Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ

ಹಮಾಸ್ ನವರು ಇಸ್ರೇಲ್ ದಾಳಿಯಿಂದ ಸತ್ತ ಪ್ಯಾಲೆಸ್ಟೈನ್ ಮಗು ಎಂದು ಹರಿಬಿಟ್ಟ ವಿಡಿಯೋದಲ್ಲಿರುವುದು ಬೊಂಬೆ. ಮಗುವಿನ ಗೊಂಬೆ! ನಿಜವಾದ ಮಗುವಿನ ಮೃತದೇಹವಲ್ಲ ಎಂದು ಪ್ರತಿಪಾದಿಸಿ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌: ಅಕ್ಟೋಬರ್ 12, 2023ರಂದು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆರನೇ ದಿನ, ಇಸ್ರೇಲ್ ಗಾಜಾ ನಗರದ ಮೇಲೆ ವೈಮಾನಿಕ ದಾಳಿಯನ್ನು(ಏರ್ ಸ್ರೈಕ್) ನಡೆಸಿತು. ಇದೇ ಸಂದರ್ಭದಲ್ಲಿ ಬಲಿಯಾದ ಸಂತ್ರಸ್ತರ ಅಂತ್ಯಕ್ರಿಯೆಯ ಸಮಯದಲ್ಲಿ ಅಲ್-ಶಿಫಾ ಆಸ್ಪತ್ರೆಯ ಶವಾಗಾರದ ಹೊರಗೆ ಪ್ಯಾಲೆಸ್ಟೈನ್ ವ್ಯಕ್ತಿಯೊಬ್ಬರು ಒಮರ್ ಬಿಲಾಲ್ ಅಲ್-ಬನ್ನಾ ಎಂಬ ತನ್ನ ನಾಲ್ಕು ವರ್ಷದ ಮಗುವಿನ ಮೃತದೇಹ ಹಿಡಿದು ರೋಧಿಸುವ ವಿಡಿಯೋ ಇದಾಗಿದೆ.

ಇದರ ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿದ್ದು ಎಲ್ಲರೂ ನೋಡಬಹುದಾಗಿದೆ. ಮತ್ತು ದಾಳಿಯಲ್ಲಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವುದು, ಬಲಿಯಾದ ಮಕ್ಕಳ ಶವಗಳನ್ನು ಹಿಡಿದು ಅಳುವ ಮನಕಲಕುವ ದೃಶ್ಯವನ್ನು ಗಮನಿಸಬಹುದು. ಆದ್ದರಿಂದ ಪ್ಯಾಲೆಸ್ಟೈನ್ ಮಗುವಿನ ಮೃತದೇಹ ಎಂದು ಬೊಂಬೆಯನ್ನು ತೋರಿಸಲಾಗುತ್ತಿದೆ ಎಂಬುದು ಸುಳ್ಳು.


ಇದನ್ನು ಓದಿ: ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕನ ವಿಡಿಯೋ ರಾಜಸ್ತಾನದ್ದು, ಕರ್ನಾಟಕದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *