Fact Check : ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಪೇಪರ್‌ ಕಟಿಂಗ್‌ವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ‘ಸೋನಿಯಾ ಗಾಂಧಿ ಹಿಂದೂಗಳನ್ನು ದ್ವೇಷಿಸುತ್ತಾರೆ’ ಎಂಬ ಶೀರ್ಷಿಕೆ ಇದ್ದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುಸ್ತಕ ದಿ ಕೊಯಲಿಷನ್ ಇಯರ್ಸ್ 1996-2012 ಪುಸ್ತಕದಲ್ಲಿ ಸೋನಿಯಾ ಗಾಂಧಿ ಹಿಂದೂ ವಿರೊಧಿ ಎಂದು ಬರೆಯಲಾಗಿದೆ.

ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಹಾಗಾಗಿ ಈ  ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಸಿಕ್ಕ ಮಾಹಿತಿ ಬೇರೆಯದ್ದೇ ಆಗಿದೆ.

ಅಸಲಿಗೆ ಪೇಪರ್‌ ಕಟ್ಟಿಂಗ್‌ನಲ್ಲಿ ಉಲ್ಲೇಖಿಸಲಾದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಕೊಯಲಿಷನ್ ಇಯರ್ಸ್ 1996-2012 ಪುಸ್ತಕದ ಪುಟ ಸಂಖ್ಯೆ 209 ರಲ್ಲಿ ಈ ರೀತಿಯ ಘಟನೆಯೊಂದು ಉಲ್ಲೇಖವಾಗಿದ್ದು ಅದರಲ್ಲಿ ನವೆಂಬರ್ 12, 2004 ರಂದು ಕಂಚಿಯ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಬಂಧನ ಬಗ್ಗೆ ಬರೆಯಲಾಗಿದೆ

ಪ್ರಕರಣವೊಂದಕ್ಕೆ ಸಂಬಂಧಿಸಿದ್ದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಬಂಧನವಾಗಿರುತ್ತದೆ. ಇದಕ್ಕೆ ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್‌ ಮುಖರ್ಜಿ ಅವರು ಆಕ್ರೋಶವನ್ನ ಹೊರ ಹಾಕಿದ್ದರು ಮತ್ತು ಅನ್ಯಧರ್ಮಿಯರ ಹಬ್ಬದ ಸಂದರ್ಭದಲ್ಲೂ ಇದೇ ರೀತಿಯಾಗಿ ನೀವು ಮಾಡುತ್ತಿದ್ದರೆ ಎಂದು ಸಂಸದೀಯ ಸಭೆಯಲ್ಲಿ ಪ್ರಶ್ನಿಸಿದ ಬಗ್ಗೆ ಮತ್ತು ಜಾಮೀನಿನ ಮೇಲೆ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಬಿಡುಗಡೆಯ ವಿಚಾರದ ಬಗ್ಗೆ ಉಲ್ಲೇಖವಿದೆ

ಆದರೆ ಆ ಪುಸ್ತಕದಲ್ಲಿ ಎಲ್ಲಿಯೂ  ಸೋನಿಯಾ ಗಾಂಧಿ ಅವರು ಹಿಂದೂ ವಿರೋಧಿ ಎಂದು ಉಲ್ಲೇಖಿಸಿರುವ ವಾಕ್ಯ ಪತ್ತೆಯಾಗಿಲ್ಲ. ಹಾಗಾಗಿ ಪೇಪರ್‌ ಕಟ್ಟಿಂಗ್‌ನಲ್ಲಿ ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಪ್ರಣಬ್‌ ಮುಖರ್ಜಿಯವರು ಬರೆದಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ ಸಂಗತಿಯಾಗಿದೆ.


ಇದನ್ನೂ ಓದಿ :  ರಾಹುಲ್ ಗಾಂಧಿಯವರು ಮೂರು ತಿಂಗಳ ಉಚಿತ ರಿಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *