ಪಂಚರಾಜ್ಯಗಳ ಚುನಾವಣೆಯ ಈ ಸಂದರ್ಭದಲ್ಲಿ ಆಯಾ ರಾಜ್ಯಗಳನ್ನು ಆಧರಿಸಿ ಎರಡೂ ರಾಷ್ಟ್ರೀಯ ಪಕ್ಷಗಳು ಅನೇಕ ಯೋಜನೆಯನ್ನು ಘೋಷಿಸಿವೆ. ಈ ಯೋಜನೆಗಳ ಕುರಿತು ಹಲವು ಪರ-ವಿರೋಧಗಳು ಮತ್ತು ಅಪಪ್ರಚಾರದ ಸುಳ್ಳುಗಳು ಹರಿದಾಡುತ್ತಿವೆ. ಇಂತಹದ್ದೇ ಒಂದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಜನರು ಕಾಂಗ್ರೆಸ್‌ಗೆ ಮತ ಚಲಾಯಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ಮೂರು ತಿಂಗಳ ಉಚಿತ ರೀಚಾರ್ಜ್” ನೀಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಲಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಈ ಹಿಂದೆ ಪ್ರಧಾನಿ ಮೋದಿಯವರು ಮೂರು ತಿಂಗಳ ಉಚಿತ ರಿಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿತ್ತು. ಈಗ ಅದೇ ಸುಳ್ಳನ್ನು ರಾಹುಲ್ ಗಾಂಧಿಯವರ ಫೋಟೋ ಮತ್ತು ಕಾಂಗ್ರೆಸ್‌ನ ಹಸ್ತದ ಚಿಹ್ನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ಈ ರೀತಿಯ ಯಾವುದೇ ಯೋಜನೆಯನ್ನು ಘೋಷಿಸಿಲ್ಲ.
ಈ ಹಿಂದೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ಇದೇ ಸುಳ್ಳನ್ನು PIB (Press Information Bureau) ಫ್ಯಾಕ್ಟ್‌ಚೆಕ್ ನಡೆಸಿ ಈ ಪ್ರತಿಪಾದನೆ ಸುಳ್ಳು ಎಂದು ಪ್ರಕಟಿಸಿದೆ. ಈಗ ಅದೇ ಬರಹವನ್ನು ಬಳಸಿ ಮೋದಿಯವರ ಬದಲಿಗೆ ರಾಹುಲ್‌ರವರ ಪೋಟೋ ಬಳಸಿ ಉಚಿತ ರಿಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಸುಳ್ಳನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: Fact Check : Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.