ಇಸ್ಲಾಮಿಕ್ ಸ್ಟೇಟ್ ತೀವ್ರವಾದಿ ಗುಂಪುಗಳ ಅಟ್ಟಹಾಸ ಹಲವು ದೇಶಗಳಲ್ಲಿ ಜನ ಸಾಮಾನ್ಯರನ್ನ ನಲುಗುವಂತೆ ಮಾಡಿವೆ. ಇದೀಗ ಇದೇ ಐಸಿಸ್ ಗುಂಪುಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಸಾಕಷ್ಟು ಮಂದಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಹಬ್ಬಿಸಲಾಗುತ್ತಿದೆ.
ಇದಕ್ಕೆ ಸಂಬಂಧ ಪಟ್ಟ ಹಾಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಆ ವಿಡಿಯೋದ ತಲೆ ಬರಹದಲ್ಲಿ “ಇತ್ತೀಚೆಗೆ ಇರಾಕ್‌ನಲ್ಲಿ ತೀವ್ರವಾದಿ ಇಸ್ಲಾಮಿಕ್ ಗುಂಪುಗಳು ಕ್ರಿಶ್ಚಿಯನ್ನರನ್ನು ತಲೆಕಡಿದು ಕ್ರೂರವಾಗಿ ಗಲ್ಲಿಗೇರಿಸುತ್ತಿದೆ. ಆ ಮೂಲಕ ಕ್ರಿಶ್ಚಿಯನ್ನ ನರಮೇಧ ಮಾಡುತ್ತಿದೆ.” ಎಂದು ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ವೈರಲ್ ಆಗಿರುವ ವಿಡಿಯೋ 2014ರದ್ದಾಗಿದೆ. ಸಿರಿಯಾದ ಅಲೆಪ್ಪೊ ಗವರ್ನೇಟ್‌ನ ಅಲ್-ಬಾಬ್ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಸಿರಿಯನ್ ಸುನ್ನಿಗಳನ್ನು ಬಶರ್ ಅಲ್ ಅಸ್ಸಾದ್ಗೆ ನಿಷ್ಠರಾಗಿರುವ ಸಿರಿಯನ್ ಸೇನೆಗೆ ಸೇರಲು ಬಯಸುತ್ತಾರೆ ಎಂದು ಆರೋಪಿಸಿ ಹತ್ಯೆ ಮಾಡುತ್ತಾರೆ. ಹಾಗಾಗಿ ಹತ್ಯೆಗೊಳಗಾದವರು ಸಿರಿಯನ್ ಸುನ್ನಿ ಮುಸಲ್ಮಾನರೇ ಹೊರತು ಕ್ರಿಶ್ಚಿಯನ್ ಸಮುದಾಯದವರಲ್ಲ
ಹೀಗಾಗಿ ಇಸ್ಲಾಮಿಕ್ ಗುಂಪು ಇತ್ತೀಚೆಗೆ ಕ್ರೈಸ್ತರನ್ನು ಸಮೂಹಿಕವಾಗಿ ಹತ್ಯೆ ಮಾಡಿದೆ ಎಂಬುದು ಸುಳ್ಳಿನಿಂದ ಕೂಡಿದ ಆರೋಪವಾಗಿದೆ. ಮತ್ತು ಇಂತಹ ವಿಡಿಯೋಗಳನ್ನು ಶೇರ್ ಮಾಡುವಾಗ ಎಚ್ಚರ ವಹಿಸಿ..
ಇದನ್ನೂ ಓದಿ : ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.