ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್‌ ಬೆಂಬಲದೊಂದಿಗೆ ಭಯೋತ್ಪಾದಕರಾದ ಹಮಾಸರನ್ನು ಬೆಂಬಲಿಸಿ ಕೇರಳದಲ್ಲಿ ಬೃಹತ್ ರ್ಯಾಲಿಯೊಂದು ನಡೆದಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲೋ, ಪ್ಯಾಲೆಸ್ಟೈನ್‌ನಲ್ಲೋ ಅಲ್ಲ ದೇವರ ನಾಡು ಕೇರಳದಲ್ಲಿ.  ಎಂಬ ತಲೆಬರಹದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಫ್ಯಾಕ್ಟ್‌ಚೆಕ್: ಅಕ್ಟೋಬರ್ 26ರಂದು ಕೇರಳದ ಕೋಜಿಕೊಡೆ ತೀರದಲ್ಲಿ ನಡೆದ ಪ್ಯಾಲಸ್ಟೈನ್ ಪರವಾಗಿ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಶಶಿ ತರೂರ್ ಹಮಾಸ್‌ ಮತ್ತು ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದ್ದಾರೆ. ಇಬ್ಬರ ನಡೆಗಳು ಕೂಡ ನೂರಾರು ನಾಗರೀಕರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಶಶಿ ತರೂರ್ ಪ್ಯಾಲಸ್ಟೈನ್‌ಗೆ ಬೆಂಬಲ ಸೂಚಿಸಿದ್ದಾರೆಯೇ ಹೊರತು ಹಮಾಸ್‌ರನ್ನು ಅಲ್ಲ.

ಈ ಕಾರ್ಯಕ್ರಮವನ್ನು ವರದಿ ಮಾಡಿರುವ ದಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಮನೋರಮಾ ಆನ್ಲೈನ್, ಶಶಿ ತರೂರ್ ಹಮಾಸ್‌ರವರನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆ ಎಂದು ವರದಿ ಮಾಡಿವೆ. ತಮ್ಮ ಭಾಷಣದಲ್ಲಿ ಅವರು “ಅಕ್ಟೋಬರ್ 7 ರಂದು ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,400 ಜನರನ್ನು ಕೊಂದರು ಮತ್ತು 200 ಒತ್ತೆಯಾಳುಗಳನ್ನು  ಸೆರೆಹಿಡಿದರು. ಇದಕ್ಕೆ ಉತ್ತರವಾಗಿ, ಇಸ್ರೇಲ್ ಇದುವರೆಗೆ 6,000 ಜನರನ್ನು ಕೊಂದಿದೆ. ಅವರು ಗಾಜಾಗೆ ಆಹಾರ, ನೀರು ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಿದ್ದಾರೆ. ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಲಾಗಿದೆ. ಪ್ರತಿದಿನ ಮುಗ್ಧ ಜನರನ್ನು ಕೊಲ್ಲಲಾಗುತ್ತಿದೆ. ಮುಗ್ಧ ನಾಗರಿಕರನ್ನು ರಕ್ಷಿಸುವ ನಿಬಂಧನೆಗಳನ್ನು ಹೊಂದಿರುವ ಯುದ್ಧ ಕಾನೂನುಗಳು ಮತ್ತು ಜಿನೀವಾ ಒಪ್ಪಂದಗಳ ಉಲ್ಲಂಘನೆಯಾಗಿದೆ.” ಎಂದರು. ಮುಂದುವರೆದು ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯಿಂದ ಭಯೋತ್ಪಾದಕ ಕೃತ್ಯಗಳು ನಡೆದಿವೆ ಎಂದು ಹೇಳಿದ್ದಾರೆ.


ಇದನ್ನು ಓದಿ: Fact Check : ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಬಿಜೆಪಿ ಸರ್ಕಾರದ ಯೋಜನೆ ನಿಲ್ಲಿಸುತ್ತೇನೆ ಎಂದು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *