂಗ್ರೆಸ್ ಶಾಸಕರಾ ಎಂದು ಅಚ್ಚರಿಯನ್ನ ವ್ಯಕ್ತ ಪಡಿಸುತ್ತಿದ್ದಾರೆ .
ಇನ್ನು ಈ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನ ಪರಿಶೀಲನೆ ನಡೆಸಿದಾಗ, ಇದು 2021 ರಲ್ಲಿ ರಾಜಸ್ತಾನದ ಜೈಪುರದಲ್ಲಿ ನಡೆದ ಘಟನೆಯಾಗಿದ್ದು, ಇತ್ತೀಚೆಗೆ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಆದ್ರೆ ಸಾಕಷ್ಟು ಮಂದಿ ಈ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.
ರಾಜಸ್ತಾನದ ಜೈಪುರದಲ್ಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದುರಿ ಬಳಿ ಬಂದ ರೈತನ ಟರ್ಬನ್‌ಗೆ ಕಾಲಿನಿಂದ ಒದ್ದ ಶಾಸಕ ರೈತನನ್ನು ಹೊರ ಹೋಗುವಂತೆ ಹೇಳಿದ್ದಾರೆ. ಇದೀಗ ಇದೇ ವಿಡಿಯೋ ರಾಜಸ್ತಾನದ ಕಾಂಗ್ರೆಸ್‌ಗೆ ಸಂಕಷ್ಟವನ್ನ ತಂದೊಡ್ಡಿದೆ. ಹಾಗಾಗಿ ಈ ಮೇಲಿನ ಆಪಾದನೆ ಸುಳ್ಳಾಗಿದೆ
Fact Check: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.