Fact Check : Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂದಲ್ಲ

Sir ಎಂಬ ಪದದ ನಿಜವಾದ ಅರ್ಥ Slave I Remember ಅಂದರೆ ನಾನು ಗುಲಾಮ ಮರೆಯದಿರಿ ಎಂಬ ಅರ್ಥವಿದೆ. ಬ್ರೀಟಿಷರು ತಮ್ಮ ಆಡಳಿತದ ಕಾಲದಲ್ಲಿ ಭಾರತೀಯರನ್ನು ಹೀಯಾಳಿಸುವ ಸಲುವಾಗಿ ಹೀಗೆ ಬಳಸುವಂತೆ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿರುವ  ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದೆ.

ಈ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ Sir ಎಂಬುದರ ಪೂರ್ಣ ರೂಪ Slave I Remember ಎಂಬುದೇ ಅಥವಾ Slave I Remain ಎಂಬುದೇ ಎಂದು ಅಂತರ್ಜಾಲದಲ್ಲಿ ಹುಡುಕಿದಾಗಿದೆ. ಈ ವೇಳೆ Sir ಎಂಬ ಪರಿಪೂರ್ಣ ಅರ್ಥವಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ . ಕೇಂಬ್ರಿಡ್ಜ್ ಡಿಕ್ಷನರಿಯ ಪ್ರಕಾರ sir ಎಂಬುದು ನಾಮಪದವಾಗಿದ್ದು ಇದನ್ನು ‘ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಔಪಚಾರಿಕ ಮತ್ತು ಸಭ್ಯ ವಿಧಾನವಾಗಿ ಬಳಸಲಾಗುತ್ತದೆ, ವಿಶೇಷವಾಗಿ ನಿಮಗೆ ಸೇವೆಯನ್ನು ಒದಗಿಸುತ್ತಿರುವ ಅಥವಾ ಅಧಿಕಾರದ ಸ್ಥಾನದಲ್ಲಿರುವವರಿಗೆ ಇದನ್ನು ಬಳಸಲಾಗುತ್ತದೆ’. ಎಂದು ತಿಳಿದು ಬಂದಿದೆ

ಇನ್ನು ಈ ಕುರಿತು The Britannica Dictionary ಮತ್ತು Merriam webster ಗಳಲ್ಲೂ ಇದೇ ರೀತಿಯಾದ ಉಲ್ಲೇಖವಿದ್ದು ಈ ಎರಡೂ ಪ್ರಮುಖ ಅಂತರ್ಜಾಲ ವೆಬ್‌ಸೈಟ್‌ಗಳಲ್ಲಿ ಕೂಡ Sir ಎಂಬ ಪದಕ್ಕೆ ಔಪಚಾರಿಕ ಮತ್ತು ಸಭ್ಯ ವಿಧಾನವಾಗಿ ಬಳಸುವ ಪದ ಎಂಬ ಅರ್ಥ ಬರುವ ಹಾಗೆ ಮಾಹಿತಿ ದೊರಕುತ್ತದೆ

ಇಂಗ್ಲಿಷ್ ಪದಗಳ ಮೂಲವನ್ನು ವಿವರಿಸುವ etymonline.com ಎಂಬ ವೆಬ್‌ಸೈಟ್ ಪ್ರಕಾರ Sir ಪದವು ಹಳೆಯ ಫ್ರೆಂಚ್ ಪದ Sireನಿಂದ ಹುಟ್ಟಿಕೊಂಡಿದೆ. Sire ಎಂಬ ಲ್ಯಾಟಿನ್ ಪದ ಸೀನಿಯರ್ ನಿಂದ ಹುಟ್ಟಿಕೊಂಡಿದೆ. ಅದು ಯಾವುದೇ ಪದದ ಸಂಕ್ಷಿಪ್ತ ರೂಪವಲ್ಲ ಎಂದು ಆ ವೆಬ್‌ಸೈಟ್ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ Sir ಎಂಬುದರ ಪೂರ್ಣ ರೂಪ Slave I Remember ಎಂಬುದಲ್ಲ. ಅದು ಹಳೆದ ಫ್ರೆಂಚ್ ಪದ Sire ನಿಂದ ಉತ್ಪತ್ತಿಯಾಗಿದೆ.


ಇದನ್ನೂ ಓದಿ : Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *