ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ. ಇಂತಹ ಸುಳ್ಳು ಸುದ್ದಿಗಳು ಜನರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿವೆ.
ಅಂತಹ ಸುಳ್ಳು ಸುದ್ದಿಯಲ್ಲಿ “ಡಿವ್ ಕಂಪನಿಯ ನೀರು ಅಪಾಯಕಾರಿಯಾಗಿದೆ. ಈ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ದಯವಿಟ್ಟು ಈ ಕಂಪನಿಯ ಬಾಟಲಿ ನೀರನ್ನು ಯಾರೂ ಕುಡಿಯಬೇಡಿ.” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.
Fact Check : ಅಸಲಿಗೆ ಈ ಸುದ್ದಿಯ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಕಂಪನಿಯ ಬಾಟಲ್ ನೀರಿನ ಕುರಿತು ಹಲವು ವರ್ಷಗಳಿಂದ ಇದೇ ರೀತಿಯಾದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ಕಂಪನಿ 2005 ರಿಂದ ನೈಜೀರಿಯಾದಲ್ಲಿ ‘ಡ್ಯೂ’ ಬಾಟಲ್ ನೀರನ್ನು ಮಾರಲು ನೋಂದಾಯಿಸಲಾಗಿದೆ ಮತ್ತು ಈ ನೀರಿನ ಸೇವನೆಗೆ ಸಂಬಂಧಿಸಿದಂತೆ ಯಾವುದೇ ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿಲ್ಲ ಎಂದು NAFDAC ಪ್ರತಿಕ್ರಿಯಿಸಿದೆ.
ಹಾಗೇಯೆ ಈ ಕಂಪನಿಯ ಬಾಟಲ್ ನೀರಿನ ಕುರಿತು ಸಾಕಷ್ಟು ಫ್ಯಾಕ್ಟ್ ಚೆಕ್ ಮಾಧ್ಯಮಗಳು ಸತ್ಯ ಶೋಧನೆಯನ್ನ ನಡೆಸಿದ್ದು. ಅವವುಗಳು ಕೂಡ ಡೀವ್ ಕಂಪನಿಯ ಬಾಟಲ್ ನೀರು ಕುಡಿದು ಸಾವನ್ನಪ್ಪಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಇದೊಂದು ಸುಳ್ಳು ವರದಿ ಎಂದು ಸ್ಪಷ್ಟ ಪಡಿಸಿವೆ.
ಇದನ್ನೂ ಓದಿ : Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.