ಇಸ್ರೇಲ್ ಹಮಾಸ್ ಮೇಲೆ ಪ್ರತಿದಾಳಿ ಆರಂಭ ಮಾಡಿದ ನಂತರದಲ್ಲಿ ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಈ ಮಧೈ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದ್ದು ಇಸ್ರೇಲ್ ಹಾಗೂ ಹಮಾಸ್ ವಿರೋಧಿ ಸುಳ್ಳು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆ ಪೋಸ್ಟ್‌ಗಳಲ್ಲಿ ಪ್ರಮುಖವಾಗಿ ಎರಡೂ ದೇಶಗಳ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಸುದ್ದಿಯನ್ನು ಕೂಡ ಹರಿಬಿಡಲಾಗ್ತಾ ಇದೆ.
ಅದರಲ್ಲೂ ಪ್ರಮುಖವಾಗಿ ಇಸ್ರೇಲ್‌ಗೆ ಸಂಬಂಧ ಪಡದ ಹಲವು ಕಂಪನಿಗಳನ್ನು ಗುರಿಯಾಗಿಸಿಕೊಂಡು “ಇವು ಇಸ್ರೇಲಿ ಕಂಪನಿಳು, ನೀವು ಇವುಗಳ ಉತ್ಪನ್ನಗಳನ್ನು ತೆಗೆದುಕೊಂಡರೆ ಆ ಮೂಲಕ ಇಸ್ರೇಲ್ ಹಮಾಸ್ ಮೇಲೆ ದಾಳಿ ನಡೆಸಲು ನೀವು ಪರೋಕ್ಷವಾಗಿ ಇಸ್ರೇಲ್‌ಗೆ ಬೆಂಬಲಿಸಿದಂತೆ ಆಗುತ್ತದೆ ಹಾಗಾಗಿ ಇಂದೇ ನೀವು ಇಸ್ರೇಲ್‌ಗೆ ಬೆಂಬಲಿಸುವುದನ್ನು ನಿಲ್ಲಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸುದ್ದಿಯನ್ನು ಹರಿಬಿಡಲಾಗುತ್ತಿದೆ.
ಈ ಸುದ್ದಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಇದು ಶುದ್ದ ಸುಳ್ಳಿನಿಂದ ಕೂಡಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ಮ್ಯಾಗಿ, ಪೆಪ್ಸಿ, ಅಡಿಡಸ್ ಸೇರಿದ ಹಾಗೆ ಇನ್ನು ಹಲವು ಜಾಗತಿಕ ಮನ್ನಣೆ ಗಳಿಸಿದ್ದಂತಹ ಮತ್ತು ಬಹುಪಾಲು ಅಮೆರಿಕ ದೇಶದ ಕಂಪನಿಗಳ ಫೋಟೋಗಳನ್ನೇ ಹೆಚ್ಚು ಹೆಚ್ಚು ಶೇರ್ ಮಾಡಲಾಗುತ್ತಿದೆ.
ಆದರೆ ಇದರ ಬಗ್ಗೆ ತಿಳಿದುಕೊಳ್ಳದ ಕಿಡಿಗೇಡಿಗಳು ಬೇರೆ ಬೇರೆ ದೇಶದ ವಿವಿಧ ಕಂಪನಿಗಳ ಉತ್ಪನ್ನಗಳನ್ನೇ ಇಸ್ರೇಲ್‌ನ ಉತ್ಪಪನ್ನಗಳೆಂದು ಶೇರ್ ಮಾಡುತ್ತಿದ್ದಾರೆ. ಇದರಿಂದ ಆ ಕಂಪನಿಗಳಿಗೆ ನಷ್ಟ ಉಂಟಾಗದೆ ಇದ್ದರು ವ್ಯಾಪಕವಾಗದ ನಕರಾತ್ಮಕ ಸಮಸ್ಯೆಗಳನ್ನು ಎದುರಿಸುವ ಹಾಗಾಗಿ. ಇನ್ನು ಈ ಕುರಿತು ಯಾವುದೇ ಕಂಪನಿಗಳು ಅಧಿಕೃತ ಹೇಳಿಕೆಯನ್ನು ನೀಡದೆ ಇದ್ದರು ಇದೊಂದು ನಕಲಿ ಜಾಹಿರಾತು ಎಂಬುದು ತಿಳಿಯೋದ್ರಲ್ಲ ಯಾವುದೇ ರೀತಿಯಾದ ಅನುಮಾನವಿಲ್ಲ.