Fact Check : ದಸರಾ ಕಲಾವಿದರಿಗೆ ಸಹಿ ವ್ಯತ್ಯಾಸದಿಂದ ಚೆಕ್‌ಬೌನ್ಸ್‌ ಆಗಿದೆಯೇ ಹೊರತು ನಾಡಹಬ್ಬದಲ್ಲಿ ಹಗರಣವಾಗಿಲ್ಲ

ರಾಜ್ಯ ಸರ್ಕಾರವನ್ನು ಟೀಕಿಸುವ ಬರದಲ್ಲಿ ಸುಳ್ಳು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ವೈರಲ್‌ ಆಗಿದೆ. ಅದರಲ್ಲಿ “ಥೂ ನಿಮ್ಮ ಸರ್ಕಾರಕ್ಕೆ !! ದಸರಾ ಕಲಾವಿದರಿಗೆ ಕೊಟ್ಟ ಚೆಕ್‌ ಬೌನ್ಸ್‌ ಆಗಿದ್ದಲ್ಲದೆ ಅವರಿಗೆ ದಂಡ ಹಾಕಲಾಗಿದೆ!! ನಾಡಹಬ್ಬದಲ್ಲೂ ಹಗರಣ ಮಾಡಿದ ಕಾಂಗ್ರೆಸ್ಸನ್ನು ಖಂಡಿಸಲು ಶೇರ್‌ ಮಾಡಿ” ಎಂದು ಬರೆದುಕೊಳ್ಳಲಾಗಿದೆ.

ಇದರ ಕುರಿತು ಪರಿಶೀಲನೆ ನಡೆಸಿದಾಗ ದಸರಾ ಅಂಗವಾಗಿ ಖರ್ಚು ವೆಚ್ಚದ ಲೆಕ್ಕಕ್ಕಾಗಿ ಆಯಾ ಉಪಸಮಿತಿಗಳ ಹೆಸರಿನಲ್ಲಿಯೇ ಬ್ಯಾಂಕ್‌ ಖಾತೆ ತೆರೆದು ಆ ಮೂಲಕವೇ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್‌ ನೀಡಲಾಗುತ್ತಿದೆ. ಉಪಸಮಿತಿಗಳ ಕಾರ್ಯಧ್ಯಕ್ಷರು, ಕಾರ್ಯದರ್ಶಿಗಳು ಈ ಖಾತೆಗಳನ್ನು ನಿರ್ವಹಿಸುತ್ತಾರೆ. ಈ ಕುರಿತು ಪ್ರಜಾವಾಣಿ ಕೂಡ ವರದಿಯನ್ನ ಮಾಡಿದೆ

ಈ ಬಾರಿ ದಸರಾ ಅಂಗವಾಗಿ 18 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಉಪಸಮಿತಿಗೆ ಈ ವರ್ಷ ಕಾರ್ಯಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಬದಲಾಗಿದ್ದರು, ಅವರ ಸಹಿಗಳನ್ನ ಬ್ಯಾಂಕ್‌ ಖಾತೆಗೆ ಅಪ್‌ಡೇಟ್‌ ಮಾಡದ ಕಾರಾಣ ದಸರಾ ಕಲಾವಿದರ ಚೆಕ್‌ ಬೌನ್ಸ್‌ ಆಗಿದೆಯೇ ಹೊರತು ಹಗರಣ ನಡೆದಿದೆ ಎಂಬುದು ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : ಹಮಾಸ್‌ 5 ಲಕ್ಷ, ನಾವು 25 ಕೋಟಿ ಶೀರ್ಷಿಕೆಯಲ್ಲಿ ಫೇಕ್ ನ್ಯೂಸ್: 2019ರ ವಿಡಿಯೋ ಪ್ರಕಟಿಸಿದ ಸುವರ್ಣ ನ್ಯೂಸ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *